#SDPIKarnataka

ರಾಯಚೂರು ನಾಯಕರ ಸಭೆ

ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್‌ ನಗುಂಡಿ, ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಖಾದೀರ್,…

1 month ago

ಮಾನ್ಯ ಮುಖ್ಯಮಂತ್ರಿ Siddaramaiah ರವರೇ, ದಕ್ಷಿಣ ಕನ್ನಡದ ಪೊಲೀಸರು ಯಾರ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ? ಕಾನೂನು ಬದ್ದವಾಗಿ ಎಲ್ಲಾ ದಾಖಲಾತಿಯನ್ನು ಹೊಂದಿರುವ ಇಸ್ಲಾಮಿಕ್ ಎಜುಕೇಶನ್‌ ಟ್ರಸ್ಟ್‌ ಅದೀನದಲ್ಲಿರುವ ಮಸ್ಜಿದ್ ಅಲ್ ಮರ್ಯಮ್ ಬಂಟ್ವಾಳ ತಾಲೂಕಿನ ಅಡ್ಡರು ಸಮೀಪದ ಪುಂಚಮೆ ಯಲ್ಲಿ ಅಜಾನ್ ಕರೆಗೆ ಪೊಲೀಸ್ ಇಲಾಖೆ ಯು 2 ವರ್ಷದ ಪರವಾನಿಗೆಯನ್ನು ನೀಡಿತ್ತು. ಈ ನ್ಯಾಯಬದ್ದ ಪರವಾನಿಗೆಯನ್ನು ರದ್ದು ಪಡಿಸಲು ಹಿಂದೂ ಜಾಗರಣೆ ವೇದಿಕೆ ಬಂಟ್ವಾಳ ಮತ್ತು ಯೋಗೀಶ್ ಪುಂಚಮೆ ಎಂಬಾತ ಪೊಳಲಿ ಪಂಚಾಯತ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಅದಾರದಲ್ಲಿ ಹಿಂದುತ್ವ ಸಂಘಟನೆಯ ಒತ್ತಡಕ್ಕೆ ಮಣಿದ ಪೊಲೀಸರು ಧ್ವನಿವರ್ಧಕ ಪರವಾನಿಗೆ ರದ್ದತಿ ಮಾಡಿ, ಧ್ವನಿವರ್ಧಕವನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯಾ ಅಥವಾ ಆರ್ ಎಸ್ ಎಸ್ ಸರ್ಕಾರ ಇದೇಯಾ?

ಮಾನ್ಯ ಡಿ.ಜಿ.ಪಿ ರವರೇ, ತಕ್ಷಣ ಮಧ್ಯ ಪ್ರವೇಶಿಸಿ, ಧ್ವನಿವರ್ಧಕ ಪರವಾನಿಗೆಯನ್ನು ನೀಡಬೇಕಾಗಿ ಆಗ್ರಹಿಸುತ್ತೇನೆ. ~ಅಬ್ದುಲ್ ಮಜೀದ್‌,ರಾಜ್ಯಾಧ್ಯಕ್ಷರು, SDPI ಕರ್ನಾಟಕ

1 month ago

ಗೌರಿ ಲಂಕೇಶ್

ಹುತಾತ್ಮ ದಿನ ಫ್ಯಾಶಿಸಂ ವಿರುದ್ಧ ನಿರ್ಭೀತಿಯಿಂದ ಹೋರಾಡಿದ ಗೌರಿ ಲಂಕೇಶ್ ಅವರನ್ನು ಫ್ಯಾಶಿಸ್ಟರು ಗುಂಡಿಟ್ಟು ಕೊಂದರೂ, ಅವರ ತತ್ವಗಳನ್ನು ಕೊಂದು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಗೌರಿಯ…

1 month ago

79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

"ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ" ಜನರ ಏಕತೆ – ಬಲವಾದ ಭಾರತದ ನೆಲೆ, ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ, ಎಲ್ಲರ ಹಕ್ಕುಗಳಿಗೆ ಧ್ವನಿ ನೀಡೋಣ! ದೇವನೂರ ಪುಟ್ಟನಂಜಯ್ಯ,ಉಪಾಧ್ಯಕ್ಷರು,…

