Categories: featureNewsPolitics

ಮೈಸೂರಿನಲ್ಲಿ ಡಿಸೆಂಬರ್ 12 ಮತ್ತು 13, 2023 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೇಯಲ್ಲಿ ಅಂಗೀಕರಿಸಲಾದ ನಿರ್ಣಯಗಳು.

  1. ರಾಜ್ಯಪಾಲರು ಫೆಡರಲಿಸಂ ಅನ್ನು ಎತ್ತಿಹಿಡಿಯಬೇಕು

ಭಾರತದಲ್ಲಿನ ರಾಜ್ಯಾಪಾಲರು ರಾಜಕೀಯವನ್ನು ಮೀರಿರಬೇಕು ಮತ್ತು ನಿಷ್ಪಕ್ಷಪಾತಿಗಳಾಗಿರಬೇಕು. ಆದರೆ ತೀವ್ರ ಬಲಪಂಥೀಯ ಫ್ಯಾಸಿಸ್ಟ್ ಒಕ್ಕೂಟ ಸರ್ಕಾರದಿಂದ ನೇಮಕಗೊಂಡ ರಾಜ್ಯಪಾಲು ತಮ್ಮ ಪ್ರಜಾಪ್ರಭುತ್ವ ವಿರೋಧಿ ಮತ್ತು ಒಕ್ಕೂಟ ವಿರೋಧಿ ನಡವಳಿಕೆಗಳಿಂದ ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಬದಲು ವಿವಿಧ ರಾಜ್ಯಗಳಲ್ಲಿ ತಮ್ಮ ರಾಜಕೀಯ ಉನ್ನತ ನಾಯಕರ ತಾಳಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರು ತಮ್ಮ ಪೂರ್ವ ರಾಜಕೀಯ ನಾಯಕರ ಸಂತೋಷಕ್ಕಾಗಿ ಕೊಳಕು ರಾಜಕೀಯವನ್ನು ಮಾಡುತ್ತಿದ್ದಾರೆ ಮತ್ತು ಈ ರಾಜ್ಯಗಳಲ್ಲಿನ ಪ್ರಜಾಪ್ರಭುತ್ವ ಸರ್ಕಾರಗಳನ್ನು ಮುಜುಗರಕ್ಕೀಡುಮಾಡುತ್ತಿದ್ದಾರೆ. ಈ ಕಾರಣಕ್ಕೆ ಅಸೆಂಬ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಮಾಡದೆ ತಡೆಹಿಡಿಯುವುದು, ಯಾವುದೇ ಕಾರಣವಿಲ್ಲದೆ ಮಸೂದೆಗಳನ್ನು ತಿರಸ್ಕರಿಸುವುದು ಮತ್ತು ಹಿಂದಿರುಗಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಅವರ ದುರಹಂಕಾರದ ನಿಲುವು ರಾಜಕೀಯ ಸೇಡಿನದು. ಈ ರೀತಿಯ ನಡವಳಿಕೆ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಶಾಸಕಾಂಗಕ್ಕೆ ಅಗೌರವ ಮತ್ತು ರಾಜ್ಯಗಳ ಮತದಾರರಿಗೆ ಮಾಡುವ ಅವಮಾನವಾಗಿದೆ. ಇದು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗಿದೆ. ಅವರ ಇಂತಹ ಕೊಳಕು ನಡವಳಿಕೆಗಳು ರಾಜ್ಯ ಸರ್ಕಾರಗಳು ನ್ಯಾಯಾಂಗದ ಮೂಲಕ ಪರಿಹಾರಗಳನ್ನು ಹುಡುಕುವಂತೆ ಮಾಡಿದೆ. ಈ ವಿಚಾರದಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಪಾಲರು ಸುಪ್ರೀಂ ಕೋರ್ಟ್ನಿಂದ ಬಲವಾದ ಆಕ್ಷೇಪಗಳನ್ನು ಕೂಡ ಪಡೆದುಕೊಂಡಿದ್ದಾರೆ.

SDPI ಪ್ರಜಾಪ್ರಭುತ್ವ ವಿರೋಧಿ, ಒಕ್ಕೂಟ ವಿರೋಧಿ ನಿಲುವು ಮತ್ತು ರಾಜ್ಯಪಾಲರುಗಳ ಕೊಳಕು ರಾಜಕೀಯಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತದೆ ಮತ್ತು ರಾಜ್ಯಪಾಲರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳ ಹಕ್ಕುಗಳನ್ನು ಉಲ್ಲಂಘಿಸುವುದರಿಂದ ದೂರವಿರಬೇಕು ಮತ್ತು ತಮ್ಮ ಸಾಂವಿಧಾನಿಕ ಅಧಿಕಾರಕ್ಕೆ ಸೀಮಿತವಾಗಿ ವರ್ತಿಸಬೇಕು ಎಂದು ಒತ್ತಾಯಿಸುತ್ತದೆ. ಜೊತಗೆ ರಾಜಕೀಯ ಲಾಭಕ್ಕಾಗಿ ತಮ್ಮ ಅಧಿಕಾರದ ಕಛೇರಿಗಳನ್ನು ಪಕ್ಷದ ಕಛೇರಿಗಳಾಗಿ ಪರಿವರ್ತಿಸಿಸುವುದನ್ನು ಖಂಡಿಸುತ್ತದೆ.

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago