ನವದೆಹಲಿ, ಮೇ 12, 2020: ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಕುವೈಟ್‌ನಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರನ್ನು ತಾಯ್ನಾಡಿಗೆ ಕರೆ ತರಲು ಕೇಂದ್ರ ಸರ್ಕಾರ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ದೆಹ್ಲನ್ ಬಾಖವಿ ಒತ್ತಾಯಿಸಿದ್ದಾರೆ. ಏಪ್ರಿಲ್ 30 ರವರೆಗೆ ಯಾವುದೇ ದಂಡವಿಲ್ಲದೆ ಕೆಲಸ ಮಾಡುವ ವೀಸಾ ಅವಧಿ ಮುಗಿದಿರುವ ವಲಸಿಗ ಕಾರ್ಮಿಕರಿಗೆ ಕುವೈಟ್ ಕ್ಷಮಾದಾನ ಘೋಷಿಸಿತ್ತು. ದುರದೃಷ್ಟವಶಾತ್, ತುರ್ತು ನಿರ್ಗಮನ ಪಾಸ್‌ಪೋರ್ಟ್‌ಗಾಗಿ ಸಲ್ಲಿಸಲಾದ ಹೆಚ್ಚಿನ ಅರ್ಜಿಗಳನ್ನು ಕುವೈತ್‌ನ ಭಾರತೀಯ ರಾಯಭಾರ ಕಚೇರಿಯು ಸಮಯಕ್ಕೆ ಸರಿಯಾಗಿ ಪರಿಗಣಿಸಿ ವಿಲೇವಾರಿ ಮಾಡಿಲ್ಲ. ಇದರಿಂದಾಗಿ ಭಾರತೀಯ ಕಾರ್ಮಿಕರಿಗೆ ಕ್ಷಮಾದಾನ ಸೌಲಭ್ಯ ಪಡೆಯಲು ಮತ್ತು ಕುವೈತ್ ಅನ್ನು ಕಾನೂನುಬದ್ಧವಾಗಿ ತೊರೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಕಾರ್ಮಿಕರು ಕೆಲಸದ ವೀಸಾವನ್ನು ಹೊಂದಿರದ ಕಾರಣ ಅವರು ತಮ್ಮ ಉದ್ಯೋಗ ಮತ್ತು ಆದಾಯವನ್ನು ಕಳೆದುಕೊಂಡಿದ್ದು, ಬಾಡಿಗೆಯನ್ನು ಸಹ ಪಾವತಿಸದ ಕಾರಣ ಅವರನ್ನು ತಮ್ಮ ಮನೆಗಳಿಂದ ಖಾಲಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ರಾಯಭಾರ ಕಚೇರಿಯ ಸೂಕ್ತ ದಾಖಲೆಗಳ ಕೊರತೆಯಿಂದಾಗಿ, “ಅಕ್ರಮ ವಲಸಿಗರಿಗೆ” ಕುವೈತ್ ಸರ್ಕಾರ ಒದಗಿಸಿರುವ ಶಿಬಿರಗಳಲ್ಲಿ ನೆಲೆಸಲೂ ಅವರಿಗೆ ಅವಕಾಶವಿಲ್ಲವಾಗಿದ್ದು, ಇದರಿಂದಾಗಿ ಅವರು ತೆರೆದ ಮೈದಾನದಲ್ಲಿ ನೆಲೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರಿಗೆ ಆಹಾರ, ವಸತಿ ಮತ್ತು ಶೌಚಾಲಯ ಸೌಲಭ್ಯಗಳಿಲ್ಲದೆ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಮಧುಮೇಹ ಮತ್ತು ಹೃದಯ ರೋಗಿಗಳು ಕೂಡ ಇದ್ದು, ಅವರಿಗೆ ಸಮಯಕ್ಕೆ ಸರಿಯಾಗಿ ಔಷಧಿಗಳು ಸಹ ಸಿಗದೆ ಅವರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿಯ ಅಸಡ್ಡೆ ವರ್ತನೆಯಿಂದಾಗಿ, ಕ್ಷಮಾದಾನದ ಸೌಲಭ್ಯ ಬಳಸಿ ಊರಿಗೆ ಮರಳಲು ಸಾಧ್ಯವಾಗಿಲ್ಲ ಎಂದು ಅವರು ಬಾಖವಿ ಹೇಳಿದ್ದಾರೆ. ಈ ಅಸಹಾಯಕ ಭಾರತೀಯರನ್ನು ಕುವೈತ್‌ನ ಭಾರತೀಯ ಶಾಲೆಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ಮೂಲಕ ಮತ್ತು ವಾಪಸಾಗುವವರೆಗೂ ಆಹಾರ ಮತ್ತು ಔಷಧಿಗಳನ್ನು ಒದಗಿಸುವ ಮೂಲಕ ಕುವೈಟ್‌ನ ಭಾರತೀಯ ರಾಯಭಾರ ಕಚೇರಿಯನ್ನು ತಕ್ಷಣವೇ ಕಾರ್ಯಪ್ರವೃತರಾಗ ಬೇಕು. ಅಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಅಗತ್ಯವಾದ ಸಹಾಯ ದೊರೆಯುವಂತೆ ನೋಡಿಕೊಳ್ಳಬೇಕು ಮತ್ತು ಅವರನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರಲು ಕ್ರಮಕೈಗೊಳ್ಳಬೇಕು ಎಂದು ಬಾಖವಿ ಪ್ರಕಟಣೆಯಲ್ಲಿ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