ಪತ್ರಿಕಾ ಪ್ರಕಟಣೆ
ಹೊಸದಿಲ್ಲಿ, ಆಗಸ್ಟ್ 19, 2021, ಕಾನ್ಪುರದಲ್ಲಿ ಮುಸ್ಲಿಮರ ಮೇಲೆ ಆಗಸ್ಟ್ 11ರಂದು ನಡೆದ ಕೋಮು ದಾಳಿಯ ವಿರುದ್ಧ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಎಸ್‌ಡಿಪಿಐ ದೂರು ನೀಡಿದೆ.
ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂಬ ಸುಳ್ಳು ಸುದ್ದಿ ಹರಡಿದ ಸರ್ಕಾರಿ ಬೆಂಬಲಿತ ಗೂಂಡಾಗಳು ಮತ್ತು ಸಂಘಪರಿವಾರದ ಕಾರ್ಯಕರ್ತರು ಈ ದಾಳಿ ನಡೆಸಿದ್ದರು. ಎಸ್ ಡಿಪಿಐ ಮುಖಂಡರು ಘಟನೆಯ ಬಗ್ಗೆ ನೈಜ ಮಾಹಿತಿ ಪಡೆದ ಬಳಿಕ ದೂರು ದಾಖಲಿಸಿದ್ದಾರೆ.
ಉಪಾಧ್ಯಕ್ಷ ಅಡ್ವೊಕೇಟ್ ಶರ್ಫುದ್ದೀನ್ ಅಹ್ಮದ್ ನೇತೃತ್ವದಲ್ಲಿ ಘಟನೆಯ ನೈಜತೆಯನ್ನು ತಿಳಿಯಲು ಎಸ್ ಡಿಪಿಐ ನಿಯೋಗವೊಂದನ್ನು ಆಗಸ್ಟ್ 17, 2021 ರಂದು ಘಟನೆ ನಡೆದ ಕಾನ್ಪುರದ ಬಾರ್ರಾ -8ರ ಕಚ್ಚಿ ಬಸ್ತಿ ಎಂಬಲ್ಲಿಗೆ ಕಳುಹಿಸಿತು. ತಂಡದಲ್ಲಿ ಸ್ಥಳೀಯ ನಾಯಕರಾದ ಹಾರೂನ್ ರಶೀದ್ ಮತ್ತು ಜಾವೆದ್ ಅಹ್ಮದ್ ಕೂಡ ಇದ್ದರು. ಈ ಪ್ರದೇಶ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿನ ಹೆಚ್ಚಿನ ಜನರು ಸ್ವಂತ ಮನೆ ಇಲ್ಲದೆ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ.
ನೂರರಲ್ಲಿ ಕೇವಲ 12ರಷ್ಟು ಮುಸ್ಲಿಂ ಕುಟುಂಬಗಳು ಮಾತ್ರ ಸಣ್ಣ ಮನೆಗಳಲ್ಲಿ ವಾಸಿಸುತ್ತಿದ್ದರೆ, ಉಳಿದವರೆಲ್ಲಾ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಕಚ್ಚಿ ಬಸ್ತಿಯಲ್ಲಿ ಇದುವರೆಗೆ ಯಾವುದೇ ಜಾತಿ ಅಥವಾ ಕೋಮು ಸಂಘರ್ಷ ಉಂಟಾಗಿರಲಿಲ್ಲ. ಅವರೆಲ್ಲರೂ ಎದುರಿಸುತ್ತಿರುವ ಪರಿಸ್ಥಿತಿ ಮಾತ್ರ ಒಂದೇ ರೀತಿಯದ್ದಾಗಿದೆ. ಹೆಸರುಗಳಿಂದ ಮಾತ್ರ ಅವರು ಹಿಂದೂ ಮತ್ತು ಮುಸ್ಲಿಂ ಎಂದು ಗುರುತಿಸಬಹುದಾಗಿದೆ. ಖುರೇಷಾ ಬೇಗಂ ಮುಸ್ಲಿಮ್ ಮಹಿಳೆಯಾಗಿದ್ದರೆ, ರಮೇಶ್ ಅವರ ಪತ್ನಿ ರಾಣಿ ಪರಿಶಿಷ್ಟ ಜಾತಿಯ ಹಿಂದೂವಾಗಿದ್ದಾರೆ. ನೆರೆಹೊರೆಯವರಾದ ಅವರಿಬ್ಬರೂ ಕಳೆದ ಇಪ್ಪತ್ತು ವರ್ಷಗಳಿಂದ ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಇಬ್ಬರೂ ಈ ಹಿಂದೆ ವಾಸಿಸುತ್ತಿದ್ದ ಪ್ರದೇಶದಲ್ಲಿ ನೆರೆಹೊರೆಯರಾಗಿದ್ದು, ರಾಣಿಯ ಸಲಹೆಯ ಮೇರೆಗೆ, ಕುರೇಶರ ಕುಟುಂಬ ಆಕೆಯ ಮನೆಯ ಹತ್ತಿರಕ್ಕೆ ಸ್ಥಳಾಂತರ ಗೊಂಡಿತ್ತು.
