KannadaPressReleases

ಪತ್ರಿಕಾ ಪ್ರಕಟಣೆ

ಚುನಾವಣಾ ಪೂರ್ವ ತಯಾರಿಗಳ ಬಗ್ಗೆ ಕೊಪ್ಪಳ ಜಿಲ್ಲಾ ಮತ್ತು ವಿಧಾನಸಭಾ ನಾಯಕರ ವಿಶೇಷ ಸಭೆ*

ಗಂಗಾವತಿ:ಜುಲೈ 8:
ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿಯ ವಿಶೇಷ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಮನಿಯಾರ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಜದ್ ಖಾನ್ ರವರ ಸಮ್ಮುಖದಲ್ಲಿ ನಡೆಯಿತು.

ಜಿಲ್ಲಾ, ವಿಧಾನಸಭಾ ಮತ್ತು ವಿವಿಧ ಹಂತದ ಪದಾಧಿಕಾರಿಗಳು, ಪ್ರತಿನಿಧಿಗಳು ಹಾಗೂ ನಾಯಕರು ಮುಂಬರಲಿರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳ ಪೂರ್ವ ತಯಾರಿಗಳ ಬಗ್ಗೆ, ವಾರ್ಡ್ ಹಾಗೂ ಬೂತ್ ಮಟ್ಟದ ಸಂಘಟನಾ ಸ್ಥಿತಿಗತಿಯ ಕುರಿತು ವಿಶ್ಲೇಷಣೆ, ಕಾರ್ಯತಂತ್ರಗಳ ವಿವಿಧ ಸಮಿತಿಗಳ ವರದಿಗಳು ಹಾಗೂ ಜವಾಬ್ದಾರಿಗಳ ಹಂಚಿಕೆ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್, “ಪ್ರತಿಯೊಬ್ಬನೂ ಚುನಾವಣಾ ಕಾರ್ಯಗಳತ್ತ ಹೆಚ್ಚು ಕಾಳಜಿಯಿಂದ ನಿರತರಾಗಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ನಮ್ಮ ಮೇಲೆ ಇರುವ ಪ್ರಮುಖ ಜವಾಬ್ದಾರಿ. ಸ್ಥಳೀಯ ಸಂಸ್ಥೆ ಚುನಾವಣೆಯ ವಿಳಂಬವು ಮತ್ತು ಸರ್ಕಾರದ ನಿರ್ಲಕ್ಷ್ಯವೂ ಪ್ರಜಾಪ್ರಭುತ್ವದ ಅಪಮಾನ” ಎಂದು ಅಭಿಪ್ರಾಯಪಟ್ಟರು .
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, “ಪಕ್ಷವನ್ನು ಬೂತ್ ಮಟ್ಟದ ಬಲಗೊಳಿಸುವುದು ಅವಶ್ಯಕ. ಪ್ರತಿಯೊಬ್ಬ ಕಾರ್ಯಕರ್ತನು ‘ಬೂತ್ ಗೆಲುವು ನನ್ನ ನಿಲುವು’ ಎಂಬ ಘೋಷವಾಕ್ಯದಡಿಯಲ್ಲಿ ತಕ್ಕ ರೀತಿಯಲ್ಲಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ಸಭೆಯ ಅಂತಿಮ ಭಾಗದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ನಾಯಕರು ತಮ್ಮ ಕ್ಷೇತ್ರದ ಸಂಘಟನೆ ಬಲವರ್ಧನೆಗಾಗಿ ತಂತ್ರಮೂಲಕ ಪ್ರಸ್ತಾವನೆಗಳನ್ನು ಮಂಡಿಸಿದರು. ಕ್ಷೇತ್ರವಾರು ಕಾರ್ಯತಂತ್ರ, ಯೋಜಿತ ಚಟುವಟಿಕೆಗಳ ಬಗ್ಗೆ ಆಳವಾದ ಚರ್ಚೆ ನಡೆಸಿ, ಮುಂದಿನ ಹಂತದ ಕಾರ್ಯತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಯೂಸುಫ್ ಮೋದಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸೈಯದ್ ಶಾಕೀಬ್, ಜಿಲ್ಲಾ ಕಾರ್ಯದರ್ಶಿ ಚಾಂದ್, ಜಿಲ್ಲಾ ಕೋಶಾಧಿಕಾರಿ ಮಹೇಬೂಬ್ ರಜಾ, ಗಂಗಾವತಿ ವಿಧಾನ ಸಭಾ ಅಧ್ಯಕ್ಷರು ಇರ್ಫಾನ್, ಕೊಪ್ಪಳ ವಿಧಾನಸಭಾ ಅಧ್ಯಕ್ಷರು ಸಲೀಮ್ ಖಾದ್ರಿ, ಕನಕಗಿರಿ ವಿಧಾನಸಭಾ ಅಧ್ಯಕ್ಷರು ಅಜ್ಮಿರ್ ಸಿಂಗನಾಳ್,ಕುಷ್ಟಗಿ ವಿಧಾನಸಭಾ ಉಪಾಧ್ಯಕ್ಷರು ಸಲೀಮ್ ಕೆ ಬಿ, ಸಿಂದನೂರ್ ವಿಧಾನಸಭಾ ಅಧ್ಯಕ್ಷರು ಆಸೀಫ್ ಕೆ, ಕಂಪ್ಲಿ ವಿಧಾನಸಭಾ ಅಧ್ಯಕ್ಷರು ಇಮ್ರಾನ್
ಉಪಸ್ಥಿತರಿದ್ದರು.

3 months ago

SDPI ರಾಜ್ಯ ನಾಯಕರು ಗದಗ ಜಿಲ್ಲೆಗೆ ಭೇಟಿ: ರಾಜಕೀಯ ಬದ್ಧತೆ, ಪರಸ್ಪರ ಗೌರವ ಮತ್ತು ಭವಿಷ್ಯದ ಸಹಯೋಗದ ಚರ್ಚೆ

ಗದಗ, 26 ಜೂನ್ 2025: ಎಸ್‌ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಅಪ್ಪರ್ ಕೆ.ಆರ್.ನಗರ…

3 months ago

ಪತ್ರಿಕಾ ಪ್ರಕಟಣೆ

ದುಂಡು ಮೇಜಿನ ಸಭೆ: ಜನಗಣತಿ ಮತ್ತು ಸಮೀಕ್ಷೆ ಕುರಿತ ಗೊಂದಲ ನಿವಾರಣೆಗೆ ಸಜ್ಜಾದ SDPI ಬೆಂಗಳೂರು, ದಿನಾಂಕ: ಜೂನ್ 16: ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ…

4 months ago

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಸೈಯದ್ ದಸ್ತಗೀರ್…

10 months ago

ತೀರ್ಥಹಳ್ಳಿ ಸರ್ಕಾರಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಗವದ್ಗೀತೆ ಹಂಚಿಕೆ ಮತ್ತು ಅತಿಥಿಯಾಗಿದ್ದ ನ್ಯಾಯಾಧೀಶರಿಂದಲೇ ಜೈ ಶ್ರೀರಾಮ್ ಘೋಷಣೆ ಕೂಗಿ ಭಗವದ್ಗೀತೆ ಸಂವಿಧಾನಕ್ಕೆ ಸಮ ಎಂದಿದ್ದು ಸಂವಿಧಾನ ವಿರೋಧಿ ನಡವಳಿಕೆ: ಬಿ.ಆರ್. ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ

ಬೆಂಗಳೂರು, 27 ಜನವರಿ 2024: ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆಯ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ತಹಶೀಲ್ದಾರ್…

2 years ago

ಬಾಬರಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ವಿರುದ್ಧ ಏಕಿಷ್ಟು ದ್ವೇಷ? ಯಾರನ್ನು ಮೆಚ್ಚಿಸಲು ಇಷ್ಟೊಂದು ಪ್ರಕರಣ, ಬಂಧನಗಳು?: ಬಿ.ಆರ್. ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ

ಬೆಂಗಳೂರು, 25 ಜನವರಿ 2024: ಬಾಬರಿಯನ್ನು ಕಳೆದುಕೊಂಡು ನೋವಿನಲ್ಲಿರುವ ಮುಸ್ಲಿಮ್ ಸಮುದಾಯದ ಮೇಲೆ ಅವರ ಮತಗಳನ್ನು ಪಡೆದು ಅಧಿಕಾರ ಭದ್ರ ಮಾಡಿಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಏಕಿಷ್ಟು ದ್ವೇಷ?…

2 years ago

ರಾಮಮಂದಿರವನ್ನು ಬಾಬರಿ ಮಸೀದಿಯ ಭೂಮಿಯಲ್ಲಿ ನಿರ್ಮಿಸಲಾಗಿದೆ

ರಾಮಮಂದಿರವನ್ನು ನಿರ್ಮಿಸಿರುವ ಭೂಮಿ ವಕ್ಫ್ ಗೆ ಸೇರಿದ ಬಾಬರಿ ಮಸೀದಿಯ ಭೂಮಿಯಾಗಿದೆ. ಅಲ್ಲಿ ಮಂದಿರವನ್ನು ನಿರ್ಮಿಸಿದ್ದರೂ ಅದು ವಕ್ಫ್ ಸ್ವತ್ತಾಗಿದ್ದು, ಬಾಬರಿ ಮಸೀದಿಯ ಭೂಮಿಯಾಗಿಯೇ ಉಳಿಯಲಿದೆ ಎಂದು…

2 years ago

ಬಿಲ್ಕಿಸ್ ಬಾನೋ ಪ್ರಕರಣದ ಕೊಲೆ ಪಾತಕಿ, ಅತ್ಯಾಚಾರಿಗಳು ಮತ್ತೆ ಜೈಲಿಗೆ ಹೋಗಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪು ಮೋದಿ ಸರ್ಕಾರದ ಕೋಮು ನೀತಿಗೆ ಕಪಾಳಮೋಕ್ಷ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 10 ಜನವರಿ 2024: ಬಿಲ್ಕಿಸ್ ಬಾನೋ ಪ್ರಕರಣದ ಪಾತಕಿಗಳನ್ನು ಸನ್ನಡತೆ ಎಂದು ಸಬೂಬು ಹೇಳಿ ಬಿಡುಗಡೆ ಮಾಡಿದ್ದು ನೀಚ ಕೃತ್ಯ. ಗುಜರಾತ್ ಸರ್ಕಾರದ ಈ ನೀಚ…

2 years ago

ಪತ್ರಿಕಾ ಪ್ರಕಟಣೆ

ಬೆಂಗಳೂರು ಶಾಲೆಗಳಿಗೆ ಹುಸಿ ಬಾಂಬ್ ಕರೆಗಳ ಮೂಲ ಮತ್ತು ಉದ್ದೇಶದ ಸಮಗ್ರ ತನಿಖೆಯಾಗಲಿ. ಇಂತಹ ಕರೆಗಳ ಹಿಂದೆ ಯೋಜಿತ ಷಡ್ಯಂತ್ರವಿರುವಂತಿದೆ: ದೇವನೂರು ಪುಟ್ಟನಂಜಯ್ಯ, ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ…

2 years ago

ಪತ್ರಿಕಾ ಪ್ರಕಟಣೆ

ಖ್ಯಾತ ಬಹು ಭಾಷ ನಟ ಪ್ರಕಾಶ್ ರೈಗೆ ಇಡಿ ಸಮ್ಮನ್ಸ್: ಸರಕಾರವನ್ನು ಟೀಕೆ ಮಾಡುವವರನ್ನು ಹತ್ತಿಕ್ಕುವ ಅಜೆಂಡಾದ ಮುಂದುವರಿದ ಭಾಗ: ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಪ್ರಧಾನ…

2 years ago