*ಲದಾಖ್ ನ ರಕ್ತಪಾತ ಮೋದಿ ಸರ್ಕಾರದ ವಂಚನೆಯನ್ನು ಬಹಿರಂಗಗೊಳಿಸಿದೆ…,*ಲದಾಖ್ ನಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳ ಮೇಲೆ ಗುಂಡು ಹಾರಿಸಿ ನಾಲ್ಕು ಜನರ ಜೀವ ತೆಗೆದಿರುವ ಮೋದಿ ಆಡಳಿತದ ಕ್ರೌರ್ಯವನ್ನು ಸೋಶಿಯಲ್‌ ಡೆಮಾಕ್ರಟಿಲ್‌ ಪಾರ್ಟಿ ಆಫ್‌ ಇಂಡಿಯಾ (SDPI) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಕಿ ತೀವ್ರವಾಗಿ ಖಂಡಿಸಿದ್ದಾರೆ. ಈ ದಮನಕಾರಿ ಘಟನೆಯಲ್ಲಿ 70 ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿಯೂ ಸಹ ಸೇರಿದ್ದಾರೆ. ಹಿಮಾಲಯ ತಪ್ಪಲಿನ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವುದು, ಆರನೇ ಅನುಚ್ಚೇಧಕ್ಕೆ ಸೇರಿಸುವುದು, ಉದ್ಯೋಗದಲ್ಲಿ ಮೀಸಲಾತಿ, ಭೂಮಿ ಮತ್ತು ಸಾಂಸ್ಕೃತಿಕ ಗುರುತಿನ ರಕ್ಷಣೆಯ ನ್ಯಾಯಯುತ ಬೇಡಿಕೆಯೊಂದಿಗೆ ಪ್ರತಿಭಟಿಸುತ್ತಿದ್ದವರ ಮೇಲೆ ನಡೆದ ಈ ರಕ್ತಪಾತ ದಾಳಿ ರಾಜ್ಯದ ಜನರ ಹಕ್ಕುಗಳ ರಕ್ಷಣೆ ಮಾಡುವುದರಲ್ಲಿ ಸರ್ಕಾರ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿದೆ ಎಂದು ತೋರಿಸುತ್ತದೆ. ಈ ಎಲ್ಲಾ ಬೇಡಿಕೆಗಳು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಏಕಪಕ್ಷೀಯವಾಗಿ ವಿಭಜಿಸಿದ ದಿನದಂದಲೇ ಉದ್ಭವಿಸಿವೆ.ಮೋದಿ ಸರ್ಕಾರ ಎಸಗಿರುವ ಮಹಾ ವಂಚನೆ ಇಲ್ಲಿ ಬಹಳ ಸ್ಪಷ್ಟವಾಗಿದ್ದು, ಆರ್ಟಿಕಲ್ 370 ರದ್ದು ಪಡಿಸಿದ ನಂತರ ಅಭಿವೃದ್ದಿಯ ಭರವಸೆಯನ್ನು ನೀಡಲಾಗಿತ್ತಾದರೂ, ವಾಸ್ತವದಲ್ಲಿ ಸರ್ಕಾರದ ನಿರ್ಲಕ್ಷ್ಯ, ನಿರುದ್ಯೋಗದಲ್ಲಿ ಏರಿಕೆ ಮತ್ತು ಪರಿಸರದ ನಾಶ ಮಾತ್ರ ಕಂಡು ಬಂದಿದೆ. ಇದು ದೇಶದ ಉತ್ತರ  ತುದಿಭಾಗದ ರಾಜ್ಯದಲ್ಲಿ ತೀವ್ರ ಪರಿಣಾಮ ಬೀರಿದೆ. ಉನ್ನತ ಮಟ್ಟದ ಸಮಿತಿಯ ಮೂಲಕ ಅರ್ಥಪೂರ್ಣ ಸಂವಾದ ನಡೆಸಬೇಕಾಗಿದ್ದ ಸಮಯದಲ್ಲಿ, ಸರ್ಕಾರ ಆಶ್ರುವಾಯು, ಲಾಠಿ ಬೀಸುವಿಕೆ, ಬಲವಂತ ಕರ್ಫ್ಯೂ ಹೇರಿಕೆ ಮತ್ತು ಚಳುವಳಿಗಾರರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ಸುಳ್ಳು ಪ್ರಕರಣಗಳ ದಾಖಲಿಸುವಿಕೆ ಇತ್ಯಾದಿ ದಬ್ಬಾಳಿಕೆಗಳು ನಡೆದಿದೆ. ನ್ಯಾಯಯುತ ತಮ್ಮ ಬೇಡಿಕೆಗಳಿಗೆ 15 ದಿನಗಳಿಂದ ಸೋನಂ ವಾಂಗ್ಚುಕ್ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮಾಡಿದ್ದಲ್ಲದೆ, ಗಲಭೆಗೆ ಅವರೇ ಕಾರಣ ಎಂದು ಅವರನ್ನು ದೂಷಿಸಲಾಗುತ್ತಿದೆ. ಇದು ಜನಪರ ಆಡಳಿತವಲ್ಲ,  ಇದು ಸರ್ವಾಧಿಕಾರಿ ಧೋರಣೆಯ ಪರಮಾವಧಿ.  ರೈತರ ಹೋರಾಟಗಳನ್ನು ಹತ್ತಿಕ್ಕುವುದರಿಂದ ಹಿಡಿದು, ಅಲ್ಪಸಂಖ್ಯಾತರ ದಮನದವರೆಗೆ ಈ ಆಡಳಿತದ ಧೋರಣೆ ಇದೇ ರೀತಿ ಮುಂದುವರೆದಿದೆ.SDPI ಪಕ್ಷ ಲದಾಖ್ ಪ್ರದೇಶದ ಜನರ ಸಾಂವಿಧಾನಿಕ ಹಕ್ಕುಗಳ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ತನಿಖಾ ಸಂಸ್ಥೆಗಳ ದುರುಪಯೋಗ ಮತ್ತು ಒಡೆದು ಆಳುವ ರಾಜಕಾರಣದ ಭಾಗವಾದ, ಉದಾಹರಣೆಗೆ ವಕ್ಫ್ ತಿದ್ದುಪಡಿ ಮಸೂದೆ ಮತ್ತು ಹಿಂಸೆಯನ್ನು ಪೋಷಿಸುವ ಗೋ ರಕ್ಷಣಾ ನೀತಿಗಳು ದೇಶದಾದ್ಯಂತ ಶೋಷಿತ ಸಮುದಾಯಗಳನ್ನು ಇನ್ನಷ್ಟು ಮೂಲೆ ಗುಂಪು ಮಾಡಲು ಕಾರಣವಾಗುತ್ತಿವೆ.ನ್ಯಾಯವನ್ನು ನಿರಾಕರಿಸುವ ಈ ರೀತಿಯ ದಮನಕಾರಿ ನೀತಿ ಭಾರತದ ಪ್ರಜಾಪ್ರಭುತ್ವದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಮತ್ತಷ್ಟು ಆಳಕ್ಕೆ ತಗೆದುಕೊಂಡು ಹೋಗುತ್ತದೆ. ಆದುದರಿಂದ ಪ್ರಧಾನಿ ಮೋದಿ ತಕ್ಷಣ ಅಲ್ಲಿ ಮಾತುಕತೆ ಆರಂಭಿಸಿ ಅವರ ಪ್ರಮುಖ ಬೇಡಿಕೆಯಾದ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವುದಲ್ಲದೇ,  ಈ ದಮನ ನೀತಿಯನ್ನು ಅಂತ್ಯಗೊಳಿಸಬೇಕು ಎಂದು SDPI ಆಗ್ರಹಿಸುತ್ತದೆ.

