ಗುಲ್ಬರ್ಗ ಸೆ29: ಗುಲ್ಬರ್ಗ ಮಹಾನಗರ ಪಾಲಿಕೆಗೆ ಸೆಪ್ಟೆಂಬರ್ 3, 2021 ಶುಕ್ರವಾರದಂದು ಚುನಾವಣೆ ನಡೆಯಲಿದ್ದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಬುದ್ಧತೆಯಿಂದ ಆಯ್ದ 10 ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಭ್ರಷ್ಟಾಚಾರ ಮುಕ್ತ, ನ್ಯಾಯಯುತ ಆಡಳಿತಕ್ಕಾಗಿ ಮಹಾ ನಗರಪಾಲಿಕೆಯ ಒಳಗಡೆ ಎಸ್ಡಿಪಿಐ ಸದಸ್ಯರು ಇರಬೇಕಾಗಿದ್ದು ಅತೀ ಅಗತ್ಯವಾಗಿದೆ. ಎಂದು ಎಸ್ಡಿಪಿಐ ಮುಖಂಡರಾದ ಬಿ.ಆರ್. ಭಾಸ್ಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಗುಲ್ಬರ್ಗ ನಗರದ ಸಮರ್ಪಕ ಅಭಿವೃದ್ಧಿ ನಡೆದಿಲ್ಲ ಮಾತ್ರವಲ್ಲ, ಮೂಲಭೂತ ಸೌಕರ್ಯಗಳಾದ ಉತ್ತಮ ರಸ್ತೆ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನ, ಗ್ರಂಥಾಲಯ, ಮಾಹಿತಿ ಕೇಂದ್ರಗಳು, ಸರಕಾರಿ ಶಾಲೆಗಳು, ಆಸ್ಪತ್ರೆಗಳು ಹಾಗೂ ಇನ್ನಿತರ ಅತ್ಯಗತ್ಯ ಸೌಲಭ್ಯಗಳು ಜನರಿಗೆ ಇನ್ನೂ ತಲುಪಿಲ್ಲ. ಜನರು ಭರಿಸುವ ಕೋಟ್ಯಂತರ ರೂಪಾಯಿ ತೆರಿಗೆ ಹಣ ಭ್ರಷ್ಟ ರಾಜಕಾರಣಿಗಳ ಕೈಯಲ್ಲಿ ಪೋಲಾಗುತ್ತಿದೆ. ಕಳೆದ ಹಲವಾರು ವರ್ಷಗಳಲ್ಲಿ ಆಡಳಿತ ನಡೆಸಿದ ಪಕ್ಷಗಳು ಮತ್ತು ಅದರ ಕಾರ್ಪೊರೇಟರ್ ಗಳು ಜನರ ಕ್ಷೇಮಾಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಜನರಿಗೆ ದ್ರೋಹ ಬಗೆದಿರುವುದರಿಂದ ಜನರು ಬೇಸತ್ತು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯದಾದ್ಯಂತ ಸುಮಾರು ಮುನ್ನೂರಕ್ಕೂ ಅಧಿಕ ಚುನಾಯಿತ ಜನಪ್ರತಿನಿಧಿಗಳನ್ನು ಹೊಂದಿದ್ದು ಭ್ರಷ್ಟಾಚಾರ ಮುಕ್ತ, ನ್ಯಾಯಬದ್ಧ, ಕೋಮು ಸೌಹಾರ್ದತೆಯೊಂದಿಗೆ ಜನರಿಗೆ ಅವರ ಹಕ್ಕನ್ನು ನೀಡಲು ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಪರ್ಯಾಯ ರಾಜಕೀಯಕ್ಕಾಗಿ, ಭಯ ಮುಕ್ತ ಹಸಿವು ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಪಣತೊಟ್ಟಿರುವ ಎಸ್ಡಿಪಿಐಯ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಧನಾತ್ಮಕ ರಾಜಕೀಯಕ್ಕೆ ಮುನ್ನಡಿ ಬರೆಯಬೇಕಾಗಿರುವುದು ಗುಲ್ಬರ್ಗದ ಜನತೆಗೆ ಅತೀ ಅಗತ್ಯವಾಗಿದೆ. ಆದ್ದರಿಂದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಗಳಿಗೆ ಜನರು ಮತ ನೀಡಿ ಆಶೀರ್ವದಿಸಿ ನಿಮ್ಮ ಸೇವೆಗೆ ಅನುವು ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಎಸ್ಡಿಪಿಐ ಗೆಲುವು ಖಂಡಿತವಾಗಿಯೂ ಜನರ ಗೆಲುವಾಗಲಿದೆ. ಎಂದು ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್ ಭಾಸ್ಕರ್ ಪ್ರಸಾದ್ ಮನವಿ ಮಾಡಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ಗುಲ್ಬರ್ಗ ಚುನಾವಣಾ ಉಸ್ತುವಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಬ್ದುಲ್ ರಹೀಂ ಪಟೇಲ್, ಜಿಲ್ಲಾಧ್ಯಕ್ಷರಾದ ಮಹಮ್ಮದ್ ಮೊಹಿಸಿನ್ ಉಪಸ್ಥಿತರಿದ್ದರು.
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…