ಪತ್ರಿಕಾ ಪ್ರಕಟಣೆ
ನವದೆಹಲಿ, ಜುಲೈ 4, 2021: 2016ರ ನಾರದಾ ಸ್ಟಿಂಗ್ ಆಪರೇಷನ್ ಪ್ರಕರಣದ ಆರೋಪಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಕಾರಣ ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರನ್ನು ತಕ್ಷಣ ಅವರ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತುಷಾರ್ ಮೆಹ್ತಾ ಅವರು ಇದೇ ಪ್ರಕರಣಕ್ಕೆ ಸಂಬಂಧಿಸಿ ಸುವೇಂದು ಅಧಿಕಾರಿ ಪರ ಸುಪ್ರೀಂ ಕೋರ್ಟ್ ಮತ್ತು ಕೋಲ್ಕತಾ ಹೈಕೋರ್ಟ್‌ನಲ್ಲಿ ಸಿಬಿಐಯನ್ನು ಪ್ರತಿನಿಧಿಸುತ್ತಿದ್ದಾರೆ.
ಸುವೇಂದು ಅಧಿಕಾರಿ ನಾರದಾ ಪ್ರಕರಣದ ಆರೋಪಿಯಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಎಸ್‌ಜಿ ಅವರು ಸಿಬಿಐ ಏಜೆನ್ಸಿಯನ್ನು ಪ್ರತಿನಿಧಿಸುತ್ತಿದ್ದಾರೆ. ಗಂಭೀರ ಅಪರಾಧ ಪ್ರಕರಣದ ಆರೋಪಿಯೊಂದಿಗೆ ಎಸ್‌ಜಿ ಭೇಟಿಯು ಭಾರತದ ಸಾಲಿಸಿಟರ್ ಜನರಲ್ ಎಂಬ ಸಾಂವಿಧಾನಿಕ ಕರ್ತವ್ಯಗಳೊಂದಿಗಿನ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಎಸ್‌ಜಿಯೊಂದಿಗಿನ ಸುವೇಂದು ಅವರ ಭೇಟಿಯು ಪ್ರಕರಣದ ಮೇಲೆ ಪ್ರಭಾವ ಬೀರಬಹುದು ಎಂದು ಶಫಿ ಆತಂಕ ವ್ಯಕ್ತಪಡಿಸಿದ್ದಾರೆ.
ನಾರದಾ ಸ್ಟಿಂಗ್ ಆಪರೇಷನ್ ಮತ್ತು ಶಾರದಾ ಚಿಟ್ ಫಂಡ್ ಹಗರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ತಿಂಗಳಲ್ಲಿ ಸಿಬಿಐ ಅಧಿಕಾರಿಗಳು ಟಿಎಂಸಿ ನಾಯಕರನ್ನು ಕೋಲ್ಕತ್ತಾದಲ್ಲಿ ಬಂಧಿಸಿದ್ದರು. ಆದರೆ ಈ ಪ್ರಕರಣದ ಪ್ರಮುಖ ಆರೋಪಿಯಾದ ಸುವೇಂದು ಅಧಿಕಾರಿಯನ್ನು ಬಂಧಿಸಿರಲಿಲ್ಲ. ಬಿಜೆಪಿ ಸರ್ಕಾರದ ಕೃಪಕಟಾಕ್ಷದಿಂದ ಸುವೇಂದು ಅಧಿಕಾರಿ ಸಿಬಿಐ ಬಂಧನದಿಂದ ಮುಕ್ತರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಶಫಿ ಹೇಳಿದ್ದಾರೆ.
ಸುವೇಂದು ಅವರು ಎಸ್‌ಜಿ ನಡುವೆ 30 ನಿಮಿಷಗಳ ಕಾಲ ಕಚೇರಿಯಲ್ಲಿ ಸಭೆ ನಡೆಸಿರುವುದು ಎಸ್‌ಜಿ ಕಚೇರಿಯ ವಿಶ್ವಾಸ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಗಂಭೀರ ಪ್ರಮಾದವು ಸಾಂವಿಧಾನಿಕ ಹುದ್ದೆಯ ವಿಶ್ವಾಸ ಮತ್ತು ಪ್ರಾಮಾಣಿಕತೆಯನ್ನು ಮತ್ತು ಅದರ ಔಚಿತ್ಯವನ್ನು ಪ್ರಶ್ನಿಸುವಂತೆ ಮಾಡಿದೆ.
ಸಾಲಿಸಿಟರ್ ಜನರಲ್ ಹುದ್ದೆ ಘಟನೆ ಗೌರವವನ್ನು ಕಾಪಾಡಲು ಮತ್ತು ಅದರ ವಿಶ್ವಾಸವನ್ನು ರಕ್ಷಿಸಲು ಸಾಲಿಸಿಟರ್ ಜನರಲ್ ಅವರನ್ನು ತಕ್ಷಣವೇ ವಜಾ ಮಾಡಬೇಕೆಂದು ಶಫಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಕ್ರಮ್ ಹಸನ್
ಮಾಧ್ಯಮ ಉಸ್ತುವಾರಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ*
ಕರ್ನಾಟಕ ದೂರವಾಣಿ
9343342250
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…