admin

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಹಿಂಸೆಯಿಂದಲ್ಲ, ಅಹಿಂಸೆಯಿಂದಲೇ ಬದಲಾವಣೆ ಸಾಧ್ಯವೆಂದು ಜಗತ್ತಿಗೆ ತೋರಿಸಿದವರು ಗಾಂಧಿಜಿ. ~ಇಬ್ರಾಹಿಂ ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnataka #HappyGandhiJayanti

1 week ago

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಇದೇ ಗಾಂಧಿಯ ನಿಜವಾದ ಗೌರವ. ~ಬಿ.ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnataka #happygandhijayanti

1 week ago

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಒಬ್ಬರ ಮೇಲೆ ದ್ವೇಷವಲ್ಲ, ಎಲ್ಲರಿಗಾಗಿ ಪ್ರೀತಿ ಇದೇ ಗಾಂಧಿಯ ಸಂದೇಶ ~ಶಾಹಿದಾ ತಸ್ನೀಮ್,ರಾಜ್ಯ ಉಪಾಧ್ಯಕ್ಷೆ, SDPI ಕರ್ನಾಟಕ SDPIKarnataka #happygandhijayanti

1 week ago

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವುದು ಗಾಂಧಿಯ ನಿಜವಾದ ಸ್ಮರಣೆ. ~ದೇವನೂರು ಪುಟ್ಟನಂಜಯ್ಯ,ರಾಜ್ಯ ಉಪಾಧ್ಯಕ್ಷರು, SDPI ಕರ್ನಾಟಕ SDPIKarnataka #GandhiJayanti

1 week ago

Happy Gandhi Jyanthi

IT'S A DAY TO CELEBRATE, THE VALUE OF A SPECIAL PERSON, WHO IS THE REASON BEHIND THE FREEDOM OF OUR…

1 week ago

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಅಹಿಂಸೆಯ ಹಾದಿಯೇ ನಿಜವಾದ ಬಲ ಮಹಾತ್ಮ ಗಾಂಧಿಜಿಯ ತತ್ವಗಳಿಂದ ಸತ್ಯ ಮತ್ತು ನ್ಯಾಯದ ಸಮಾಜ ನಿರ್ಮಿಸೋಣ. ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್.ಡಿ.ಪಿ.ಐ ಕರ್ನಾಟಕ#HappyGandhiJayanti #SDPIKarnataka

1 week ago

ಸಂತಾಪ

ಮಂಗಳೂರು ಗ್ರಾಮಾಂತರ ಜಿಲ್ಲೆಯ (ದ.ಕ) ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಟ್ಟಂಪಾಡಿ ನಿವಾಸಿ, ಪಕ್ಷದ ಕಾರ್ಯಕರ್ತರಾದ ಬಶೀರ್ ನಿಡ್ಪಳ್ಳಿರವರ (34 ವ) ಮರಣ ವಾರ್ತೆ ಅತೀವ ದುಃಖವನ್ನು…

