ಕರ್ನಾಟಕ ರಾಜ್ಯ ಸರ್ಕಾರ ಗೃಹ ರಕ್ಷಕ ದಳದ ಸಿಬಂದಿಗಳನ್ನು ಕರ್ತವ್ಯದಿಂದ ಮುಕ್ತಗೊಳಿಸುವ ಹಾಗೂ ಹೊಸದಾಗಿ ಸಿಬಂದಿಗಳನ್ನು ನೇಮಕ ಮಾಡುವ ಆದೇಶ ಹೊರಡಿಸಿರುವುದು ಸರ್ಕಾರದ ಗೋಮುಖ ವ್ಯಾಘ್ರತೆಯನ್ನು ಪ್ರತಿಬಿಂಬಿಸಿದೆ. ಈಗಾಗಲೇ ಸೇವೆಯಲ್ಲಿರುವ ಹನ್ನೆರಡು ಸಾವಿರಕ್ಕೂ ಹೆಚ್ಚು ಗೃಹ ರಕ್ಷಕ ಸಿಬಂದಿಗಳನ್ನು ವಿನಾಕಾರಣ ತೆರವುಗೊಳಿಸಿ ಅರ್ಧಕ್ಕೂ ಕಡಿಮೆ ಸಂಖ್ಯೆಯಷ್ಟು ಹೊಸ ಸಿಬಂದಿಗಳ ನೇಮಕಾತಿಯನ್ನು ಮಾಡಿ ಕೊಳ್ಳುವ ಸರ್ಕಾರದ ನಿರ್ಧಾರ ಆಘಾತಕಾರಿಯಾಗಿದೆ. ಇದು ಸರ್ವಾಧಿಕಾರಿ ಧೋರಣೆಯಾಗಿದ್ದು, ಇದರ ವಿರುದ್ಧ ಪ್ರತಿಯೊಬ್ಬರು ಪ್ರತಿಭಟಿಸಬೇಕಾಗಿದೆ. ಪಕ್ಷದ ವತಿಯಿಂದ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ಮಾಡವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟ ನಂಜಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಟ್ಟ ನಂಜಯ್ಯ ರವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿಗಳಲ್ಲಿ ಪರಿಶಿಷ್ಟ ಜಾತಿ -ಪಂಗಡ ಹಾಗೂ ಹಿಂದುಳಿದ ಸಮುದಾಯಗಳ ಜನರೇ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶಗಳ ಜನರೂ ಒಳಗೊಂಡಿದ್ದಾರೆ. ಇದೀಗ ಸರಕಾರ ತರಾತುರಿಯಲ್ಲಿ ಇವರೆಲ್ಲರನ್ನೂ ಕೈಬಿಟ್ಟು ನಿರುದ್ಯೋಗ ಸೃಷ್ಟಿಸುತ್ತಿದೆ. ಹೊಸದಾಗಿ ನೇಮಕ ಮಾಡುವ ಸಂದರ್ಭದಲ್ಲಿ ಹೆಚ್ಚು ವಿದ್ಯಾರ್ಹತೆಯನ್ನು ಹೊಂದಿರುವ ಹೊಸಬರನ್ನು ಪರಿಗಣಿಸುವುದರಿಂದ ಹಳೆಯ ಸಿಬಂದಿಗಳಿಗೆ ಪುನರ್ನೇಮಕದ ಅವಕಾಶಗಳು ಅತ್ಯಂತ ಕಡಿಮೆ ಇದೆ. ಈಗಾಗಲೇ ಸಿಬಂದಿಗಳ ಕೊರತೆಯಿಂದ ಹೆಣಗುತ್ತಿರುವ ಪೊಲೀಸ್ ಇಲಾಖೆಗೆ ಅರ್ಧದಷ್ಟು ಗೃಹ ರಕ್ಷಕ ಸಿಬಂದಿಗಳನ್ನು ಕೈಬಿಡುವ ನಿರ್ಧಾರವು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುವುದು.
ಬಡ ಜನರ ಬದುಕಿನ ಮೇಲೆ ಚೆಲ್ಲಾಟವಾಡುವ ಸರ್ಕಾರದ ಈ ನಿರ್ಧಾರವು ರಾಜ್ಯದ ಹಿತಾಸಕ್ತಿಗೆ ಯಾವುದೇ ತರಹದಲ್ಲಿ ಪೂರಕವಾಗಿಲ್ಲ. ಬದಲಿಗೆ ಹಿಂದುಳಿದ ವರ್ಗಗಳ ಜನರಿಗೆ ಮತ್ತು ಗ್ರಾಮೀಣರಿಗೆ ಮಾರಕವಾಗಿದೆ. ಸರಕಾರ ಈ ನಿರಂಕುಶ ಪ್ರಭುತ್ವವನ್ನು ಕೈಬಿಟ್ಟು ಜನತೆಗೆ ನ್ಯಾಯ ನೀಡಬೇಕೆಂದು ಪಕ್ಷ ಆಗ್ರಹಿಸುತ್ತದೆ ಎಂಬುದಾಗಿ ಪುಟ್ಟನಂಜಯ್ಯರವರು ಪುನರುಚ್ಚರಿಸಿದ್ದಾರೆ.
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ ಒಲವಿನ ಕರ್ನಾಟಕ 01 ನವೆಂಬರ್ 2025 ಎಸ್‌ಡಿಪಿಐ ಕರ್ನಾಟಕ ರಾಜ್ಯಾದ್ಯಂತ ಕನ್ನಡ…
مختص رقم کہاں گئی؟ وائٹ پیپر جاری کرو ایس ڈی پی آئی 2025-26 کے بجٹ…
Maqsoos Budget ki Raqham kahan gayi? White Paper jari karo - SDPI 2025-26 ke budget…
ಶ್ವೇತ ಪತ್ರ ಹೊರಡಿಸಿ - ಎಸ್.ಡಿ.ಪಿ.ಐ 2025-26 ನೇ ಸಾಲಿನ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ ಮೊತ್ತವನ್ನು ಮೀಸಲಿಟ್ಟು ಅನೇಕ…