ಬೆಂಗಳೂರು ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಟಿಜನ್ ಫಾರ್ ಡೆಮಾಕ್ರಸಿ ಎಂಬ ಹೆಸರಿನಿಂದ ಶ್ರೀಕಾಂತ್ ಬಬಲಾಡಿ ನೇತೃತ್ವದಲ್ಲಿ ತಯಾರಿಸಲಾದ ಸತ್ಯಶೋಧನಾ ವರದಿಯು ವಾಸ್ತವ ಅಂಶಗಳನ್ನು ಮರೆಮಾಚಿದ ಪೂರ್ವಗ್ರಹ ಪೀಡಿತವಾಗಿರುವಂಥಹದ್ದು ಆಗಿದೆ. ಪ್ರವಾದಿಯವರನ್ನು ನಿಂದಿಸಿದ ವ್ಯಂಗ್ಯ ಚಿತ್ರ ಹಾಗೂ ಹೀನಾಯವಾದ ಬರಹಗಳನ್ನು ಪೋಸ್ಟ್ ಮಾಡಿದ ನವೀನ್ ಮತ್ತು ಆತನ ಹಿಂದೆ ಇರುವ ಸಂಘಪರಿವಾರದ ದುಷ್ಟ ಶಕ್ತಿಗಳ ಬಗ್ಗೆ ಬೆಳಕು ಚೆಲ್ಲದ ಆ ವರದಿಯು ಅಂತಹ ಶಕ್ತಿಗಳ ಹುನ್ನಾರವನ್ನು ಮುಚ್ಚಿಡುವ ಪ್ರಯತ್ನವಾಗಿದೆ ಎಂದು ಎಸ್ಡಿಪಿಐಯ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ
ಸತ್ಯಶೋಧನಾ ತಂಡದಲ್ಲಿದ್ದ ಸದಸ್ಯರೆಲ್ಲರೂ ಬಿಜೆಪಿ ಮತ್ತು ಸಂಘ ಪರಿವಾರದ ಹಿನ್ನಲೆಯವರಾಗಿದ್ದು ಖಂಡಿತವಾಗಿಯೂ ಅವರಿಂದ ಸತ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸರಕಾರದ ಶೋಚನೀಯ ವೈಫಲ್ಯ ಮತ್ತು ಪೊಲೀಸ್ ನಿಷ್ಕ್ರಿಯತೆಯ ಬಗ್ಗೆಯೂ ವರದಿ ಬೆಳಕು ಚೆಲ್ಲದೆ ಘಟನೆಯಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಹೆಸರನ್ನು ಎಳೆದು ತಂದಿರುವುದು ಹಾಸ್ಯಾಸ್ಪದವಾಗಿದೆ. ಗಲಭೆಯ ದಿನ ಆಕ್ರೋಶಿತ ಜನರನ್ನು ಸಮಾಧಾನ ಪಡಿಸಲು ಪೊಲೀಸರೊಂದಿಗೆ ಸೇರಿ ನಿರಂತರವಾಗಿ ಶ್ರಮಿಸಿದ ಸ್ಥಳೀಯ ಎಸ್ಡಿಪಿಐ ನಾಯಕರನ್ನು ಬಿಜೆಪಿ ಸರಕಾರದ ಕುಮ್ಮಕ್ಕಿನಿಂದಲೇ ಪ್ರಕರಣದಲ್ಲಿ ಸಿಲುಕಿಸಿರುವುದನ್ನು ರಾಜ್ಯದ ಜನತೆ ಅರಿತುಕೊಂಡಿದ್ದಾರೆ. ಆತ್ಮಸಾಕ್ಷಿಯನ್ನು ಅಡವಿಟ್ಟು ಸುಳ್ಳನ್ನು ಉಣಬಡಿಸುವ ಇಂತಹ ವರದಿಗಳು ರಾಜ್ಯ ಹಾಗೂ ಜನತೆಯ ಹಿತಾಸಕ್ತಿಗೆ ಮಾರಕ ಎಂದು ಇಲಿಯಾಸ್ ಮಹಮ್ಮದ್ ತುಂಬೆ ಎಚ್ಚರಿಸಿದ್ದಾರೆ.
Let's continue to build a nation where every citizen lives with dignity, equality & hope.…
سوشیل ڈیموکریٹک پارٹی آف انڈیا (SDPI) کی نیشنل ریپریزنٹیٹو کونسل (NRC) 20 اور 21 جنوری…
Social Democratic Party of India (SDPI) ki National Representative Council (NRC) 20 aur 21 January…
The National Representative council (NRC) of Social Democratic Party of India will be held on…
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ದ ರಾಷ್ಟ್ರೀಯ ಪ್ರತಿನಿಧಿ ಸಭೆ (NRC) ಜನವರಿ 20 ಮತ್ತು 21, 2026…