2 weeks ago

*ಲದಾಖ್ ನ ರಕ್ತಪಾತ ಮೋದಿ ಸರ್ಕಾರದ ವಂಚನೆಯನ್ನು ಬಹಿರಂಗಗೊಳಿಸಿದೆ…,*

ಲದಾಖ್ ನಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳ ಮೇಲೆ ಗುಂಡು ಹಾರಿಸಿ ನಾಲ್ಕು ಜನರ ಜೀವ ತೆಗೆದಿರುವ ಮೋದಿ ಆಡಳಿತದ ಕ್ರೌರ್ಯವನ್ನು ಸೋಶಿಯಲ್‌ ಡೆಮಾಕ್ರಟಿಲ್‌ ಪಾರ್ಟಿ ಆಫ್‌ ಇಂಡಿಯಾ (SDPI) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಕಿ ತೀವ್ರವಾಗಿ ಖಂಡಿಸಿದ್ದಾರೆ. ಈ ದಮನಕಾರಿ ಘಟನೆಯಲ್ಲಿ 70 ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿಯೂ ಸಹ ಸೇರಿದ್ದಾರೆ. ಹಿಮಾಲಯ ತಪ್ಪಲಿನ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವುದು, ಆರನೇ ಅನುಚ್ಚೇಧಕ್ಕೆ ಸೇರಿಸುವುದು, ಉದ್ಯೋಗದಲ್ಲಿ ಮೀಸಲಾತಿ, ಭೂಮಿ ಮತ್ತು ಸಾಂಸ್ಕೃತಿಕ ಗುರುತಿನ ರಕ್ಷಣೆಯ ನ್ಯಾಯಯುತ ಬೇಡಿಕೆಯೊಂದಿಗೆ ಪ್ರತಿಭಟಿಸುತ್ತಿದ್ದವರ ಮೇಲೆ ನಡೆದ ಈ ರಕ್ತಪಾತ ದಾಳಿ ರಾಜ್ಯದ ಜನರ ಹಕ್ಕುಗಳ ರಕ್ಷಣೆ ಮಾಡುವುದರಲ್ಲಿ ಸರ್ಕಾರ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿದೆ ಎಂದು ತೋರಿಸುತ್ತದೆ. ಈ ಎಲ್ಲಾ ಬೇಡಿಕೆಗಳು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಏಕಪಕ್ಷೀಯವಾಗಿ ವಿಭಜಿಸಿದ ದಿನದಂದಲೇ ಉದ್ಭವಿಸಿವೆ.

ಮೋದಿ ಸರ್ಕಾರ ಎಸಗಿರುವ ಮಹಾ ವಂಚನೆ ಇಲ್ಲಿ ಬಹಳ ಸ್ಪಷ್ಟವಾಗಿದ್ದು, ಆರ್ಟಿಕಲ್ 370 ರದ್ದು ಪಡಿಸಿದ ನಂತರ ಅಭಿವೃದ್ದಿಯ ಭರವಸೆಯನ್ನು ನೀಡಲಾಗಿತ್ತಾದರೂ, ವಾಸ್ತವದಲ್ಲಿ ಸರ್ಕಾರದ ನಿರ್ಲಕ್ಷ್ಯ, ನಿರುದ್ಯೋಗದಲ್ಲಿ ಏರಿಕೆ ಮತ್ತು ಪರಿಸರದ ನಾಶ ಮಾತ್ರ ಕಂಡು ಬಂದಿದೆ. ಇದು ದೇಶದ ಉತ್ತರ  ತುದಿಭಾಗದ ರಾಜ್ಯದಲ್ಲಿ ತೀವ್ರ ಪರಿಣಾಮ ಬೀರಿದೆ. ಉನ್ನತ ಮಟ್ಟದ ಸಮಿತಿಯ ಮೂಲಕ ಅರ್ಥಪೂರ್ಣ ಸಂವಾದ ನಡೆಸಬೇಕಾಗಿದ್ದ ಸಮಯದಲ್ಲಿ, ಸರ್ಕಾರ ಆಶ್ರುವಾಯು, ಲಾಠಿ ಬೀಸುವಿಕೆ, ಬಲವಂತ ಕರ್ಫ್ಯೂ ಹೇರಿಕೆ ಮತ್ತು ಚಳುವಳಿಗಾರರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ಸುಳ್ಳು ಪ್ರಕರಣಗಳ ದಾಖಲಿಸುವಿಕೆ ಇತ್ಯಾದಿ ದಬ್ಬಾಳಿಕೆಗಳು ನಡೆದಿದೆ. ನ್ಯಾಯಯುತ ತಮ್ಮ ಬೇಡಿಕೆಗಳಿಗೆ 15 ದಿನಗಳಿಂದ ಸೋನಂ ವಾಂಗ್ಚುಕ್ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮಾಡಿದ್ದಲ್ಲದೆ, ಗಲಭೆಗೆ ಅವರೇ ಕಾರಣ ಎಂದು ಅವರನ್ನು ದೂಷಿಸಲಾಗುತ್ತಿದೆ. ಇದು ಜನಪರ ಆಡಳಿತವಲ್ಲ,  ಇದು ಸರ್ವಾಧಿಕಾರಿ ಧೋರಣೆಯ ಪರಮಾವಧಿ.  ರೈತರ ಹೋರಾಟಗಳನ್ನು ಹತ್ತಿಕ್ಕುವುದರಿಂದ ಹಿಡಿದು, ಅಲ್ಪಸಂಖ್ಯಾತರ ದಮನದವರೆಗೆ ಈ ಆಡಳಿತದ ಧೋರಣೆ ಇದೇ ರೀತಿ ಮುಂದುವರೆದಿದೆ.