2 months ago

ಗುಜರಾತ್, ಬಿಹಾರದಲ್ಲಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು?: ಪ್ರತಾಪ್ ಸಿಂಹರಿಗೆ ಎಸ್‌ಡಿಪಿಐ ಟಾಂಗ್
ಆಗಸ್ಟ್ 06, 2025

ಮೈಸೂರು : ಸತತ 25 ವರ್ಷಗಳಿಂದ ಬಿಜೆಪಿ ಆಡಳಿತವಿರುವ ಗುಜರಾತ್ ರಾಜ್ಯದಲ್ಲಿ ಮತ್ತು ಬಿಜೆಪಿ, ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರ ರಾಜ್ಯದಲ್ಲಿ ಸತತವಾಗಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು ಹೇಳು? ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸುವ ಮೂಲಕ ಕೆಆರ್‍ಎಸ್ ಜಲಾಶಯಕ್ಕೆ ಟಿಪ್ಪು ಅಡಿಗಲ್ಲು ಹಾಕಿದ್ದಾರೆ ಎಂಬ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ಕುರಿತು, ಯಾವ ಮುಲ್ಲ ಡಿಪಿಆರ್ ಮಾಡಿಸಿದ್ದು ಎಂದು ಪ್ರಶ್ನಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು.
ಮಹದೇವಪುರ ರಸ್ತೆಯಲ್ಲಿರುವ ಎಸ್‍ಡಿಪಿಐ ಕಚೇರಿಯಲ್ಲಿ ಬುಧವಾರ ಮದ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಒಬ್ಬ ದಡ್ಡ ಮತ್ತು ಮೂರ್ಖ, ಆತನಿಗೆ ಇತಿಹಾಸ ಗೊತ್ತಿಲ್ಲ, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಕೆಆರ್‍ಎಸ್ ಜಲಾಶವನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂದು ಎಲ್ಲೂ ಹೇಳಿಲ್ಲ, ಕಾವೇರಿ ನದಿಗೆ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಿ ಅದಕ್ಕೆ ಮೊದಲು ಅಡಿಗಲ್ಲು ಹಾಕಿಸಿದ್ದು ಟಿಪ್ಪು ಎಂದು ಹೇಳಿದ್ದಾರೆ ಅಷ್ಟೇ, ಈ ಶಾಸನವನ್ನು ಕೆಆರ್‍ಎಸ್ ಜಲಾಶಯ ಕಟ್ಟಿಸಿದ ಮಹಾತ್ಮರಾದ ನಾಲ್ವಡಿ ಕೃಷ್ಣರಾಜ ಪಡೆಯರ್ ಅವರೇ ಜಲಾಶಯದ ಬಳಿ ಟಿಪ್ಪು ಪರ್ಶಿಯನ್ ಭಾಷೆಯಲ್ಲಿ ಬರೆಸಿದ್ದ ಶಾಸನವನ್ನು ಕನ್ನಡದಲ್ಲಿ ಬರೆಸಿ ಜಲಾಶಯದ ಬಳಿಯೇ ಹಾಕಿಸುವ ಮೂಲಕ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಆದರೇ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ಕಳೆದ 25 ವರ್ಷಗಳಿಂದಲೂ ಬಿಜೆಪಿ ಸರ್ಕಾರದ ಆಡಳಿತವೇ ಇದೆ. ಪ್ರಧಾನಿ ಮೋದಿಯವರು ಮೊದಲು ಗುಜರಾತ್ ಮುಖ್ಯಮಂತ್ರಿ ಆಗಿದ್ದವರು, ಆ ರಾಜ್ಯದಲ್ಲಿ ಎಷ್ಟು ಸೇತುವೆಗಳು ಕುಸಿದಿವೆ, ಎಷ್ಟೋಂದು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಮತ್ತು ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರದಲ್ಲಿಯೂ ಹತ್ತಾರು ಸೇತುವೆಗಳು ಕುಸಿದಿವೆ, ಅವುಗಳ ಡಿಪಿಆರ್ ಮಾಡಿದವರು ಯಾರು ಹೇಳು ನೋಡೋಣ? ಎಂದು ಖಾರವಾಗಿ ಪ್ರಶ್ನಿಸಿದರು.