Recent Posts

Condolence

The passing away of Ameer-e-Shariat of Karnataka, the respected religious and social leader Maulana Sageer…

1 hour ago

انتقال پر ملال

امیر شریعت کرناٹک، معروف دینی و سماجی رہنما مولانا صغیر احمد صاحب کے بنگلورو میں…

1 hour ago

Condolence

Deeply saddened by the passing of Ameer-e-Shariat Maulana Sageer Ahmed Sahib Principal of Sabee-ul-Rashad Arabic…

2 hours ago

ಚಿಕ್ಕಮಗಳೂರು | ಜನವಿರೋಧಿ ಆಡಳಿತ, ಸಂವಿಧಾನ ಮೌಲ್ಯಗಳ ಕುಸಿತ; SDPI ಅಪ್ಸರ್ ಕೊಡ್ಲಿಪೇಟೆ

ಚಿಕ್ಕಮಗಳೂರು ತಾಲೂಕಿನ ಆಲ್ಲೂರಿನಲ್ಲಿ ಎಸ್‌ಡಿಪಿಐ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ SDPI ಪಕ್ಷದ ಸಮಾವೇಶವು ಮಂಗಳವಾರ ಆಯೋಜಿಸಲಾಗಿತ್ತು. ಬೆಂಗಳೂರು…

6 days ago