ಪತ್ರಿಕಾ ಪ್ರಕಟಣೆ

KEA ಪರೀಕ್ಷೆಗಳಲ್ಲಿ ಮಂಗಳಸೂತ್ರ, ಕಾಲುಂಗರಕ್ಕೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಹಿಜಾಬ್ ಮೇಲೆ ದ್ವೇಷ ಏಕೆ?: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 15 ನವೆಂಬರ್ 2023: ಕಳೆದ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮಂಗಳಸೂತ್ರ, ಕಾಲುಂಗುರ ಮುಂತಾದ ಮಹಿಳೆಯರ ವಸ್ತುಗಳನ್ನು ತೆಗೆಸಿದ್ದರ ವಿರುದ್ಧ ನಮ್ಮ ಪಕ್ಷ ತೀವ್ರವಾಗಿ ವಿರೋಧಿಸಿತ್ತು. ಆನಂತರ ಈಗ ಮಂಗಳಸೂತ್ರ, ಕಾಲುಂಗುರಕ್ಕೆ ಅನುಮತಿ ನೀಡಿರುವ ಕಾಂಗ್ರೆಸ್ ಸರ್ಕಾರ ಹಿಜಾಬನ್ನು ಮಾತ್ರ ನಿಷೇಧಿಸಿದೆ. ಬಿಜೆಪಿಯಂತೆ ಕಾಂಗ್ರೆಸ್ ಕೂಡ ಹಿಜಾಬ್ ವಿರೋಧಿ ಎಂಬುದಕ್ಕೆ ಇದೊಂದು ನಿದರ್ಶನ ಇಷ್ಟಕ್ಕೂ ಈ ಸರ್ಕಾರಗಳಿಗೆ ಹಿಜಾಬ್ ಮೇಲೆ ದ್ವೇಷ ಏಕೆ? ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜಿದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶ್ನೆ ಮಾಡಿದ್ದಾರೆ.

ನೇಮಕಾತಿಯಲ್ಲಿ ಅಕ್ರಮಗಳು ನಿರಂತರವಾಗಿ ಅವ್ಯಾಹತವಾಗಿ ನಡೆಯುತ್ತಲೇ ಬರುತ್ತಿವೆ. ಕಳೆದ ಬಿಜೆಪಿ ಸರ್ಕಾರದಲ್ಲಿ ನಡೆದ ಪಿ ಎಸ್ ಐ ನೇಮಕಾತಿ ಹಗರಣ ಇರಬಹುದು, ಸಹಾಯಕ ಶಿಕ್ಷಕರ ನೇಮಕಾತಿ ಇರಬಹುದು ಅಥವಾ ಇತ್ತೀಚೆಗೆ ನಡೆದ ಕೆಇಎ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಮತ್ತು ಆರ್ ಡಿ ಪಾಟೀಲ್ ನಂತಹ ವ್ಯಕ್ತಿಯ ಬಂಧನದ ಪ್ರಕರಣಗಳೇ ಇರಬಹುದು, ಇದ್ಯಾವುದನ್ನು ಕೂಡ ತಡೆಯುವ ಗಂಭೀರ ಪ್ರಯತ್ನ ಅಥವಾ ಸಾಮರ್ಥ್ಯ ಸರ್ಕಾರಗಳಿಗೆ ಇರುವಂತೆ ಕಂಡು ಬರುತ್ತಿಲ್ಲ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಮಹಿಳೆಯರ ಗೌರವಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುವ ಪ್ರಯತ್ನವಂತು ಬಹಳ ಗಂಭೀರವಾಗಿಯೇ ನಡೆಯುತ್ತಿದೆ. ಅಲ್ಪಸಂಖ್ಯಾತ ಮಹಿಳೆಯರ ಸಾಂವಿಧಾನಿಕ ಹಕ್ಕುಗಳಾದ ತಮ್ಮ ಇಚ್ಛೆಯ ವಸ್ತ್ರ ಧರಿಸುವ ಮತ್ತು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನವಂತು ಪರೀಕ್ಷಾ ಕೇಂದ್ರಗಳಲ್ಲಿ ಎಗ್ಗು ಸಿಗ್ಗಿಲ್ಲದೆ ನಡೆದುಕೊಂಡು ಬರುತ್ತಿದೆ. ಬಿಜೆಪಿ ಮುಸ್ಲಿಂ ದ್ವೇಷದ ಕಾರಣಕ್ಕೆ ಹಿಜಾಬನ್ನು ನಿಷೇಧಿಸುವ ಅಸಂವಿಧಾನಿಕ ಕ್ರಮಕ್ಕೆ ಮುಂದಾಗುತ್ತದೆ. ತಾನು ಮಹಾ ಜಾತ್ಯಾತೀತ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಕೂಡ ಅಂತಹದ್ದೇ ಮನಸ್ಥಿತಿಯನ್ನು ಹೊಂದಿದೆ ಎನ್ನುವುದಕ್ಕೆ ಈಗ ಕೆಇಎ ಪರೀಕ್ಷೆಗಳಲ್ಲಿ ಹಿಜಾಬನ್ನು ಅನುಮತಿಸುವುದಿಲ್ಲ ಎಂಬ ನಿಯಮ ಮತ್ತೊಮ್ಮೆ ಸಾಬೀತುಪಡಿಸುತ್ತದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಸರ್ಕಾರಕ್ಕೆ ಪರೀಕ್ಷಾ ಅಕ್ರಮಗಳನ್ನು ತಡೆಯಲೇಬೇಕು ಎಂಬ ಗಂಭೀರ ಉದ್ದೇಶವಿದ್ದರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಹೊತ್ತಿರುವ ವ್ಯಕ್ತಿಯನ್ನು ಸ್ಕ್ಯಾನ್ ಮಾಡುವ ಸಾಕಷ್ಟು ತಂತ್ರಜ್ಞಾನ ಲಭ್ಯವಿದೆ. ಆ ತಂತ್ರಜ್ಞಾನವನ್ನು ಬಳಸುವ ಮೂಲಕ ಪರೀಕ್ಷಾ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಬಹುದು. ಆದರೆ ಸರ್ಕಾರದಲ್ಲಿರುವ ಮಂತ್ರಿಗಳು, ಅಧಿಕಾರಿಗಳೇ ಈ ಅಕ್ರಮಗಳ ಭಾಗವಾಗಿರುವುದರಿಂದ ಅವುಗಳನ್ನು ತಡೆಯುವುದು ಸಾಧ್ಯವಾಗುತ್ತಿಲ್ಲವಷ್ಟೇ. ಆದರೆ ಅದೇ ನೆಪದಲ್ಲಿ ತಮ್ಮ ದ್ವೇಷ ಸಾಧನೆಯನ್ನು ಸಾಧಿಸಿಕೊಂಡು ಹೋಗುತ್ತಿರುವುದು ಸಾಮಾಜಿಕ ದ್ರೋಹ. ಸರ್ಕಾರ ಇಂತಹ ಭಾವನೆಗಳ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ ಕೆಇಎ ಪರೀಕ್ಷೆಗಳಿಗೆ ಹಿಜಾಬ್ ಗೆ ಅನುಮತಿ ನೀಡಬೇಕು ಎಂದು ಮಜೀದ್ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

3 months ago