ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಕಾರ್ಯಕರ್ತರ ಸಮಾವೇಶ ದಿನಾಂಕ 26.05.2023 ರಂದು ಮೈಸೂರಿನಲ್ಲಿ ನಡೆಯಿತು. ಈ ಸಮಾವೇಶದ ಅಧ್ಯಕ್ಷತೆಯನ್ನು ಪಕ್ಷದ ಮೈಸೂರು ಜಿಲ್ಲಾಧ್ಯಕ್ಷರಾದ ರಫತ್ ಖಾನ್ ಅವರು ವಹಿಸಿದ್ದರು. ಸ್ವಾಗತ ಭಾಷಣ ಮಾಡಿದ ಅವರು ಸಮಾವೇಶದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಬ್ದುಲ್ ಹನ್ನಾನ್ ಅವರು ಮಾತನಾಡಿ, ಕರ್ನಾಟಕ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ಮುಂದಿಟ್ಟರು. ಎಸ್‌ಡಿಪಿಐ ಪಕ್ಷ ಸೋಲಿನಿಂದ ಎದೆಗುಂದಬೇಕಾದ ಅವಶ್ಯಕತೆ ಇಲ್ಲ, ನಮಗೆ ಇಲ್ಲಿ ದೊರೆತಿರುವ 41 ಸಾವಿರ ಮತಗಳು ಅತ್ಯಮೂಲ್ಯವಾದವು. ಆ ಮತಗಳನ್ನು ಮುಂದಿಟ್ಟುಕೊಂಡು ಮುಂದಿನ ಆರು ತಿಂಗಳಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ತಯಾರಿ ನಡೆಸುವಂತೆ ಕರೆಕೊಟ್ಟರು.

ಸಮಾರೋಪ ಭಾಷಣ ಮಾಡಿದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್‌ ಅವರು ಚುನಾವಣೆಯಲ್ಲಿ ಅಭೂತಪೂರ್ವ ಕೆಲಸ ನಿರ್ವಹಿಸಿದ ಕಾರ್ಯಕರ್ತರನ್ನು ಅಭಿನಂದಿಸಿದರು. ಜೊತೆಗೆ ಫಲಿತಾಂಶದಿಂದ ಎದೆಗುಂದಬೇಕಾದ ಅವಶ್ಯಕತೆ ಇಲ್ಲ, ನಮಗೆ ಬಂದಿರುವ 41 ಸಾವಿರ ಮತಗಳು ಯಾವುದೇ ಆಮಿಷ ಇಲ್ಲದೆ ಬಂದ ಶುದ್ಧ, ಪ್ರಾಮಾಣಿಕ ಮತಗಳು. ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ಚುನಾವಣಾ ಫಅತಾಂಶವನ್ನು ಹಿನ್ನಡೆಯಾಗಿ ನೋಡದೆ ಮುಂದೆ ಬರಲಿರುವ ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧರಾಗೋಣ ಎಂದು ಹೇಳದರು. ಜಿಲ್ಲಾ ಉಪಾಧ್ಯಕ್ಷರಾದ ಎಸ್. ಸ್ವಾಮಿಯವರು ಸಭೆಗೆ ಅಗಮಿಸಿದವರಿಗೆ ವಂದನೆಗಳನ್ನು ತಿಳಿಸುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago