ನವದೆಹಲಿ, ಡಿಸೆಂಬರ್ 18, 2020; ಪಿಎಂ-ಕೇರ್ಸ್ ನಿಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಎಂಬುದು ಸ್ವೇಚ್ಛೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆರೋಪಿಸಿದೆ.ಕೋವಿಡ್ -19 ಗಾಗಿ ಸ್ಥಾಪಿಸಲಾದ ಪಿಎಂ-ಕೇರ್ಸ್ ನಿಧಿ, ಖಾಸಗಿ ಅಥವಾ ಸರ್ಕಾರಿ ಟ್ರಸ್ಟ್ ಆಗಿದೆಯೇ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ತಿಳಿಯಲು ಎಸ್ ಡಿಪಿಐ ಬಯಸುತ್ತದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮಾರ್ಚ್ 28ರಂದು ನೀಡಿದ ಕಚೇರಿ ಜ್ಞಾಪಕಾ ಪತ್ರದಲ್ಲಿ, ಪಿಎಂ-ಕೇರ್ಸ್ ಅನ್ನು “ಕೇಂದ್ರ ಸರ್ಕಾರವು ಸ್ಥಾಪಿಸಿದ ನಿಧಿ” ಎಂದು ವ್ಯಾಖ್ಯಾನಿಸಿದೆ ಎಂದು ಆರ್‌ಟಿಐ ಅರ್ಜಿಯ ಮೂಲಕ ಸಾಮಾಜಿಕ ಕಾರ್ಯಕರ್ತರೊಬ್ಬರು ಬಹಿರಂಗಪಡಿಸಿದ ನಂತರ ಎಸ್ ಡಿಪಿಐ ಈ ಪ್ರಶ್ನೆ ಎತ್ತಿದೆ. ಆದಾಗ್ಯೂ, ಇದರ ಒಂದು ದಿನ ಮೊದಲು, ಟ್ರಸ್ಟ್ ಕರಾರು ಪತ್ರದಲ್ಲಿ ಇದು ಸರ್ಕಾರದಿಂದ ನಡೆಸಲ್ಪಡುವುದಿಲ್ಲ. ಆದ್ದರಿಂದ ಪಿಎಂ ಕೇರ್ಸ್ ಕಾರ್ಪೊರೇಟ್ ದೇಣಿಗೆಗೆ ಅರ್ಹವಾಗಿಲ್ಲ ಎಂದೂ ತಿಳಿಸಲಾಗಿತ್ತು.ಸುಮಾರು ಎರಡು ತಿಂಗಳವರೆಗೂ ಈ ವಿರೋಧಾಭಾಸ ಮುಂದುವರಿಯಿತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು, ಮಾರ್ಚ್ 28 ರಿಂದ ಕಂಪನಿಗಳ ಕಾಯ್ದೆಗೆ ಪಿಎಂ-ಕೇರ್ಸ್ ನಿಧಿಯನ್ನು ಸೇರಿಸಲಾಗಿದೆ ಎಂದು ಮೇ 26ರಂದು ತಿಳಿಸಿತ್ತು. ಎರಡು ತಿಂಗಳವರೆಗೆ, ಪ್ರಧಾನ ಮಂತ್ರಿ ನಾಗರಿಕರ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯ ಪರಿಹಾರ ಅಥವಾ ಪಿಎಂ-ಕೇರ್ಸ್ ಕಾರ್ಪೊರೇಟ್ ದೇಣಿಗೆ ಪಡೆಯುವ ಖಾಸಗಿ ಘಟಕವಾಗಿತ್ತು.ಆರ್‌ಟಿಐ ಮೂಲಕ ಕೇಳುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಇದು ಖಾಸಗಿ ಟ್ರಸ್ಟ್ ಎಂದೂ, ಕಾರ್ಪೋರೆಟ್ ಕೊಡುಗೆಗಳನ್ನು ಸ್ವೀಕರಿಸಲು ಇದು ಸರ್ಕಾರಿ ಟ್ರಸ್ಟ್ ಆಗಿಯೂ ತೋರಿಸಲಾಗಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದು ಅಧಿಕಾರದ ಸಂಪೂರ್ಣ ದುರುಪಯೋಗವಾಗಿದೆ. ಬಿಜೆಪಿ ಸರ್ಕಾರ ಇದನ್ನು ಮಾಡಿದರೆ ಅದು ಭ್ರಷ್ಟಾಚಾರದ ಅಡಿಯಲ್ಲಿ ಬರುವುದಿಲ್ಲ, ಆದರೆ ಇತರರು ಹಾಗೆ ಮಾಡಿದರೆ ಎಲ್ಲರೂ ಕೂಗೆಬ್ಬಿಸುತ್ತಾರೆ. ಇದು ಸಂಪೂರ್ಣ ಬೂಟಾಟಿಕೆಯಾಗಿದೆ ಎಂದು ಫೈಝಿ ಟೀಕಿಸಿದ್ದಾರೆ.