SDPI ಪಕ್ಷ ಲದಾಖ್ ಪ್ರದೇಶದ ಜನರ ಸಾಂವಿಧಾನಿಕ ಹಕ್ಕುಗಳ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ತನಿಖಾ ಸಂಸ್ಥೆಗಳ ದುರುಪಯೋಗ ಮತ್ತು ಒಡೆದು ಆಳುವ ರಾಜಕಾರಣದ ಭಾಗವಾದ, ಉದಾಹರಣೆಗೆ ವಕ್ಫ್ ತಿದ್ದುಪಡಿ ಮಸೂದೆ ಮತ್ತು ಹಿಂಸೆಯನ್ನು ಪೋಷಿಸುವ ಗೋ ರಕ್ಷಣಾ ನೀತಿಗಳು ದೇಶದಾದ್ಯಂತ ಶೋಷಿತ ಸಮುದಾಯಗಳನ್ನು ಇನ್ನಷ್ಟು ಮೂಲೆ ಗುಂಪು ಮಾಡಲು ಕಾರಣವಾಗುತ್ತಿವೆ.

ನ್ಯಾಯವನ್ನು ನಿರಾಕರಿಸುವ ಈ ರೀತಿಯ ದಮನಕಾರಿ ನೀತಿ ಭಾರತದ ಪ್ರಜಾಪ್ರಭುತ್ವದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಮತ್ತಷ್ಟು ಆಳಕ್ಕೆ ತಗೆದುಕೊಂಡು ಹೋಗುತ್ತದೆ. ಆದುದರಿಂದ ಪ್ರಧಾನಿ ಮೋದಿ ತಕ್ಷಣ ಅಲ್ಲಿ ಮಾತುಕತೆ ಆರಂಭಿಸಿ ಅವರ ಪ್ರಮುಖ ಬೇಡಿಕೆಯಾದ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವುದಲ್ಲದೇ,  ಈ ದಮನ ನೀತಿಯನ್ನು ಅಂತ್ಯಗೊಳಿಸಬೇಕು ಎಂದು SDPI ಆಗ್ರಹಿಸುತ್ತದೆ.

2 weeks ago

ಪ್ಯಾಲೆಸ್ತೀನಿನ ರಕ್ತದ ಕಲೆಗಳಿಂದ ಬ್ರಿಟನ್ ಕೈ ತೊಳೆಯಲು ಸಾಧ್ಯವಿಲ್ಲ

ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾ ಇತ್ತೀಚೆಗೆ ಪ್ಯಾಲೆಸ್ಟೈನನ್ನು ರಾಷ್ಟ್ರವಾಗಿ ಗುರುತಿಸುವ ನಿರ್ಧಾರವನ್ನು ಪ್ರಕಟಿಸಿದ್ದು, ದಶಕಗಳ ಹಳೆಯ ಸಮಸ್ಯೆಗೆ “ಎರಡು ರಾಷ್ಟ್ರ ಪರಿಹಾರ” ಅಗತ್ಯವಿದೆ ಎಂದು ಹೇಳಿದ್ದಾರೆ. ಇಸ್ರೇಲ್…

2 weeks ago