ವಿದ್ಯುತ್ ತಿದ್ದುಪಡಿ ಮಸೂದೆಗೆ ಎಸ್‌ಡಿಪಿಐ ತೀವ್ರ ವಿರೋಧ ನವದೆಹಲಿ, ೧೦ ಮೇ ೨೦೨೦: ಕೇಂದ್ರ ಸರ್ಕಾರದ ಪ್ರಸ್ತಾಪಿತ ವಿದ್ಯುತ್ (ತಿದ್ದುಪಡಿ) ಮಸೂದೆ ೨೦೨೦ ಅನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‌ಡಿಪಿಐ

ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ತೀವ್ರವಾಗಿ ಖಂಡಿಸಿದ್ದಾರೆ. ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿರುವ ಈ ಮಸೂದೆ ಈ ದೇಶದ ಜನರಿಗೆ ದೊಡ್ಡ ಸವಾಲಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ. ದೇಶವು ಸಂಪೂರ್ಣ ಲಾಕ್‌ಡೌನ್ ಪರಿಸ್ಥಿತಿಯಲ್ಲಿರುವಾಗ, ಆಕ್ಷೇಪಣೆಗಳನ್ನು ಸಲ್ಲಿಸಲು ಕೇವಲ ಮೂರು ವಾರಗಳ ಕಾಲಾವಕಾಶ ನೀಡುವ ಮೂಲಕ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ತರಾತುರಿಯಲ್ಲಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಸೂದೆ ಜಾರಿಗೆ ಬರುತ್ತಿರುವಂತೆಯೇ ವಿದ್ಯುತ್ ದರ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಜನರನ್ನು ಈ ವಿದ್ಯುತ್ ದರ ಏರಿಕೆ ಮತ್ತಷ್ಟು ಬಡತನಕ್ಕೆ ತಳ್ಳಲಿದೆ. ಒಂದೋ ಸಬ್ಸಿಡಿ ರದ್ದುಗೊಳಿಸಲಾಗುತ್ತದೆ ಅಥವಾ ಸಬ್ಸಿಡಿಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಲಾಗುತ್ತದೆ. ಒಂದು ವೇಳೆ ರಾಜ್ಯ ಸರ್ಕಾರಗಳು ಗ್ರಾಹಕರಿಗೆ ಸಬ್ಸಿಡಿ ನೀಡಿದರೆ ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಂತಿಮವಾಗಿ, ಈ ತಿದ್ದುಪಡಿಯು ಕಾರ್ಪೊರೇಟ್ ವರ್ಗಕ್ಕೆ ಅನುಕೂಲ ಮಾಡಿಕೊಡಲಿದೆ. ಈ ಉದ್ದೇಶವನ್ನು ಪೂರೈಸಲು ಮೋದಿ ಸರ್ಕಾರವು ಮಸೂದೆಯನ್ನು ಅಂಗೀಕರಿಸಲು ಆತುರದಲ್ಲಿದೆ. ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರದ ಈ ಪ್ರಯತ್ನವು ದೇಶದ ಗ್ರಾಹಕರ ಮೇಲೆ, ವಿಶೇಷವಾಗಿ ರೈತರು ಮತ್ತು ಬಡವರ ಮೇಲೆ ದುಷ್ಪರಿಣಾಮ ಬೀರಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹಲವಾರು ಪ್ರಯತ್ನಗಳು ನಡೆದಿವೆ. ಈ ಲಾಕ್‌ಡೌನ್ ಅದನ್ನು ಪೂರ್ಣಗೊಳಿಸಲು ಉತ್ತಮ ಅವಕಾಶವೆಂದು ಸರ್ಕಾರ ಭಾವಿಸಿದೆ, ಎಂದು ಫೈಝಿ ಅಭಿಪ್ರಾಯಿಸಿದ್ದಾರೆ. ಈ ಕಾಯ್ದೆಗೆ ತಿದ್ದುಪಡಿ ತರುವ ಕ್ರಮದಿಂದ ಕೇಂದ್ರ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು. ಸಂವಿಧಾನದ ಸಮವರ್ತಿ ಪಟ್ಟಿಯಡಿಯಲ್ಲಿ ಬರುವ ವಿದ್ಯುತ್ ಸರಬರಾಜಿನ ಮೇಲಿನ ರಾಜ್ಯ ಸರ್ಕಾರಗಳ ನಿಯಂತ್ರಣವನ್ನು ತೆಗೆದುಹಾಕುವ ಈ ಮಸೂದೆಯನ್ನು ಬಲವಾಗಿ ವಿರೋಧಿಸಲು ಬಿಜೆಪಿಯೇತರ ಪಕ್ಷಗಳು ಮುಂದೆ ಬರಬೇಕೆಂದು ಅವರು ಕರೆ ನೀಡಿದ್ದಾರೆ

admin

Recent Posts

ಸ್ವಾತಂತ್ರ್ಯ ಪ್ರಯುಕ್ತ ಸಭಾ ಕಾರ್ಯಕ್ರಮ

INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್‌…

3 days ago

ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ

Let's Protect the Freedom, Save the Nation آئیے آزادی کی حفاظت کرین ملک کو بچائیں…

3 days ago

79 Happy Independence Day

Let's Protect The Freedom, Save The Nation "Let us remember the sacrifices that brought us…

3 days ago

79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

"ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ" ಈ ಸ್ವಾತಂತ್ರ್ಯ ದಿನದಂದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸತ್ಯವನ್ನು ಮಾತನಾಡಲು ಧೈರ್ಯ ಮಾಡಿದ…

3 days ago