ಈ ರೀತಿಯ ಹಗಲು ದರೋಡೆಯನ್ನು ಭಾರತದ ಜನರು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ? ಇಷ್ಟು ದೊಡ್ಡ ಹಣಕ್ಕೆ ಯಾಕಾಗಿ ಯಾವುದೇ ಹೊಣೆಗಾರಿಕೆ ಇಲ್ಲ. ಅದು ಸಾರ್ವಜನಿಕ ನಿಧಿಯಾಗಿದ್ದರೆ ಅದರ ಖರ್ಚುಗಳ ವಿವರಗಳು ಸಾರ್ವಜನಿಕ ಸ್ವತ್ತಾಗಿರಬೇಕು ಅಥವಾ ಅದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತಿರಬೇಕು. ನೀವು ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸಿದಾಗ, ಅದು ಕಾನೂನುಬದ್ಧ ಅಥವಾ ಕಾನೂನುಬಾಹಿರವಾಗಿದೆಯೇ ಎಂಬುದು ತಿಳಿದಿಲ್ಲದಿದ್ದರೆ, ಮತ್ತು ಅದಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲವೆಂದಾದರೆ, ಅದನ್ನು ಭ್ರಷ್ಟಾಚಾರ ಎಂದೇ ಕರೆಯಬೇಕಾಗುತ್ತದೆ. ಬಹುಶಃ, ಇಡಿ ಮತ್ತು ಸಿಬಿಐ ತನಿಖೆ ನಡೆಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಫೈಝಿ ಹೇಳಿದ್ದಾರೆ.ಲೆಕ್ಕಪರಿಶೋಧಿಸದ ಪಿಎಂ ಕೇರ್ಸ್ ನಿಧಿಯನ್ನು ಯಾವ ಯೋಜನೆಗಳಿಗೆ ಖರ್ಚು ಮಾಡಲಾಗಿದೆ ಎಂದು ಫೈಝಿ ಪ್ರಶ್ನಿಸಿದ್ದಾರೆ. ಯಾರೊಬ್ಬರೂ ಆಡಿಟ್ ಮಾಡಿಲ್ಲ ಅಥವಾ ಪರಿಶೀಲಿಸಿಲ್ಲ. ಇದು ಭ್ರಷ್ಟಾಚಾರಕ್ಕೆ ಗುರಿಯಾಗುವುದಿಲ್ಲವೇ? ಇದನ್ನು ಲೆಕ್ಕಪರಿಶೋಧಿಸದಿದ್ದರೆ ಅದು ಕುದುರೆ ವ್ಯಾಪಾರ ಮತ್ತು ರಾಜಕೀಯ ಪ್ರಚಾರಕ್ಕಾಗಿ ಖರ್ಚು ಮಾಡಿದ ಕಪ್ಪು ಹಣಕ್ಕೆ ಸಮನಾಗಿರುತ್ತದೆ. ಈ ಹಣವನ್ನು ಬಳಸಿ ಯಾವುದೇ ನೈತಿಕ ಮೌಲ್ಯಗಳಿಲ್ಲದ ಅಧಿಕಾರ / ಹಣದ ಆಸೆಯಿಂದ ಹಸಿದಿರುವ ರಾಜಕಾರಣಿಗಳನ್ನು ಬಿಜೆಪಿ ಆಡಳಿತ ಖರೀದಿಸಿದೆ. ನಮ್ಮ ಪ್ರಧಾನಮಂತ್ರಿಯ ವಿಶಿಷ್ಟ ಲಕ್ಷಣವೆಂದರೆ ವಿರೋಧಾಭಾಸ. ಅವರ ಮಾತುಗಳು ಕ್ರಿಯೆಗೆ ತದ್ವಿರುದ್ಧವಾಗಿವೆ. ಅವರು ಒಂದು ಕಡೆ ದೇಶದ ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ, ಆದರೆ ಅವರ ಕ್ರಿಯೆಗಳು ಖಾಸಗಿ ಗುಜರಾತಿ ವ್ಯಾಪಾರಸ್ಥರಿಗೆ ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಫೈಝಿ ಟೀಕಿಸಿದ್ದಾರೆ.ಭಾರತದ ಪ್ರಧಾನ ಮಂತ್ರಿ ಹೇಗೆ ತಮ್ಮ ಕಚೇರಿಯಲ್ಲಿ ಖಾಸಗಿ ಕಂಪನಿಯನ್ನು ತೆರೆಯುತ್ತಾರೆ ? ನಮ್ಮ ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದು ವೇಳೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದ್ದರೆ ಬಿಜೆಪಿಯ ಇಂತಹ ಭ್ರಷ್ಟಾಚಾರಗಳಿಂದ ಮುಕ್ತವಾಗಿರುತ್ತಿರಲಿಲ್ಲ. ನೋಟು