Type your search query and hit enter:
News
feature
News
Politics
ಎಸ್.ಡಿ.ಪಿ.ಐ ದ.ಕ ಜಿಲ್ಲೆಯ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆ-2023
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ದ.ಕ ಜಿಲ್ಲೆಯ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆಯನ್ನು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣಾ ತಂತ್ರ ಮತ್ತು ಬೂತ್ ಮಟ್ಟದಲ್ಲಿ ನಡೆಸಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸಮಾರೋಪ ಮಾತುಗಳನ್ನು ಆಡಿದರು, ಮಂಗಳೂರು (ಉಳ್ಳಾಲ) ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ಹಾಗೂ ಎಲ್ಲ ಬೂತ್ ಸಮಿತಿ ಉಸ್ತುವಾರಿಗಳು ಭಾಗವಹಿಸಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದ.ಕ ಜಿಲ್ಲೆ
3 years ago
feature
News
Politics
ಸಂತಾಪ
ಸಾಮಾಜಿಕ ಅಸಮಾನತೆ, ಕೋಮುವಾದ, ಭ್ರಷ್ಟಾಚಾರ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಹಿರಿಯ ಸಮಾಜವಾದಿ
ಪ. ಮಲ್ಲೇಶ್
ಅವರು ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಸಾಮಾಜಿಕ ನ್ಯಾಯದ ಒಂದು ಮುಖ್ಯ ಧ್ವನಿ ಇಲ್ಲವಂತಾಗಿದೆ. ಅವರ ನಿಧನಕ್ಕೆ ಎಸ್ಡಿಪಿಐ ಪಕ್ಷದ ವತಿಯಿಂದ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
3 years ago
feature
News
Politics
26 جنوری يوم جمهوريه
آئی جمهوريه
کے محافظ بنیں
سوشیل ڈیموکریٹک پارٹی آف انڈیا کر نائک
3 years ago
feature
News
Politics
Let’s be the Saviors of the Republic
January 26 Republic Day
SOCIAL DEMOCRATIC PARTY OF INDIA – KARNATAKA
3 years ago
feature
News
Politics
ಗಣರಾಜ್ಯದ ಸಂರಕ್ಷಕರಾಗೋಣ
ಜನವರಿ 26 ಗಣರಾಜ್ಯ ದಿನಾಚರಣೆ
ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ
3 years ago
feature
News
Politics
40% ವಾಪಸ್ ಬರುತ್ತಲ್ಲಾ ಅದಕ್ಕೆನಾ? ಅಥವಾ ಚುನಾವಣಾ ಗಿಮಿಕೇ? ಕೊಡಗಿನಲ್ಲಿ ಪ್ರವಾಹ ಬಂದು 3 ವರ್ಷ ಆಯಿತು ಇನ್ನೂ ಕೆಲವು ಸಂತ್ರಸ್ತರಿಗೆ ಸರಿಯಾದ ವ್ಯವಸ್ಥೆ ಮಾಡಲಾಗಲಿಲ್ಲ,ಬೆಂಗಳೂರು ಸಿಂಗಾಪುರ ಮಾಡಿದ್ದಾಯ್ತು ಈಗ ಕೊಡಗಿನ ಸರಿದಿಯೇ? @CMofKarnataka ರವರೇ ಮೊದಲು ಕೊಡಗಿಗೆ ಬಹು ಬೇಡಿಕೆಯ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡಿ ಸಾಕು
~ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ
3 years ago
feature
News
Politics
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಂಸ್ಥಾಪನಾ ದಿನ ಜನವರಿ 19
ಯಾವುದೇ ವಿಪತ್ತು ನಡೆದಾಗ ತಮ್ಮ ಜೀವ ಪಣಕ್ಕಿಟ್ಟು ಜನರನ್ನು ರಕ್ಷಿಸುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಧೀರ ಯೋಧರಿಗೆ ಧನ್ಯವಾದಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ- ಕರ್ನಾಟಕ
3 years ago
feature
News
Politics
✅ ರಾಜ್ಯದ ಜನರ ಮುಂದೆ ಕಾಂಗ್ರೇಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳೆಲ್ಲ ಒಕೇ,
ಆದ್ರೆ ನಿಮ್ಮ ಪಕ್ಷದಿಂದ ಗೆದ್ದ ಶಾಸಕರು ಕುರಿ, ಎಮ್ಮೆಗಳ ಹಾಗೆ ಬಿಜೆಪಿಗೆ ಮಾರಾಟ ಆಗುವುದಿಲ್ಲ ಎಂಬ ಗ್ಯಾರಂಟಿ ನೀಡಬಲ್ಲಿರಾ?

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷ,
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ
3 years ago
feature
News
Politics
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಚುನಾವಣಾ ಪೂರ್ವ ಸಭೆ
ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ತಂತ್ರ ಹಾಗೂ ಯೋಜನೆಗಳ ಬಗ್ಗೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಸಭೆಯಲ್ಲಿ ಮುಂದಿನ ಚುನಾವಣೆಯ ವರೆಗೆ ನಿರ್ವಾಹಣೆ ಮಾಡಲು ಚುನಾವಣಾ ಸಮಿತಿಯನ್ನು ರಚಿಸಿ ಮಾತನಾಡಿದ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು 2023 ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಚಿತ್ರದುರ್ಗ ವಿಧಾನಸಭಾ ಅಭ್ಯರ್ಥಿಯಾಗಿ ಬಾಳೆಕಾಯಿ ಶ್ರೀನಿವಾಸ್ ಅವರನ್ನು ಕಣಕ್ಕೆ ಇಳಿಸಿದೆ. ಚಿತ್ರದುರ್ಗ ನಗರದಲ್ಲಿ ಸುಮಾರು 26 ಘೋಷಿತ ಸ್ಲಂಗಳಿವೆ ಇದರಲ್ಲಿ ಹಕ್ಕು ಪತ್ರ ವಿತರಣೆಯಲ್ಲಿ ರಾಜಕೀಯ ಮಧ್ಯ ಪ್ರವೇಶಿಸಿ ಹಕ್ಕುಪತ್ರ ವಿತರಣೆಯನ್ನು ಅರ್ಧಕ್ಕೆ ನಿಂತಿದೆ ಮತ್ತು ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಸರಿಯಾದ ಜಿಲ್ಲಾ ಆಸ್ಪತ್ರೆಯಿಲ್ಲ, ಇಲ್ಲಿನ ಜನರ ಸಂಕಷ್ಟಗಳಿಗೆ ಕಿವಿ ಕೊಡುವವರೇ ಇಲ್ಲದಂತಾಗಿ ಇಲ್ಲಿ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದೆ. ಹಾಗಾಗಿ ಕ್ಷೇತ್ರದ ಜನತೆ ಎಸ್.ಡಿ.ಪಿ.ಐ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವ ಮೂಲಕ ತಮ್ಮ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಜನಪರ ಕಾಳಜಿ ಹೊಂದಿರುವ ಎಸ್.ಡಿ.ಪಿ.ಐ ಅಭ್ಯರ್ಥಿಯನ್ನು ಬೆಂಬಲಿಸುವ ಭರವಸೆ ಇದೆ, ಈ ನಿಟ್ಟಿನಲ್ಲಿ ಇಲ್ಲಿನ ಎಲ್ಲ ಸಮಸ್ಯೆಗಳ ಕುರಿತು ಜನರಿಗೆ ಮನವರರಿಕೆ ಮಾಡಿಸಲು ಕಾರ್ಯಕರ್ತರು ತಳಮಟ್ಟದಲ್ಲಿ ಕೆಲಸ ಮಾಡಲು ಪಣ ತೊಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ರಾಜ್ಯ ಸಮಿತಿ ಸದಸ್ಯರಾದ ಅಕ್ಬರ್ ಅಲಿ, ಕ್ಷೇತ್ರದ ಅಭ್ಯರ್ಥಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ಬಾಳೆಕಾಯಿ ಮತ್ತು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಜನವರಿ.13.2023
3 years ago
feature
News
Politics
ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಸಭೆಗೆ ರಾಜ್ಯ ನಾಯಕರ ಭೇಟಿ.
