ಹುಬ್ಬಳ್ಳಿ : ನವಂಬರ್ 5: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಮಕ್ತುಮ್ ಹುಸೇನ್ ಹೊಸಮನಿ ಅಧ್ಯಕ್ಷತೆಯಲ್ಲಿ, ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಯವರ ಉಪಸ್ಥಿತಿಯಲ್ಲಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಪ್ರಾಥಮಿಕವಾಗಿ ಮಾತನಾಡಿ ಅಫ್ಸರ್ ಕೊಡ್ಲಿಪೇಟೆ ಪ್ರತಿ ವರ್ಷದಂತೆ ಈ ಬಾರಿಯು ಪಕ್ಷದ ಅಭಿವದ್ಧಿಗಾಗಿ ರಾಜ್ಯದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ನಡೆಯುತ್ತಿದೆ. ಆದರಂತೆ ಜಿಲ್ಲೆಯಲ್ಲೂ ಅಭಿಯಾನ ಆಯೋಜಿಸ ಲಾಗಿದೆ ಎಂದರು. ಪಕ್ಷದ ಹಿತೈಷಿಗಳು ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದರು.
ಅಭಿಯಾನದಲ್ಲಿ ಸಂಗ್ರಹವಾದ ಹಣದಿಂದ ಪಕ್ಷದ ಅಭಿವದ್ಧಿ ಕಾರ್ಯಕ್ರಮಗಳು, ಜನಪರ ಹೋರಾಟ-ಕಾರ್ಯಕ್ರಮ, ತರಬೇತಿ, ಸಮಾಜಮುಖಿ ಸೇವಾ ಕಾರ್ಯಕ್ರಮ ಸೇರಿದಂತೆ ಇನ್ನಿರತ ಸೇವಾ ಕಾರ್ಯಗಳಿಗೆ ವೆಚ್ಚ ಮಾಡಲಾಗುವುದು ಎಂದರು.
ಹಸಿವು ಮತ್ತು ಭಯ ಮುಕ್ತ ಚಳವಳಿಯು ಯಶಸ್ವಿಯಾಗಬೇಕಾದರೆ ಪ್ರತಿ ಮನೆ ಮನೆಗೂ ತೆರಳಿ ಕಾರ್ಯಕರ್ತ ಪಕ್ಷದ ಧ್ಯೇಯ ಉದ್ದೇಶಗಳನ್ನು ತಿಳಿಸುವ ಮುಖಾಂತರ ಪಕ್ಷದ ಬೆಳವಣಿಗೆಗೆ ತನು, ಮನ, ಧನಗಳಿಂದ ಸಹಕರಿಸಲು ಮನವಿ ಮಾಡಬೇಕೆಂದು ಕರೆ ನೀಡಿದರು.
ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ಕೇವಲ ಚುನಾವಣಾ ಸಮಯದಲ್ಲಿ ಮಾತ್ರವಲ್ಲ ವರ್ಷದ 365 ದಿನಗಳಲ್ಲಿ ಸಹ ಜನಪರ ಹೋರಾಟ ನಡೆಸುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಲು ಕ್ರಿಯಾಶೀಲಾಗಿರುತ್ತಾರೆ ಹಾಗಾಗಿ ಪಕ್ಷದ ನಿಧಿ ಸಂಗ್ರಹ ಅಭಿಯಾನಕ್ಕೆ ನಮ್ಮ ಕಾರ್ಯಕರ್ತರು ನಿಮ್ಮ ಬಳಿ ಬಂದಾಗ ಪೂರ್ಣ ಮನಸ್ಸಿನಿಂದ ಸಹಾಯ ಮಾಡಲು ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡರು .
ಸಭೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಪಕ್ಷದ ನಿಧಿ ಸಂಗ್ರಹ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರವಾರು ನಿಧಿ ಸಂಗ್ರಹ ಉಸ್ತುವಾರಿಗಳು ಮತ್ತು ತಂಡಗಳನ್ನು ರಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಗಫೂರ್ ಅಹ್ಮದ್ ಕುರಟ್ಟಿ ಮತ್ತು ರಫೀಕ್ ಲಷ್ಕರ್, ಉಪಾಧ್ಯಕ್ಷರಾದ ಸಮೀರ್ ಬೆಟಗೇರಿ , ಕಾರ್ಯದರ್ಶಿ ಸುಹೀಲ್ ಇಂಗಳಗಿ, ಜಿಲ್ಲಾ ಕೋಶಾಧಿಕಾರಿ ಮಲಿಕ್ ಕಲಸ್ , ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಜಬ್ಬಾರ್ ,ಸಲೀಮ್ ಹಾಳ್ಯಾಳ್, ಹಮೀದ್ ಬಗಾಳಿ, ಬ್ರಾಂಚಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಇತರರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಗಫೂರ್ ಅಹ್ಮದ್ ಕುರಟ್ಟಿ
ಹುಬ್ಬಳ್ಳಿ – ಧಾರವಾಡ
(20/07/2025) ಟ್ವಿಟ್ಟರ್ ಅಭಿಯಾನವನ್ನು ಮುಂದೂಡಲಾಗಿದೆ ಧರ್ಮಸ್ಥಳ ಪ್ರಕರಣ – ಎಸ್ಡಿಪಿಐ ಪ್ರತಿಕ್ರಿಯೆ ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಅಸಹಜ ಸಾವುಗಳು, ಅತ್ಯಾಚಾರ…
ಮೌನವನ್ನು ಮುರಿಯೋಣ ಸತ್ಯಕ್ಕೆ ಧ್ವನಿಯಾಗೋಣಆತ್ಮೀಯರೇ, ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿರುವ ಹೃದಯವಿದ್ರಾವಕ ಘಟನೆಗಳು ಅನೇಕ ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆದ…
TWITTER CAMPAIGN ON 20 | 07 | 2025 | SUNDAY | TIME : 4:00 PM…
ایس ڈی پی آئی دیون ملی کے کسانوں کی کامیابی کا خیر مقدم کرتی ہے۔…