ಅಮಾನೀಕರಣ, ರಫೇಲ್ ಯುದ್ಧ ವಿಮಾನ ಖರೀದಿ ಹಗರಣ, ಚುನಾವಣಾ ಬಾಂಡ್‌ಗಳು ಮತ್ತು ಪಿಎಂ-ಕೇರ್ಸ್ ನಿಧಿಯಂತಹ ಈ 4 ವಿಷಯಗಳನ್ನಾದರೂ ನಿರ್ದಾಕ್ಷಿಣ್ಯವಾಗಿ ನ್ಯಾಯಾಂಗ ತನಿಖೆ ಮಾಡಿದ್ದರೆ ಬಿಜೆಪಿಯ ಭಾರಿ ಭ್ರಷ್ಟಾಚಾರಕ್ಕೆ ಭಾರತವು ಸಾಕ್ಷಿಯಾಗುತ್ತಿತ್ತು, ಈ ವಿಷಯಗಳಲ್ಲಿ ಕಾಂಗ್ರೆಸ್ ಬಿಜೆಪಿಯ ಹತ್ತಿರವೂ ಬರಲಾರದು. ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ತನ್ನ ಕಚೇರಿಗಳನ್ನು ಹೇಗೆ ನಿರ್ಮಿಸುತ್ತಿದೆ ? ಬಿಜೆಪಿಯ ಆಸ್ತಿ ಉತ್ತರ ಪ್ರದೇಶ ಅಥವಾ ದೆಹಲಿ ಬಜೆಟ್ ಗಿಂತ ಹೆಚ್ಚಾಗಿದೆ. ಭಾರತವನ್ನು ಬಿಜೆಪಿ ಅಪಹರಿಸಿ, ಅದನ್ನು ಲೂಟಿ ಮಾಡುತ್ತಿದೆ ಮತ್ತು 60 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಮಾಡಿದ್ದಕ್ಕಿಂತ ಹೆಚ್ಚಾಗಿ ಭಾರತವನ್ನು ಬಿಜೆಪಿಯವರು ಹಾಳುಮಾಡುತ್ತಿದ್ದಾರೆ. ಈ ವೇಳೇ ಸರ್ಕಾರಿ ನೌಕರರು ಏನು ಮಾಡುತ್ತಿದ್ದಾರೆ? ಅವರು ಕಾನೂನು ಉಲ್ಲಂಘನೆಗಳನ್ನು ನಿರ್ಲಕ್ಷಿಸುತ್ತಿದ್ದೀರಾ? ಎಂದು ಫೈಝಿ ಪ್ರಶ್ನಿಸಿದ್ದಾರೆ.ಈ ರೀತಿಯಾಗಿ ರಾಜ್ಯದ ಪ್ರತಿಯೊಬ್ಬ ಮುಖ್ಯಮಂತ್ರಿ ಕೂಡ ಖಾಸಗಿ ನಿಧಿಯನ್ನು ಸ್ಥಾಪಿಸಿ, ಸಿಎಸ್ ಆರ್ ಕಾರ್ಪೊರೇಟ್ ದೇಣಿಗೆ ಅಡಿಯಲ್ಲಿ ಕಾರ್ಪೊರೇಟ್ ದೇಣಿಗೆಯನ್ನು ಪಡೆದರೂ ಅಚ್ಚರಿಯಿಲ್ಲ. ಜನರು ಕುರುಡರಾಗಿರುವಾಗ ಇದು ದೊಡ್ಡ ವಿಷಯವಾಗುವುದಿಲ್ಲ. ಹಿಂದುತ್ವದ ಕಾರಣದಿಂದಾಗಿ ಅವರು ಮೋದಿ ಸರ್ಕಾರವನ್ನು ಬೆಂಬಲಿಸುತ್ತಲೇ ಇರುತ್ತಾರೆ. ಅದು ಇದೀಗ ವಾಸ್ತವ. ಪಿಎಂ ಕೇರ್ಸ್ ಫಂಡ್ಸ್ ಅನ್ನು ಪಿಎಂ ಡೋಂಟ್ ಕೇರ್ ಫಂಡ್ ಹಗರಣ ಎಂದು ಅಡ್ಡಹೆಸರಿನಿಂದ ಫೈಝಿ ವ್ಯಂಗ್ಯವಾಡಿದ್ದಾರೆ.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಕರ್ನಾಟಕ SDPIKarnataka #Dharmasthala
SDPIKarnataka #happyindependenceday2025 #79thIndependenceDay #Mangalore
ಹಾರ್ದಿಕ ಸ್ವಾಗತ ಬಯಸುವ ~ಅನ್ವರ್ ಸಾದತ್ ಎಸ್,ಜಿಲ್ಲಾಧ್ಯಕ್ಷರು SDPI ಮಂಗಳೂರು ಗ್ರಾಮಾಂತರ ಜಿಲ್ಲೆ
INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್…
Let's Protect the Freedom, Save the Nation آئیے آزادی کی حفاظت کرین ملک کو بچائیں…
Let's Protect The Freedom, Save The Nation "Let us remember the sacrifices that brought us…