ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಭಾರತಕ್ಕೆ ಹಿಂದಿರುಗುವುದಕ್ಕಾಗಿ ವಿಮಾನಯಾನದ ವೇಳಾಪಟ್ಟಿಯನ್ನು ಕೇಂದ್ರಸರಕಾರ ಬಿಡುಗಡೆ ಮಾಡಿದ್ದು ಇದರಲ್ಲಿ ಅನಿವಾಸಿ ಕನ್ನಡಿಗರಿಗೆ ಭಾರೀ ದ್ರೋಹವೆಸಗಲಾಗಿದೆ. ಅನಿವಾಸಿ ಕನ್ನಡಿಗರು ಭಾರತಕ್ಕೆ ಮರಳಲು ವಿಮಾನಯಾನ ಸೌಲಭ್ಯವನ್ನು ಒದಗಿಸಬೇಕು ಎಂದು ವಿವಿಧ ಅನಿವಾಸಿ ಹಾಗೂ ದೇಶೀಯ ಸಂಘಟನೆಗಳು ನಿರಂತರವಾಗಿ ಸರಕಾರಗಳನ್ನು ಒತ್ತಾಯಿಸಿದ್ದರೂ ಅನಿವಾಸಿ ಕನ್ನಡಿಗರನ್ನು ಕೇಂದ್ರ ಸರಕಾರ ಸಂಪೂರ್ಣ ಕಡೆಗಣಿಸಿರುವುದು ವಿಶ್ವಾಸಘಾತಕವಲ್ಲದೇ ಬೇರೇನೂ ಅಲ್ಲ ಎಂದು ಎಸ್ಡಿಪಿಐ ಕರ್ನಾಟಕ, ಆತಂಕ ವ್ಯಕ್ತಪಡಿಸಿದೆ.
ಕೊಚ್ಚಿ, ಕೋಝಿಕೋಡ್, ತಿರುವನಂತಪುರಂ, ದೆಹಲಿ, ಹೈದರಾಬಾದ್, ಅಮದಾಬಾದ್, ಶ್ರೀನಗರ, ಚೆನ್ನೈ, ತಿರುಚಿ, ಲಕ್ನೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅನಿವಾಸಿ ಭಾರತೀಯರನ್ನು ಕರೆತರುವ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಈ ನಿಲ್ದಾಣಗಳಲ್ಲಿ ಆಯಾಯ ರಾಜ್ಯಗಳ ಅನಿವಾಸಿ ಭಾರತೀಯರು ಮಾತ್ರವೇ ಆಗಮಿಸಲು ಅವಕಾಶ ನೀಡಲಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್, ಅಮೆರಿಕ ಮತ್ತು ಸಿಂಗಾಪುರ ದಿಂದ ಮಾತ್ರವೇ ಅನಿವಾಸಿ ಕನ್ನಡಿಗರು ಆಗಮಿಸಲು ಅವಕಾಶವನ್ನು ಒದಗಿಸಲಾಗಿದೆ.
ಆದರೆ
ಗಲ್ಫ್ ರಾಜ್ಯಗಳಲ್ಲಿ ಕೆಲಸ ಮಾಡುವ ಗಲ್ಫ್ ಅನಿವಾಸಿ ಕನ್ನಡಿಗರನ್ನು ಕರೆತರಲು ವಿಮಾನ
ನಿಲ್ದಾಣ ಮತ್ತು ವಿಮಾನಯಾನದ ವೇಳಾಪಟ್ಟಿಯನ್ನು ಕೇಂದ್ರ ಸರಕಾರ ಯಾಕಾಗಿ ನಿಗದಿಪಡಿಸಿಲ್ಲ
ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ಇಷ್ಟೊಂದು ಬೃಹತ್ ಸಂಖ್ಯೆಯ ಅನಿವಾಸಿ
ಕನ್ನಡಿಗರನ್ನು ಕೇಂದ್ರ ಸರಕಾರ ಕಡೆಗಣಿಸಿದೆ ಎಂದರೆ ಅದು ಕರ್ನಾಟಕ ರಾಜ್ಯವನ್ನೇ
ತಿರಸ್ಕಾರದಿಂದ ನೋಡುತ್ತಿದೆ ಎಂದು ಅರ್ಥವಾಗಿದೆ. ಇಂತಹ ಮಲತಾಯಿ ಧೋರಣೆಯನ್ನು ಕೇಂದ್ರ
ಸರಕಾರ ಕೈಬಿಟ್ಟು ತಕ್ಷಣವೇ ದಕ್ಷ ಹಾಗೂ ಪ್ರಾಮಾಣಿಕ ನೀತಿಯನ್ನು ತೋರಬೇಕಾಗಿದೆ ಎಂದು
ಎಸ್ಡಿಪಿಐ ಎಚ್ಚರಿಸಿದೆ.
ಗಲ್ಫ್ ರಾಜ್ಯಗಳಲ್ಲಿ ಪ್ರಸಕ್ತ ಭಾರತಕ್ಕೆ ಹಿಂದಿರುಗಲು
ಕಾಯುತ್ತಿರುವ ಗರ್ಭಿಣಿಯರು, ರೋಗಿಗಳು ಹಾಗೂ ವೃದ್ಧರನ್ನು ಕರೆತರಲು ಸರಕಾರವು
ಆದ್ಯತೆಯಿಂದ ಪರಿಗಣಿಸಬೇಕು. ಉಳಿದಂತೆ ಇತರರನ್ನು ಹಂತ ಹಂತವಾಗಿ ಕರೆತರಬಹುದಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವೇ ಈರೀತಿಯ ಆಗಮನದ ವ್ಯವಸ್ಥೆ
ಮಾಡುವುದರಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯ ವಿದೆ.
ಗಲ್ಫ್ ಅನಿವಾಸಿ ಕನ್ನಡಿಗರ ಅಹವಾಲುಗಳಿಗೆ ಕರ್ನಾಟಕದ ವಿರೋಧಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯನವರು ಹಾಗೂ ವಿರೋಧ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಮುಂತಾದವರು ಸರಕಾರವನ್ನು ಯಾಕಾಗಿ ಈ ಬಗ್ಗೆ ಆಗ್ರಹಿಸುವುದಿಲ್ಲ ಎಂಬ ಪ್ರಶ್ನೆಗಳೂ ಎದ್ದಿವೆ. ಅನಿವಾಸಿ ಕನ್ನಡಿಗರ ಅಹವಾಲುಗಳಿಗೆ ಸದಾ ಸ್ಪಂದಿಸುತ್ತಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರವರು ಕೂಡ ತಕ್ಷಣವೇ ಸ್ಪಂದಿಸಿ ಬೇಕಾದಂತಹ ತುರ್ತು ಅಗತ್ಯವಿದೆ
ಕೇರಳ ಹಾಗೂ ಇತರ ರಾಜ್ಯಗಳಲ್ಲಿ ವಿದೇಶಗಳಿಂದ ಆಗಮಿಸುವ ಅನಿವಾಸಿಗಳಿಗೆ ಕ್ವಾರಂಟೈನ್ ವ್ಯವಸ್ಥೆಯನ್ನು ಸಂಘ-ಸಂಸ್ಥೆಗಳ ಸಹಕಾರದಿಂದ ಅಲ್ಲಿನ ರಾಜ್ಯ ಸರಕಾರಗಳು ಮಾಡಿವೆ. ಆದರೆ ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ಈವರೆಗೆ ಕಂಡುಬರುತ್ತಿಲ್ಲ. ರಾಜ್ಯ ಸರಕಾರ ಈ ಬಗ್ಗೆ ತಕ್ಷಣ ಕಾರ್ಯೋನ್ಮುಖವಾಗ ಬೇಕಾದ ಅವಶ್ಯಕತೆ ಇದೆ. ಎಸ್ಡಿಪಿಐ ಪಕ್ಷ ಹಾಗೂ ಅದರ ಅನಿವಾಸಿ ಕನ್ನಡಿಗರ ವೇದಿಕೆ ಇಂಡಿಯನ್ ಸೋಶಿಯಲ್ ಫೋರಂ ಕೂಡ ಈ ಬಗ್ಗೆ ಸರ್ಕಾರದೊಂದಿಗೆ ಸಮನ್ವಯ ಮತ್ತು ಸಹಕಾರ ನೀಡಲು ಸಿದ್ಧವಿದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.
ಹಾಗಾಗಿ ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅನಿವಾಸಿ ಗಲ್ಫ್ ಕನ್ನಡಿಗರನ್ನು ಆಗಮನಕ್ಕೆ ಬೇಕಾದಂತಹ ವಿಮಾನಯಾನ ಸೌಲಭ್ಯವನ್ನು ತಕ್ಷಣ ಆರಂಭಿಸಬೇಕು ಹಾಗೂ ವ್ಯವಸ್ಥೆಯ ಬಗ್ಗೆಯೂ ಚಿಂತಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…