KannadaPressReleases

Kannada Press Releases

79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

"ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ" ಭಿನ್ನತೆಗಳನ್ನು ಮೀರಿದ ಸಹೋದರತ್ವ, ನ್ಯಾಯದಿಂದ ತುಂಬಿದ ರಾಷ್ಟ್ರ, ಸ್ವಾತಂತ್ರ್ಯವನ್ನು ರಕ್ಷಿಸಿ, ಜನರ ಗೌರವವನ್ನು ಉಳಿಸೋಣ! ಶಾಹಿದಾ ತಸ್ನೀಮ್,ಉಪಾಧ್ಯಕ್ಷೆ, SDPI ಕರ್ನಾಟಕ SDPIKarnataka…

3 days ago

ಗುಜರಾತ್, ಬಿಹಾರದಲ್ಲಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು?: ಪ್ರತಾಪ್ ಸಿಂಹರಿಗೆ ಎಸ್‌ಡಿಪಿಐ ಟಾಂಗ್
ಆಗಸ್ಟ್ 06, 2025

ಮೈಸೂರು : ಸತತ 25 ವರ್ಷಗಳಿಂದ ಬಿಜೆಪಿ ಆಡಳಿತವಿರುವ ಗುಜರಾತ್ ರಾಜ್ಯದಲ್ಲಿ ಮತ್ತು ಬಿಜೆಪಿ, ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರ ರಾಜ್ಯದಲ್ಲಿ ಸತತವಾಗಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು ಹೇಳು? ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸುವ ಮೂಲಕ ಕೆಆರ್‍ಎಸ್ ಜಲಾಶಯಕ್ಕೆ ಟಿಪ್ಪು ಅಡಿಗಲ್ಲು ಹಾಕಿದ್ದಾರೆ ಎಂಬ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ಕುರಿತು, ಯಾವ ಮುಲ್ಲ ಡಿಪಿಆರ್ ಮಾಡಿಸಿದ್ದು ಎಂದು ಪ್ರಶ್ನಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು.
ಮಹದೇವಪುರ ರಸ್ತೆಯಲ್ಲಿರುವ ಎಸ್‍ಡಿಪಿಐ ಕಚೇರಿಯಲ್ಲಿ ಬುಧವಾರ ಮದ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಒಬ್ಬ ದಡ್ಡ ಮತ್ತು ಮೂರ್ಖ, ಆತನಿಗೆ ಇತಿಹಾಸ ಗೊತ್ತಿಲ್ಲ, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಕೆಆರ್‍ಎಸ್ ಜಲಾಶವನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂದು ಎಲ್ಲೂ ಹೇಳಿಲ್ಲ, ಕಾವೇರಿ ನದಿಗೆ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಿ ಅದಕ್ಕೆ ಮೊದಲು ಅಡಿಗಲ್ಲು ಹಾಕಿಸಿದ್ದು ಟಿಪ್ಪು ಎಂದು ಹೇಳಿದ್ದಾರೆ ಅಷ್ಟೇ, ಈ ಶಾಸನವನ್ನು ಕೆಆರ್‍ಎಸ್ ಜಲಾಶಯ ಕಟ್ಟಿಸಿದ ಮಹಾತ್ಮರಾದ ನಾಲ್ವಡಿ ಕೃಷ್ಣರಾಜ ಪಡೆಯರ್ ಅವರೇ ಜಲಾಶಯದ ಬಳಿ ಟಿಪ್ಪು ಪರ್ಶಿಯನ್ ಭಾಷೆಯಲ್ಲಿ ಬರೆಸಿದ್ದ ಶಾಸನವನ್ನು ಕನ್ನಡದಲ್ಲಿ ಬರೆಸಿ ಜಲಾಶಯದ ಬಳಿಯೇ ಹಾಕಿಸುವ ಮೂಲಕ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಆದರೇ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ಕಳೆದ 25 ವರ್ಷಗಳಿಂದಲೂ ಬಿಜೆಪಿ ಸರ್ಕಾರದ ಆಡಳಿತವೇ ಇದೆ. ಪ್ರಧಾನಿ ಮೋದಿಯವರು ಮೊದಲು ಗುಜರಾತ್ ಮುಖ್ಯಮಂತ್ರಿ ಆಗಿದ್ದವರು, ಆ ರಾಜ್ಯದಲ್ಲಿ ಎಷ್ಟು ಸೇತುವೆಗಳು ಕುಸಿದಿವೆ, ಎಷ್ಟೋಂದು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಮತ್ತು ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರದಲ್ಲಿಯೂ ಹತ್ತಾರು ಸೇತುವೆಗಳು ಕುಸಿದಿವೆ, ಅವುಗಳ ಡಿಪಿಆರ್ ಮಾಡಿದವರು ಯಾರು ಹೇಳು ನೋಡೋಣ? ಎಂದು ಖಾರವಾಗಿ ಪ್ರಶ್ನಿಸಿದರು.