ದಾವಣಗೆರೆ: ಎಸ್.ಡಿ.ಪಿ.ಐ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ರವರ ಸಮ್ಮುಖದಲ್ಲಿ ದಾವಣಗೆರೆಯಲ್ಲಿ ಜರುಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ ಹಾಲಿ ಕ್ಷೇತ್ರದ ಶಾಸಕರು ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ, ಕಳೆದ 25 ವರ್ಷಗಳಿಂದ ಶಾಸಕರಾಗಿ ಜನರ ಕಷ್ಟಗಳಿಗೆ ಸ್ಪಂದಿಸದೆ ಮತದಾರರಿಗೆ ಮೋಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಇವರ ಕೂಡುಗೆಯೇನು? ಕ್ಷೇತ್ರದಲ್ಲಿ ಸರಿಯಾದ ಒಂದು ಸಾರ್ವಜನಿಕ ಆಸ್ಪತ್ರೆ ಇಲ್ಲದ ಕಾರಣ ಬಡತನ ರೇಖೆಗಿಂತ ಕೆಳಗೆ ಇರುವ ಇಲ್ಲಿನ ಜನರು ಚಿಕಿತ್ಸೆಗಾಗಿ ಪರಿದಾಡುವ ಪರಿಸ್ಥಿತಿ ಇದೆ. ಪ್ರತಿ ಬಾರಿ ಚುನಾವಣೆ ಬಂದಾಗ ವಸತಿಗೃಹ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿ ಹೆಗಡೆ ನಗರ ನಿವಾಸಿಗಳನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸಲಾಗುತ್ತಿದೆ, ಇವರಿಗೆ ಇಲ್ಲಿಯವರೆಗೆ ಶಾಶ್ವತ ವಸತಿಗೃಹ ನಿರ್ಮಾಣ ಮಾಡಿಕೊಡಲು ಇಲ್ಲಿನ ಶಾಸಕರಿಗೆ ಸಾಧ್ಯವಾಗಲಿಲ್ಲ. ಪೌರಕಾರ್ಮಿಕರನ್ನು ಖಾಯಂ ಗೊಳಿಸುವುದಾಗಲಿ, ಅವರಿಗೆ ಶಾಶ್ವತ ವಸತಿಗೃಹ ವ್ಯವಸ್ಥೆಯಾಗಲಿ ಹಾಗೂ ಕನಿಷ್ಟಪಕ್ಷ ಅವರ ಸಂಕಷ್ಟಗಳನ್ನು ಆಲಿಸಲೂ ಇಲ್ಲಿನ ಶಾಸಕರು ತಯಾರಿಲ್ಲ. ಇವರು ಚುನಾವಣೆಗಳಲ್ಲಿ ಆಶ್ವಾಸನೆ ನೀಡಿದಂತೆ ಮಂಡಕ್ಕಿ ಬಟ್ಟಿಗಳಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ ಮಾಡುವ ಮನಸ್ಸೇ ಮಾಡಲಿಲ್ಲ. ಮಂಡಕ್ಕಿ ಬಟ್ಟಿ ಕಾರ್ಮಿಕರಿಗೆ ಶಾಶ್ವತ ಮನೆ ಇಲ್ಲದ ಕಾರಣ ಬರುವ ಅಲ್ಪಸ್ವಲ್ಪ ಕೂಲಿಯಲ್ಲಿ ಜೀವನ ನಡೆಸುವುದು ಅವರಿಗೆ ಕಷ್ಟವಾಗಿದೆ ಮತ್ತು ಇವರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಕಾರ್ಮಿಕರಿಗಾಗಿ ಲೇವಟ್ ಮಾಡಿ ಮನೆ ನಿರ್ಮಿಸಿ ಕೊಡುವ ಆಶ್ವಾಸನೆ ನೀಡಿ ಅದು ಇಲ್ಲಿಯವರೆಗೆ ಈಡೇರಲಿಲ್ಲ, ಆಶ್ವಾಸನೆಗಳು ಕೇವಲ ಆಶ್ವಾಸನೆಗಳಾಗಿ ಮಾತ್ರ ಉಳಿದಿವೆ.
ಕ್ಷೇತ್ರದಲ್ಲಿ ಇಂತಹ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ ಈ ಬಗ್ಗೆ ಕಾರ್ಯಕರ್ತರು ಕ್ಷೇತ್ರದ ಜನತೆಗೆ ಎಳೆ ಎಳೆಯಾಗಿ ತಿಳಿಹೇಳಬೇಕು ಮತ್ತು ಪರ್ಯಾಯ ರಾಜಕೀಯ ವ್ಯವಸ್ಥೆಗೆ ಎಸ್.ಡಿ.ಪಿ.ಐ ಪಕ್ಷದ ಅನಿವಾರ್ಯತೆಯ ಕುರಿತು ಜನರಿಗೆ ಮನವರಿಕೆ ಮಾಡುವ ಮೂಲಕ ದಾವಣಗೆರೆಯಲ್ಲಿ ಈಗಾಗಲೇ ಘೋಷಣೆ ಮಾಡಿರುವ ನಮ್ಮ ಅಭ್ಯರ್ಥಿ ಇಸ್ಮಾಯಿಲ್ ಜಬಿವುಲ್ಲಾ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡಬೇಕು, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಜಿಲ್ಲಾಧ್ಯಕ್ಷರು ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬಿವುಲ್ಲಾ , ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್ , ಉಪಾಧ್ಯಕ್ಷರಾದ ರಜ್ವೀ ರಿಯಾಜ್ ಅಹಮದ್ ಮತ್ತು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಜನವರಿ 14.01.2023
3 years ago
Show more Posts
Show previous Posts