ವಿಶ್ವವಿಖ್ಯಾತ ಆಗ್ರಾದ ತಾಜ್‍ಮಹಲ್, ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ್, ಅಷ್ಟೇ ಏಕೆ ಕರ್ನಾಟಕದಲ್ಲಿರುವ ಗೋಲ್‍ಗುಂಬಜ್ ಕಟ್ಟಡಗಳ ಡಿಪಿಆರ್ ಮಾಡಿದವರು ಯಾರು ಎಂಬುದು ನಿನಗೆ ಗೊತ್ತಿದೆಯಾ? ನೀನೊಬ್ಬ ಮೂರ್ಖ ನಿನ್ನಂತೆ ಇರುವ ಮೂರ್ಖರು ಮಾತ್ರ ನಿನ್ನ ಮಾತಿಗೆ ಶಹಬ್ಬಾಸ್ ಹೇಳುತ್ತಾರೆ, ಬುದ್ಧಿವಂತರು ನಿನ್ನ ಮಾತಿಗೆ ಉಗಿಯುತ್ತಾರೆ ಎಂದು ಝಾಡಿಸಿದರು.

ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಖಾನ್ ಅವರು ಈ ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನೀರಾವರಿ ಇಲ್ಲದ ಸಂದರ್ಭದಲ್ಲಿ ಚೀನಾದಿಂದ ರೇಷ್ಮೆ ಬೆಳೆಯನ್ನು ತರಿಸಿ ತನ್ನ ರಾಜ್ಯದಲ್ಲಿ ಅಭಿವೃದ್ಧಿಪಡಿಸಿದರು, ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಿದರು. 1782 ರಲ್ಲಿ ಟಿಪ್ಪು ಸುಲ್ತಾನ್ ಅವರು, ಕಾವೇರಿ ನದಿಗೆ 70 ಅಡಿ ಎತ್ತರದ ಅಣೆಕಟ್ಟೆ ಕಟ್ಟುವ ಮೂಲಕ ರೈತರ ಬದುಕು ಹಸನು ಮಾಡಲು ಯತ್ನಿಸಿ ಅದಕ್ಕೆ ಹಣಕಾಸು ಹೊಂದಿಸಿದ್ದರು, ಆದರೇ, 3ನೇ ಮೈಸೂರು ಆಂಗ್ಲೋ ಯುದ್ಧದಲ್ಲಿ ಟಿಪ್ಪು ಬ್ರಿಟೀಷರ ವಿರುದ್ಧ ಸೋಲು ಅನುಭವಿಸಿ ಯುದ್ಧದ ಖರ್ಚು 3 ಕೋಟಿ ಹಣವನ್ನು ಬ್ರಿಟಿಷರಿಗೆ ಕೊಡಲಾಗದೆ ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ದು ಯಾರೂ ಮರೆಯಲು ಸಾಧ್ಯವಿಲ್ಲ, ಬಳಿಕ ನಾಲ್ಕನೇ ಮೈಸೂರು-ಆಂಗ್ಲೋ ಯುದ್ಧದಲ್ಲಿ ಟಿಪ್ಪು ವೀರ ಮರಣ ಹೊಂದಿದಾಗ ಅಣೆಕಟ್ಟೆ ಕಟ್ಟಲು ಆಗುವುದಿಲ್ಲ, ಆದರೇ ರಾಜರ್ಷಿ ನಾಲ್ವಡಿ ಕೃಷ್ಣರಾಯ ಒಡೆಯರ್ ಅವರು ಕೆಆರ್‍ಎಸ್ ಜಲಾಶಯ ಕಟ್ಟುವ ಸಂದರ್ಭದಲ್ಲಿ ಸಿಕ್ಕ ಶಾಸನವನ್ನು ಅದೇ ಜಾಗದಲ್ಲಿ ಇರಿಸಿದ್ದರು. ನಿಮ್ಮಂತಹವರು ಏನಾದರೂ ಆಗ ಇದ್ದಿದ್ದರೆ ಆ ಶಾಸನವನ್ನು ಒಡೆದುಹಾಕುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಟಿಪ್ಪು ಸುಲ್ತಾನ್ ತನ್ನ ರಾಜ್ಯದ ಒಟ್ಟು ಭೂಮಿಯ ಶೇ.30 ರಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರು, ಅವರು ತಮ್ಮ ರಾಜ್ಯದಲ್ಲಿ 40 ಸಾವಿರ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದರು, ನೀನು 10 ವರ್ಷ ಎಂಪಿ ಆಗಿದ್ದೆ ಎಷ್ಟು ಕೆರೆಗಳನ್ನು ಕಟ್ಟಿಸಿದ್ದಿಯಾ ಅಥವಾ ಎಷ್ಟು ಕೆರೆಗಳ ಹೂಳು ಎತ್ತಿಸಿದ್ದೀಯಾ ಹೇಳು?