ವಿಶ್ವವಿಖ್ಯಾತ ಆಗ್ರಾದ ತಾಜ್‍ಮಹಲ್, ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ್, ಅಷ್ಟೇ ಏಕೆ ಕರ್ನಾಟಕದಲ್ಲಿರುವ ಗೋಲ್‍ಗುಂಬಜ್ ಕಟ್ಟಡಗಳ ಡಿಪಿಆರ್ ಮಾಡಿದವರು ಯಾರು ಎಂಬುದು ನಿನಗೆ ಗೊತ್ತಿದೆಯಾ? ನೀನೊಬ್ಬ ಮೂರ್ಖ ನಿನ್ನಂತೆ ಇರುವ ಮೂರ್ಖರು ಮಾತ್ರ ನಿನ್ನ ಮಾತಿಗೆ ಶಹಬ್ಬಾಸ್ ಹೇಳುತ್ತಾರೆ, ಬುದ್ಧಿವಂತರು ನಿನ್ನ ಮಾತಿಗೆ ಉಗಿಯುತ್ತಾರೆ ಎಂದು ಝಾಡಿಸಿದರು.

ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಖಾನ್ ಅವರು ಈ ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನೀರಾವರಿ ಇಲ್ಲದ ಸಂದರ್ಭದಲ್ಲಿ ಚೀನಾದಿಂದ ರೇಷ್ಮೆ ಬೆಳೆಯನ್ನು ತರಿಸಿ ತನ್ನ ರಾಜ್ಯದಲ್ಲಿ ಅಭಿವೃದ್ಧಿಪಡಿಸಿದರು, ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಿದರು. 1782 ರಲ್ಲಿ ಟಿಪ್ಪು ಸುಲ್ತಾನ್ ಅವರು, ಕಾವೇರಿ ನದಿಗೆ 70 ಅಡಿ ಎತ್ತರದ ಅಣೆಕಟ್ಟೆ ಕಟ್ಟುವ ಮೂಲಕ ರೈತರ ಬದುಕು ಹಸನು ಮಾಡಲು ಯತ್ನಿಸಿ ಅದಕ್ಕೆ ಹಣಕಾಸು ಹೊಂದಿಸಿದ್ದರು, ಆದರೇ, 3ನೇ ಮೈಸೂರು ಆಂಗ್ಲೋ ಯುದ್ಧದಲ್ಲಿ ಟಿಪ್ಪು ಬ್ರಿಟೀಷರ ವಿರುದ್ಧ ಸೋಲು ಅನುಭವಿಸಿ ಯುದ್ಧದ ಖರ್ಚು 3 ಕೋಟಿ ಹಣವನ್ನು ಬ್ರಿಟಿಷರಿಗೆ ಕೊಡಲಾಗದೆ ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ದು ಯಾರೂ ಮರೆಯಲು ಸಾಧ್ಯವಿಲ್ಲ, ಬಳಿಕ ನಾಲ್ಕನೇ ಮೈಸೂರು-ಆಂಗ್ಲೋ ಯುದ್ಧದಲ್ಲಿ ಟಿಪ್ಪು ವೀರ ಮರಣ ಹೊಂದಿದಾಗ ಅಣೆಕಟ್ಟೆ ಕಟ್ಟಲು ಆಗುವುದಿಲ್ಲ, ಆದರೇ ರಾಜರ್ಷಿ ನಾಲ್ವಡಿ ಕೃಷ್ಣರಾಯ ಒಡೆಯರ್ ಅವರು ಕೆಆರ್‍ಎಸ್ ಜಲಾಶಯ ಕಟ್ಟುವ ಸಂದರ್ಭದಲ್ಲಿ ಸಿಕ್ಕ ಶಾಸನವನ್ನು ಅದೇ ಜಾಗದಲ್ಲಿ ಇರಿಸಿದ್ದರು. ನಿಮ್ಮಂತಹವರು ಏನಾದರೂ ಆಗ ಇದ್ದಿದ್ದರೆ ಆ ಶಾಸನವನ್ನು ಒಡೆದುಹಾಕುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಟಿಪ್ಪು ಸುಲ್ತಾನ್ ತನ್ನ ರಾಜ್ಯದ ಒಟ್ಟು ಭೂಮಿಯ ಶೇ.30 ರಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರು, ಅವರು ತಮ್ಮ ರಾಜ್ಯದಲ್ಲಿ 40 ಸಾವಿರ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದರು, ನೀನು 10 ವರ್ಷ ಎಂಪಿ ಆಗಿದ್ದೆ ಎಷ್ಟು ಕೆರೆಗಳನ್ನು ಕಟ್ಟಿಸಿದ್ದಿಯಾ ಅಥವಾ ಎಷ್ಟು ಕೆರೆಗಳ ಹೂಳು ಎತ್ತಿಸಿದ್ದೀಯಾ ಹೇಳು?

ಟಿಪ್ಪು ಸುಲ್ತಾನರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ನೀನು ಮೈಸೂರು-ಕೊಡಗು ಜಿಲ್ಲೆಯಲ್ಲಿ 40-50 ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂ ರಹಿತರು ಅರ್ಜಿ ನಮೂನೆ 50, 53, 57 ರಲ್ಲಿ ತಮಗೆ ಭೂ ಒಡೆತನ ನೀಡುವಂತೆ ಸರ್ಕಾರಕ್ಕೆ 10 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿ ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಎಷ್ಟು ಜನರಿಗೆ ನೀನು ಭೂಮಿ ಕೊಡಿಸಿದ್ದೀಯಾ ಹೇಳು? ಟಿಪ್ಪು ಸುಲ್ತಾನರು ತಮ್ಮ ಆಳ್ವಿಕೆಯಲ್ಲೇ ಭೂ ರಹಿತ ದಲಿತರಿಗೆ, ಇತರರಿಗೆ ಭೂಮಿ ಒಡೆತನ ನೀಡಿದ್ದರು ಎನ್ನುವುದು ನಿನಗೆ ಗೊತ್ತಿಲ್ಲದಿದ್ದರೆ, ಇತಿಹಾಸ ಓದು ಎಂದು ಅಬ್ದುಲ್ ಮಜೀದ್ ಟಾಂಗ್ ನೀಡಿದರು.

1340ರಲ್ಲಿ ಹೊಯ್ಸಳರ ಕಾಲದಲ್ಲಿ ಮುಡುಕುತೋರೆ ಬಳಿ ಅಣೆಕಟ್ಟೆ ಕಟ್ಟಲಾಗಿತ್ತು, ಅದಕ್ಕೂ ಮುನ್ನ ಗಂಗರು ಪಾಂಡವಪುರದ ಬಳಿ ಅಣೆಕಟ್ಟೆ ಕಟ್ಟಿದ್ದಾರೆ. ಅದರ ಡಿಪಿಆರ್ ಕೇಳಲು ನಿನಗೆ ಆಗುತ್ತದೆಯಾ? ಪದೇ ಪದೇ ಟಿಪ್ಪು ಸುಲ್ತಾನರ ಅವಹೇಳನ ಸಲ್ಲದು, ಟಿಪ್ಪು ಒಬ್ಬ ಮುಸ್ಲಿಂ ದೊರೆ ಎಂದು ಬಿಜೆಪಿಯವರು ಅವರ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೇ, ಇತಿಹಾಸವನ್ನು ಬದಲಾಯಿಸಲು ಅಸಾಧ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸ್ವಾಮಿ, ಮೈಸೂರು ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ರಫತ್ ಖಾನ್, ಫಿರ್ದೋಸ್, ಸಫಿಯುಲ್ಲಾ ಇದ್ದರು.

1 week ago

ಪತ್ರಿಕಾ ಪ್ರಕಟಣೆ
ದಿನಾಂಕ: 06,ಆಗಸ್ಟ್ 2025

*ಸಾರಿಗೆ ನೌಕರರ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸಬೇಕು – ಎಸ್‌ಡಿಪಿಐ*

ಸಾರಿಗೆ ಇಲಾಖೆಯ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸುವಂತೆ *ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್* ಪತ್ರಿಕಾ ಪ್ರಕಟಣೆಯಲ್ಲಿ  ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು
ರಾಜ್ಯದಾದ್ಯಂತ ಸಾರಿಗೆ ನೌಕರರ ಆಂದೋಲನದಿಂದಾಗಿ ಸಾವಿರಾರು ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯ ಜನರ ದಿನನಿತ್ಯದ ಸಂಚಾರ ಅಸ್ತವ್ಯಸ್ತವಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ಆಸ್ಪತ್ರೆಗಳಿಗೆ ತೆರಳುವವರು ಸೇರಿದಂತೆ ಎಲ್ಲಾ ವರ್ಗದ ಜನರು ಮುಷ್ಕರದ ಪರಿಣಾಮ ಎದುರಿಸುತ್ತಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳು ದೀರ್ಘಕಾಲದಿಂದ ಬಾಕಿ ಉಳಿದಿವೆ. ಅವರ ಹಕ್ಕು, ಭದ್ರತೆ ಹಾಗೂ ವೇತನ ಸಂಬಂಧಿತ ಸಮಸ್ಯೆಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯ. ಜನತೆಗೆ ತೊಂದರೆ ಉಂಟಾಗದಂತೆ ಸರಕಾರ ತಕ್ಷಣ ಕ್ರಮ ಕೈಗೊಂಡು ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದುದರಿಂದ ಸರಕಾರವು ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಸೂಕ್ತ ಸಂವಾದ ನಡೆಸಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕು ಮತ್ತು ಅವರ ಬೇಡಿಕೆಗಳನ್ನು ಅರ್ಥಮಾಡಿಕೊಂಡು ಸಮನ್ವಯ ಸಾಧಿಸುವುದು ಆಡಳಿತ ಪಕ್ಷದ ಕರ್ತವ್ಯವಾಗಿದೆ ಎಂದು *ಬಿ. ಆರ್. ಭಾಸ್ಕರ್ ಪ್ರಸಾದ್* ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

2 weeks ago

ಪತ್ರಿಕಾ ಪ್ರಕಟಣೆ

*ಸ್ಥಳೀಯ ಸಂಸ್ಥೆಗಳ ಆಡಳಿತವು ಪ್ರಜಾಪ್ರಭುತ್ವದ ಅಡಿಪಾಯ: ಆಯ್ಕೆಯಾದ ಪ್ರತಿನಿಧಿಗಳು ಕಾರ್ಯಕ್ಷಮತೆಯ ಮೂಲಕ ಪಕ್ಷವನ್ನು ‘Emerging to Power’ ದಿಕ್ಕಿಗೆ ಮುನ್ನಡೆಸಬೇಕು” – ಅಫ್ಸರ್ ಕೊಡ್ಲಿಪೇಟೆ*

*ಕಲ್ಯಾಣ ಕರ್ನಾಟಕ ಭಾಗದ ಎಸ್‌ಡಿಪಿಐ ಜನಪ್ರತಿನಿಧಿಗಳ ಸಭೆ*

*ಗುಲ್ಬರ್ಗ : 4 ಆಗಷ್ಟ್ 2025 –*

ಸ್ಥಳೀಯ ಸಂಸ್ಥೆಗಳ ಆಡಳಿತವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂಬ ಘೋಷಣೆಯೊಂದಿಗೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ವ್ಯಾಪ್ತಿಯ ಎಸ್‌ಡಿಪಿಐ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಮೇಲುಸ್ತುವಾರಿಗಳ (ERM) ವಿಶೇಷ ಸಭೆ, ರಾಜ್ಯ ಪ್ರದಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ERM ಉಸ್ತುವಾರಿ ಅಬ್ರಾರ್ ಅಹ್ಮದ್ ರವರ ನೇತೃತ್ವದಲ್ಲಿ ಗುಲ್ಬರ್ಗ ನಗರದಲ್ಲಿ ಜರುಗಿತು.

ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅಫ್ಸರ್ ಕೊಡ್ಲಿಪೇಟೆ ಅವರು, “ಪಕ್ಷದ ರಾಜಕೀಯ ಶಕ್ತಿ ಹಾಗೂ ಸಾರ್ವಜನಿಕ ಪ್ರಭಾವವನ್ನು ವಿಸ್ತರಿಸಲು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಮುಖವಾಗಿವೆ. ಈ ಹಿನ್ನಲೆಯಲ್ಲಿ, ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳು ರಾಜಕೀಯ ಬದ್ಧತೆ, ನೈತಿಕತೆ ಮತ್ತು ಕಾರ್ಯಕ್ಷಮತೆಯ ಮೂಲಕ ಪಕ್ಷವನ್ನು ‘Emerging to Power’ ದಿಕ್ಕಿಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ,” ಎಂದು ಸೂಚಿಸಿದರು.

ಅಬ್ರಾರ್ ಅಹ್ಮದ್ ಮಾತನಾಡುತ್ತಾ, “ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿರಂತರ ತರಬೇತಿಗಳಲ್ಲಿ ಭಾಗವಹಿಸಿ ಉತ್ತಮ ಆಡಳಿತದ ಮಾದರಿಯನ್ನು ನೀಡಬೇಕು,” ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಶಹಾಪುರ ನಗರಸಭಾ ಸದಸ್ಯೆ ಫಿರ್ದೋಸ್ ಖಾತೂನ್, ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಬಳ್ಳಾರಿ ಮತ್ತು ಬೀಜಾಪುರ ಜಿಲ್ಲೆಗಳ ವಿವಿಧ ಪಂಚಾಯಿತಿಗಳ ಸದಸ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ, ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು, ಸರಕಾರದ ಯೋಜನೆಗಳ ಅನುಷ್ಠಾನ ಹಾಗೂ ಜನರ ವಿಶ್ವಾಸ ಗಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಈ ಸಭೆ, ಪಕ್ಷದ ಜನಪರ ರಾಜಕೀಯ ಭದ್ರತೆಗಾಗಿ ದಿಕ್ಕು ತೋರಿದ ಹೆಜ್ಜೆಯಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗೆ ಬುನಾದಿ ಕಲ್ಪಿಸಿದೆ.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹೀಮ್ ಪಟೇಲ್, ಗುಲ್ಬರ್ಗ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಮೋಹಿಸಿನ್, ಯಾದಗಿರಿ ಜಿಲ್ಲಾಧ್ಯಕ್ಷರಾದ ಇಸಾಖ್  ಹುಸೇನ್, ಗುಲ್ಬರ್ಗ ಜಿಲ್ಲಾ ಕಾರ್ಯದರ್ಶಿ ಹಾಗೂ ERM ಉಸ್ತುವಾರಿ ಶಕೀಲ್ ಪಟೇಲ್ ಹಾಜರಿದ್ದರು.