ಬ್ಯಾಟರಿ ರಿಕ್ಷಾ ಚಾಲನೆ ವೃತ್ತಿ ಮಾಡುವ ಈ ಎರಡು ಕುಟುಂಬಗಳ ಮಕ್ಕಳ ನಡುವೆ ಕೆಲವು ವಿಷಯದಲ್ಲಿ ವಿವಾದ ಉಂಟಾದವು. ಜಗಳ ವಿಕೋಪಕ್ಕೆ ಹೋಗಿ ಎರಡು ಕುಟುಂಬಗಳ ನಡುವೆ ವಾಗ್ವಾದ ಮತ್ತು ಕಾನೂನು ಕ್ರಮಗಳು ಜರುಗಿದವು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ರಾಣಿಯ ಕುಟುಂಬವು ವಿಶೇಷವಾಗಿ ಅವರ ಮಗ ಬಜರಂಗದಳಕ್ಕೆ ಸೇರಿ ಉಗ್ರಗಾಮಿ ಸಿದ್ಧಾಂತದಿಂದ ಪ್ರೇರಿತನಾಗಿದ್ದಾನೆ. ಬಜರಂಗದಳದ ಸದಸ್ಯರು ಅಥವಾ ಬೆಂಬಲಿಗರು ಅಥವಾ ವಿಎಚ್‌ಪಿ ಗೂಂಡಾಗಳು ಈ ಪ್ರದೇಶದಲ್ಲಿ ಕೋಮು ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ.
ಆಗಸ್ಟ್ 11 ರಂದು, ಬ್ಯಾಟರಿ ರಿಕ್ಷಾದ ಮೇಲೆ ಗೀಚಿದ ಕಾರಣಕ್ಕೆ ವಿವಾದ ಉಂಟಾಯಿತು. ಕುರೇಶನ ಮಗನ ಮಾಡಿದ ಈ ತಪ್ಪಿನಿಂದ ಈ ಎರಡು ಕುಟುಂಬಗಳ ನಡುವೆ ಉಂಟಾದ ಜಗಳವನ್ನು ದುರುಪಯೋಗಪಡಿಸಡಿಕೊಂಡ ಬಜರಂಗದಳವು ಜಾಗರಣ್ (ಧಾರ್ಮಿಕ ಜಾಗೃತಿ) ಹೆಸರಿನಲ್ಲಿ ಪ್ರಚಾರಕ್ಕಾಗಿ ಬೀದಿಗಳಲ್ಲಿ ಮೆರವಣಿಗೆ ನಡೆಸಿತು. ಇದು ಕೋಮು ಉದ್ವೇಗ ಹೆಚ್ಚಾಗಲು ಕಾರಣವಾಯಿತು. ಬಜರಂಗದಳದ ನಾಯಕ ಅದರಲ್ಲೂ ವಿಶೇಷವಾಗಿ ಅಜಯ್ ಬಜೇವಾಲೆ ಎಂಬಾತನ ಮಗ ಶಿವಂ, ರಾಣಿಯ ಪ್ರಚೋದನೆಯಿಂದ ಮುಸ್ಲಿಮರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ. ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂಬ ಸುಳ್ಳು ಆರೋಪವನ್ನು ಮಾಡಲಾಯಿತು. ಈ ಮೆರವಣಿಗೆಯನ್ನು ಹೊರಗಿನ ಜನರೇ ಆಯೋಜಿಸಿದ್ದರು ಮತ್ತು ಅವರೇ ಹೆಚ್ಚಾಗಿ ಇದ್ದರು. ಮೆರವಣಿಗೆಯಲ್ಲಿದ್ದ ಕೆಲವು ವ್ಯಕ್ತಿಗಳು ರಿಕ್ಷಾ ಚಾಲಕ ಅಫ್ಸರ್ ಅಹ್ಮದ್ ತನ್ನ ಮಗಳೊಂದಿಗೆ ಹೋಗುತ್ತಿದ್ದಾಗ ಅವರ ಗಡ್ಡದ ಕಾರಣದಿಂದ ಅವರ ಮೇಲೆ ಹಿಂಸಾತ್ಮಕ ದಾಳಿ ನಡೆಸುತ್ತಾರೆ. ಕೋಮುದ್ವೇಷ ಹರಡುವ ಉದ್ದೇಶದಿಂದ ಮತ್ತು ಇತರ ಮುಸ್ಲಿಮರನ್ನು ಭಯಭೀತಗೊಳಿಸುವ ದೃಷ್ಟಿಯಿಂದ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅಫ್ಸರ್ ಮೇಲೆ ಹಲ್ಲೆ ಮಾಡಿದ ಮೂವರನ್ನು ಬಂಧಿಸಿದರೂ ಅಷ್ಟೇ ವೇಗದಲ್ಲಿ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಲಾಯಿತು. ವಾತಾವರಣವನ್ನು ಕೋಮುವಾದೀಕರಣಗೊಳಿಸುವುದರ ಹಿಂದೆ ಮುಖ್ಯ ಅಪರಾಧಿ ಅಜಯ್ ಬಜೇವಾಲೆ ಅವರ ಮಗ ಶಿವಮ್ ಎಂದು ತಿಳಿದುಬಂದಿದೆ. ಈ ಶಿವಮ್ ನೇರವಾಗಿ ಸಂಘಪರಿವಾರದ ಮುಖಂಡರೊಂದಿಗೆ ಮತ್ತು ಕ್ಷೇತ್ರದ ಬಿಜೆಪಿ ಶಾಸಕ ಮಹೇಂದ್ರ ತ್ರಿವೇದಿ ಅವರ ಪುತ್ರ ಶುಭಂ ಜೊತೆ ನೇರ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗಿದೆ. ಆಡಳಿತ ಪಕ್ಷದ ರಾಜಕೀಯ ಒತ್ತಡದಿಂದಾಗಿ, ಕೋಮು ವಾತಾವರಣ ಸೃಷ್ಟಿಸಿದ ಪ್ರಮುಖ ಅಪರಾಧಿಗಳಾದ ಶಿವಂ ಮತ್ತು ಶುಭಂ ಅವರನ್ನು ಬಂಧಿಸಿಲ್ಲ. ಮಾತ್ರವಲ್ಲ ಅವರಿಗೆ ಮುಕ್ತವಾಗಿ ಓಡಾಡಲು ಬಿಟ್ಟು ಮತ್ತಷ್ಟು ಕೋಮು ದ್ವೇಷ ಹರಡಲು ಅವಕಾಶ ಮಾಡಿಕೊಡಲಾಗಿದೆ. ಹಲ್ಲೆ ನಡೆಸಿದ ಪ್ರಕರಣಕ್ಕೆ ಬಂಧಿತರಾದ ಮೂವರು ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಅಪಾಯವನ್ನುಂಟುಮಾಡುವ ಗಂಭೀರ ಅಪರಾಧ ಎಸಗಿದ ಹೊರತಾಗಿಯೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸುವ ಬದಲು ಅವರನ್ನು ಠಾಣೆಯಿಂದಲೇ ಬಿಡುಗಡೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯವಾಗಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಆದರೆ ಬಜರಂಗದಳದ ಗೂಂಡಾಗಳಿಂದ ಆಗಸ್ಟ್ 11ರಂದು ಹಲ್ಲೆಗೊಳಗಾದ ಅಫ್ಸರ್ ಅಹ್ಮದ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಆಗಸ್ಟ್ 17 ರವರೆಗೆ ಕಳುಹಿಸಿಲ್ಲ.
ಆರೋಪಿಗಳಿಗೆ ಸುಲಭವಾಗಿ ಜಾಮೀನು ನೀಡಲು ಸ್ಥಳೀಯ ಪೊಲೀಸರು ಸಹಾಯ ಮಾಡಿರುವುದು ಹಾಗೂ ವೈದ್ಯಕೀಯ ಪರೀಕ್ಷೆಗೆ ಅಫ್ಸರ್ ಅಹ್ಮದ್ ರನ್ನು ಕಳುಹಿಸದಿರುವುದನ್ನು ನೋಡುವಾಗ ಈ ಪ್ರಕರಣದಲ್ಲಿ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿದೆ. ಹಾಗಾಗಿ ನಿಷ್ಪಕ್ಷಪಾತ ತನಿಖೆ ಮಾಡಲು ಅವರಿಗೆ ಸಾಧ್ಯವಿಲ್ಲ ಎಂಬುದು ಇದರಿಂದ ಸ್ಪಷ್ಟಗೊಂಡಿದೆ. ಮುಸ್ಲಿಮರನ್ನು ಭಯಭೀತಗೊಳಿಸುವ ಮತ್ತು ಸ್ಥಳೀಯ ವಾತಾವರಣವನ್ನು ಕೋಮು ದ್ವೇಷವಾಗಿ ಮಾರ್ಪಡಿಸಿದ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಕಾನೂನಿನ ಮುಂದೆ ತರಲು ಪೊಲೀಸರಿಗೆ ರಾಜಕೀಯ ಒತ್ತಡದಿಂದ ಸಾಧ್ಯವಾಗುತ್ತಿಲ್ಲ ಎಂಬುದು ಸಾಬೀತಾಗಿದೆ.
ವರದಿ ತಯಾರಿ:
ಅಡ್ವೊಕೇಟ್ ಶರ್ಫುದ್ದೀನ್ ಅಹ್ಮದ್
ರಾಷ್ಟ್ರೀಯ ಉಪಾಧ್ಯಕ್ಷ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ದೂರವಾಣಿ ಸಂಖ್ಯೆ: – 011 -46014569
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…