ಟಿಪ್ಪು ಸುಲ್ತಾನರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ನೀನು ಮೈಸೂರು-ಕೊಡಗು ಜಿಲ್ಲೆಯಲ್ಲಿ 40-50 ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂ ರಹಿತರು ಅರ್ಜಿ ನಮೂನೆ 50, 53, 57 ರಲ್ಲಿ ತಮಗೆ ಭೂ ಒಡೆತನ ನೀಡುವಂತೆ ಸರ್ಕಾರಕ್ಕೆ 10 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿ ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಎಷ್ಟು ಜನರಿಗೆ ನೀನು ಭೂಮಿ ಕೊಡಿಸಿದ್ದೀಯಾ ಹೇಳು? ಟಿಪ್ಪು ಸುಲ್ತಾನರು ತಮ್ಮ ಆಳ್ವಿಕೆಯಲ್ಲೇ ಭೂ ರಹಿತ ದಲಿತರಿಗೆ, ಇತರರಿಗೆ ಭೂಮಿ ಒಡೆತನ ನೀಡಿದ್ದರು ಎನ್ನುವುದು ನಿನಗೆ ಗೊತ್ತಿಲ್ಲದಿದ್ದರೆ, ಇತಿಹಾಸ ಓದು ಎಂದು ಅಬ್ದುಲ್ ಮಜೀದ್ ಟಾಂಗ್ ನೀಡಿದರು.

1340ರಲ್ಲಿ ಹೊಯ್ಸಳರ ಕಾಲದಲ್ಲಿ ಮುಡುಕುತೋರೆ ಬಳಿ ಅಣೆಕಟ್ಟೆ ಕಟ್ಟಲಾಗಿತ್ತು, ಅದಕ್ಕೂ ಮುನ್ನ ಗಂಗರು ಪಾಂಡವಪುರದ ಬಳಿ ಅಣೆಕಟ್ಟೆ ಕಟ್ಟಿದ್ದಾರೆ. ಅದರ ಡಿಪಿಆರ್ ಕೇಳಲು ನಿನಗೆ ಆಗುತ್ತದೆಯಾ? ಪದೇ ಪದೇ ಟಿಪ್ಪು ಸುಲ್ತಾನರ ಅವಹೇಳನ ಸಲ್ಲದು, ಟಿಪ್ಪು ಒಬ್ಬ ಮುಸ್ಲಿಂ ದೊರೆ ಎಂದು ಬಿಜೆಪಿಯವರು ಅವರ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೇ, ಇತಿಹಾಸವನ್ನು ಬದಲಾಯಿಸಲು ಅಸಾಧ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸ್ವಾಮಿ, ಮೈಸೂರು ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ರಫತ್ ಖಾನ್, ಫಿರ್ದೋಸ್, ಸಫಿಯುಲ್ಲಾ ಇದ್ದರು.

2 months ago

SDPI ki State Working Committee meeting Bengaluru mein munaqid hui, Jis mein tamam office bearers aur senior leaders ne shirkat ki.

Meeting ko State President Abdul Majeed aur State General Secretary Mujahid Pashane chair kiya. National General Secretary Ilyas Mohammed Thumbe…

2 months ago