2 weeks ago

ಗಾಜಾದಲ್ಲಿ ನರಮೇಧ ಮತ್ತು ಹಸಿವಿನಿಂದ ಆಗುತ್ತಿರುವ ಸಾವುಗಳ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಒತ್ತಾಯ

ಗಾಜಾದಲ್ಲಿ ತೀವ್ರ ಹಸಿವಿನಿಂದ 85 ಮಕ್ಕಳೂ ಸೇರಿ 127 ಅಮಾಯಕ ಪ್ಯಾಲೆಸ್ಟೈನಿಯನ್ನರ ಸಾವಿನ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ…

3 weeks ago

ಭೂ ಸ್ವಾಧೀನ ವಿರೋಧಿ ಹೋರಾಟ ಅಂತಿಮವಾಗಿ ಗೆದ್ದಿದೆ

ದೇವನಹಳ್ಳಿ ರೈತರ ವಿಜಯವನ್ನು ಎಸ್.ಡಿ.ಪಿ.ಐ ಸ್ವಾಗತಿಸುತ್ತದೆ ಬೆಂಗಳೂರು 15-07-2025 : ರೈತರ ಹೋರಾಟಕ್ಕೆ ಸ್ಪಂದಿಸಿ, ಬೂಸ್ವಾಧೀನ ಕೈ ಬಿಟ್ಟ ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸ್ವಾಗತರ್ಹ SDPI. ದೇವನಹಳ್ಳಿ…

1 month ago

ಪತ್ರಿಕಾ ಪ್ರಕಟಣೆ

ಚುನಾವಣಾ ಪೂರ್ವ ತಯಾರಿಗಳ ಬಗ್ಗೆ ಕೊಪ್ಪಳ ಜಿಲ್ಲಾ ಮತ್ತು ವಿಧಾನಸಭಾ ನಾಯಕರ ವಿಶೇಷ ಸಭೆ*

ಗಂಗಾವತಿ:ಜುಲೈ 8:
ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿಯ ವಿಶೇಷ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಮನಿಯಾರ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಜದ್ ಖಾನ್ ರವರ ಸಮ್ಮುಖದಲ್ಲಿ ನಡೆಯಿತು.

ಜಿಲ್ಲಾ, ವಿಧಾನಸಭಾ ಮತ್ತು ವಿವಿಧ ಹಂತದ ಪದಾಧಿಕಾರಿಗಳು, ಪ್ರತಿನಿಧಿಗಳು ಹಾಗೂ ನಾಯಕರು ಮುಂಬರಲಿರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳ ಪೂರ್ವ ತಯಾರಿಗಳ ಬಗ್ಗೆ, ವಾರ್ಡ್ ಹಾಗೂ ಬೂತ್ ಮಟ್ಟದ ಸಂಘಟನಾ ಸ್ಥಿತಿಗತಿಯ ಕುರಿತು ವಿಶ್ಲೇಷಣೆ, ಕಾರ್ಯತಂತ್ರಗಳ ವಿವಿಧ ಸಮಿತಿಗಳ ವರದಿಗಳು ಹಾಗೂ ಜವಾಬ್ದಾರಿಗಳ ಹಂಚಿಕೆ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್, “ಪ್ರತಿಯೊಬ್ಬನೂ ಚುನಾವಣಾ ಕಾರ್ಯಗಳತ್ತ ಹೆಚ್ಚು ಕಾಳಜಿಯಿಂದ ನಿರತರಾಗಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ನಮ್ಮ ಮೇಲೆ ಇರುವ ಪ್ರಮುಖ ಜವಾಬ್ದಾರಿ. ಸ್ಥಳೀಯ ಸಂಸ್ಥೆ ಚುನಾವಣೆಯ ವಿಳಂಬವು ಮತ್ತು ಸರ್ಕಾರದ ನಿರ್ಲಕ್ಷ್ಯವೂ ಪ್ರಜಾಪ್ರಭುತ್ವದ ಅಪಮಾನ” ಎಂದು ಅಭಿಪ್ರಾಯಪಟ್ಟರು .
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, “ಪಕ್ಷವನ್ನು ಬೂತ್ ಮಟ್ಟದ ಬಲಗೊಳಿಸುವುದು ಅವಶ್ಯಕ. ಪ್ರತಿಯೊಬ್ಬ ಕಾರ್ಯಕರ್ತನು ‘ಬೂತ್ ಗೆಲುವು ನನ್ನ ನಿಲುವು’ ಎಂಬ ಘೋಷವಾಕ್ಯದಡಿಯಲ್ಲಿ ತಕ್ಕ ರೀತಿಯಲ್ಲಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ಸಭೆಯ ಅಂತಿಮ ಭಾಗದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ನಾಯಕರು ತಮ್ಮ ಕ್ಷೇತ್ರದ ಸಂಘಟನೆ ಬಲವರ್ಧನೆಗಾಗಿ ತಂತ್ರಮೂಲಕ ಪ್ರಸ್ತಾವನೆಗಳನ್ನು ಮಂಡಿಸಿದರು. ಕ್ಷೇತ್ರವಾರು ಕಾರ್ಯತಂತ್ರ, ಯೋಜಿತ ಚಟುವಟಿಕೆಗಳ ಬಗ್ಗೆ ಆಳವಾದ ಚರ್ಚೆ ನಡೆಸಿ, ಮುಂದಿನ ಹಂತದ ಕಾರ್ಯತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಯೂಸುಫ್ ಮೋದಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸೈಯದ್ ಶಾಕೀಬ್, ಜಿಲ್ಲಾ ಕಾರ್ಯದರ್ಶಿ ಚಾಂದ್, ಜಿಲ್ಲಾ ಕೋಶಾಧಿಕಾರಿ ಮಹೇಬೂಬ್ ರಜಾ, ಗಂಗಾವತಿ ವಿಧಾನ ಸಭಾ ಅಧ್ಯಕ್ಷರು ಇರ್ಫಾನ್, ಕೊಪ್ಪಳ ವಿಧಾನಸಭಾ ಅಧ್ಯಕ್ಷರು ಸಲೀಮ್ ಖಾದ್ರಿ, ಕನಕಗಿರಿ ವಿಧಾನಸಭಾ ಅಧ್ಯಕ್ಷರು ಅಜ್ಮಿರ್ ಸಿಂಗನಾಳ್,ಕುಷ್ಟಗಿ ವಿಧಾನಸಭಾ ಉಪಾಧ್ಯಕ್ಷರು ಸಲೀಮ್ ಕೆ ಬಿ, ಸಿಂದನೂರ್ ವಿಧಾನಸಭಾ ಅಧ್ಯಕ್ಷರು ಆಸೀಫ್ ಕೆ, ಕಂಪ್ಲಿ ವಿಧಾನಸಭಾ ಅಧ್ಯಕ್ಷರು ಇಮ್ರಾನ್
ಉಪಸ್ಥಿತರಿದ್ದರು.

1 month ago

SDPI ರಾಜ್ಯ ನಾಯಕರು ಗದಗ ಜಿಲ್ಲೆಗೆ ಭೇಟಿ: ರಾಜಕೀಯ ಬದ್ಧತೆ, ಪರಸ್ಪರ ಗೌರವ ಮತ್ತು ಭವಿಷ್ಯದ ಸಹಯೋಗದ ಚರ್ಚೆ

ಗದಗ, 26 ಜೂನ್ 2025: ಎಸ್‌ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಅಪ್ಪರ್ ಕೆ.ಆರ್.ನಗರ…

2 months ago

ಪತ್ರಿಕಾ ಪ್ರಕಟಣೆ

ದುಂಡು ಮೇಜಿನ ಸಭೆ: ಜನಗಣತಿ ಮತ್ತು ಸಮೀಕ್ಷೆ ಕುರಿತ ಗೊಂದಲ ನಿವಾರಣೆಗೆ ಸಜ್ಜಾದ SDPI ಬೆಂಗಳೂರು, ದಿನಾಂಕ: ಜೂನ್ 16: ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ…

2 months ago

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಸೈಯದ್ ದಸ್ತಗೀರ್…

8 months ago