ದಿನಾಂಕ 11 ಅಕ್ಟೋಬರ್ 2022
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಅಕ್ಟೋಬರ್ 11, 2022 ರಂದು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಮೀಸಲಾತಿ, ನಿರುದ್ಯೋಗ, ಚುನಾವಣಾ ತಯಾರಿಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಎಸ್ಸಿ / ಎಸ್ಟಿ ಮೀಸಲಾತಿ ಪ್ರಮಾಣವನ್ನು ಏರಿಸುವ ಬಗ್ಗೆ ರಾಜ್ಯ ಸರ್ಕಾರದ ಘೋಷಣೆ ಕೇವಲ ಬೂಟಾಟಿಕೆ. 50% ಮೀಸಲಾತಿ ಪ್ರಮಾಣ ಮೀರಬಾರದು ಎಂದು ಸುಪ್ರೀಂ ಕೋರ್ಟ್ ಮೇಲಿಂದ ಮೇಲೆ ಹೇಳುತ್ತಲೇ ಬರುತ್ತಿದೆ. ಆದರೂ ಸಹ ಸರ್ಕಾರ ಜನರನ್ನು ಮೂರ್ಖರನ್ನಾಗಿಸಿ ಮತ ಸೆಳೆಯಲು ಇಂತಹ ಒಂದು ಆಗು ಹೋಗದ ಘೋಷಣೆ ಮಾಡಿದೆ.
ಸದ್ಯ ಅಸ್ತಿತ್ವದಲ್ಲಿರುವ ಮೀಸಲಾತಿಯೂ ಸಹ ವೇಗವಾಗಿ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ಏಕೆಂದರೆ, ಸರ್ಕಾರಿ ಸೌಮ್ಯದ ಸಂಸ್ಥೆ, ಉದ್ಯಮಗಳನ್ನು ಸರ್ಕಾರ ಒಂದೊAದಾಗಿ ಮುಚ್ಚುತ್ತಿದೆ, ಇಲ್ಲವೇ ಖಾಸಗಿಕರಣ ಮಾಡುತ್ತಿದೆ. ಸರ್ಕಾರಿ ಹುದ್ದೆಗಳೇ ಇಲ್ಲದಂತಾದ ಮೇಲೆ ಮೀಸಲಾತಿ ಅನುಕೂಲ ಸಿಗುವುದಾದರೂ ಹೇಗೆ? ಖಾಸಗಿಯಲ್ಲಿ ಮೀಸಲಾತಿಗೆ ಅವಕಾಶ ಇಲ್ಲ. ಮೀಸಲಾತಿಯನ್ನು ಪರೋಕ್ಷವಾಗಿ ತೊಡೆದು ಹಾಕುವುದೇ ಖಾಸಗೀಕರಣದ ಮೂಲ ಉದ್ದೇಶ. SಆPI ಕಾರ್ಯಕಾರಿ ಸಮಿತಿ ಖಾಸಗಿ ವಲಯದ ಮೀಸಲಾತಿ ನೀಡಲು ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವುದು.
ಪಿ.ಎಫ್.ಐ ಬ್ಯಾನ್ ಸಂದರ್ಭದಲ್ಲಿ ಎಸ್‌ಡಿಪಿಐ ನಾಯಕರ ಮೇಲೆ ಸೆಕ್ಷನ್ 107ರ ದುರುಪಯೋಗ ನಡೆದಿದೆ. ಎಸ್‌ಡಿಪಿಐ ನಾಯಕರನ್ನು ಈ ಸೆಕ್ಷನ್ ಅಡಿಯಲ್ಲಿ ಮುಂಜಾಗೃತಾ ಕ್ರಮ ಎಂದು ಹೇಳಿ ಬಂಧಿಸಲಾಯಿತು. ಈ ಸೆಕ್ಷನ್ ಅಡಿಯಲ್ಲಿ ಬಂಧಿತರಿಗೆ ತಹಸೀಲ್ದಾರ್ ಮಟ್ಟದಲ್ಲಿ ಸ್ಟೇಷನ್ ಬೇಲ್ ಸಿಗುವ ಅವಕಾಶ ಇದ್ದರೂ ಅದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿದ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ನಿರ್ಧರಿಸಲಾಯಿತು.
ಎಸ್‌ಡಿಪಿಐ ಪಕ್ಷದ ಮೇಲೆ ಯಾವುದೇ ನಿರ್ಬಂಧ ಇಲ್ಲದೇ ಇದ್ದರೂ ಸಹ ಪಕ್ಷ ನಡೆಸುತ್ತಿದ್ದ ಜನ ಸಂಪರ್ಕ ಕೇಂದ್ರಗಳನ್ನು ಮುಚ್ಚಲಾಗಿದೆ. ಅದರ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಸಹ ಇನ್ನೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಸಾಮಾನ್ಯ ಜನರಿಗೆ ಸಿಗುತ್ತಿದ್ದ ಬಹುಮುಖ್ಯ ಸೇವೆಯೊಂದು ಇಲ್ಲದಂತಾಗಿದೆ. ಈ ಬಗ್ಗೆ ಕಾನೂನಾತ್ಮಕ ಹೋರಾಟವನ್ನು ಮಾಡುವುದಾಗಿ ನಿರ್ಧರಿಸಲಾಯಿತು.
ಬಿಜಾಪುರ ನಗರಸಭೆ ಚುನಾವಣೆಯಲ್ಲಿ ಹತ್ತು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು. ಕೊಳ್ಳೇಗಾಲದ ನಗರ ಸಭೆ ಉಪಚುನಾವಣೆಗಳನ್ನು ಸಮರ್ಥವಾಗಿ ಎದುರಿಸಬೇಕು. ಮುಂಬರುವ ಬಿಬಿಎಂಪಿ ಚುನಾವಣೆಗೆ ಎಲ್ಲ ರೀತಿ ಇಂದಲೂ ಸಜ್ಜಾಗಬೇಕು.
2023ರ ವಿಧಾನಸಭೆ ಚುನಾವಣೆಗಳಲ್ಲಿ ಕನಿಷ್ಠ ನೂರು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಬೇಕು. ಎಸ್‌ಡಿಪಿಐ ಪಕ್ಷ ಈ ಬಾರಿ ಕರ್ನಾಟಕದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು.
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