ಪತ್ರಿಕಾ ಪ್ರಕಟಣೆ
ನವದೆಹಲಿ: 13, ನವೆಂಬರ್: 1947ರಲ್ಲಿ ಸಿಕ್ಕಿದ್ದು ಭಿಕ್ಷೆ, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದು 2014ರಲ್ಲಿ ಎಂಬ ಕಂಗನಾ ರಣಾವತ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಕಂಗನಾ ಹೇಳಿಕೆಯನ್ನು ದೇಶದ್ರೋಹ ಎಂದು ಪರಿಗಣಿಸಿ ಕೂಡಲೇ ಅವರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
2014 ರವರೆಗೆ ದೇಶ ಮತ್ತು ಸಮಾಜಕ್ಕೆ ಪ್ರಶಂಸನೀಯ ಕೊಡುಗೆಗಳಿಗಾಗಿ ಶ್ರಮಿಸುವ ವ್ಯಕ್ತಿಗಳಿಗೆ ನೀಡುತ್ತಿದ್ದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಯನ್ನು ತನಗೆ ನೀಡಿರುವುದಕ್ಕೆ ಸಂಬಂಧಪಟ್ಟವರನ್ನು ಹೊಗಳುವುದು ಕಂಗನಾಗೆ ಅನಿವಾರ್ಯವಾಗಿದೆ. ಕಂಗನಾ ಸಮಾಜ ಅಥವಾ ದೇಶಕ್ಕೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಆದರೆ ಕಂಗನಾ ಅವರು ಫ್ಯಾಶಿಸ್ಟ್ ಶಕ್ತಿಗಳನ್ನು ಬೆಂಬಲಿಸುತ್ತ, ಕೋಮುವಾದಿಗಳ ಬೆನ್ನಿಗೆ ನಿಂತು ಸಮಾಜದಲ್ಲಿ ಧಾರ್ಮಿಕ ದ್ವೇಷ ಹರಡುತ್ತ, ಸಮಾಜವನ್ನು ವಿಭಜಿಸುತ್ತಿದ್ದಾರೆ ಇಂಥ ಬಾಲಬಡುಕರು 2014ರ ಬಳಿಕ ಹೆಚ್ಚಿದ್ದು, ಸ್ವಾತಂತ್ರ್ಯದ ಬಗ್ಗೆ ಇವರಿಗೆ ಯಾವ ಗೌರವವೂ ಇಲ್ಲ. ಇಂಥವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಂಗನಾ ಹೇಳಿಕೆಯು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ಮಾಡಿದ ಅವಮಾನವಾಗಿದೆ. ಕಂಗನಾ ಅವರಿಗೆ ತನ್ನ ಧಣಿಗಳನ್ನು ಹೊಗಳಲು ಯಾವ ಅಡ್ಡಿಯೂ ಇಲ್ಲ, ಆದರೆ ಅದಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಹರಿಸಿದವರನ್ನು, ತ್ಯಾಗ ಬಲಿದಾನ ಮಾಡಿದವರನ್ನು ಹೀಗಳೆಯುವುದು, ಸಮಾಜದಲ್ಲಿ ದ್ವೇಷ ಹರಡುವುದು ಸರಿಯಲ್ಲ. ನಮ್ಮ ಹಿರಿಯರು ಬ್ರಿಟಿಷರಿಗೆ ಎದೆಯೊಡ್ಡಿ ತ್ಯಾಗ ಬಲಿದಾನ ಮಾಡಿದ ಫಲವಾಗಿ ಇವರಿಗೆ ಅಧಿಕಾರ ದಕ್ಕಿದೆ. ದಂತಗೋಪುರಗಳಲ್ಲಿ ವಾಸಿಸುವವರು ವಿಷಯಗಳ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅಸಂಬದ್ಧವಾಗಿ ಮಾತನಾಡದೆ ಮೌನವಾಗಿದ್ದರೆ ಅದೇ ಅವರು ದೇಶ ಮತ್ತು ಸಮಾಜಕ್ಕೆ ನೀಡುವ ದೊಡ್ಡ ಸೇವೆಯಾಗುತ್ತದೆ. ರಣಾವತ್ ಅವರ ನಿಂದನಾತ್ಮಕ ಹೇಳಿಕೆಯು ದೇಶದ್ರೋಹಕ್ಕೆ ಸಮಾನವಾಗಿದೆ ಎಂದು ತುಂಬೆ ಹೇಳಿದರು.
ಸಮಾಜಕ್ಕೆ ಕೋಮು ವಿಷ ಕಕ್ಕುವುದು, ದ್ವೇಷ ಬಿತ್ತುವುದು, ಬೆಳೆಸುವುದು, ಕೋಮು ಧ್ರುವೀಕರಣ ಮಾಡುವುದು, ಅಲ್ಪಸಂಖ್ಯಾತರ ವಿರುದ್ಧ ಧ್ವೇಷದ ಹೇಳಿಕೆ ನೀಡುವುದು ಕಂಗನಾ ಅವರ ಕೊಡುಗೆಯಾಗಿದೆ. ದ್ವೇಷದ ಟ್ವೀಟ್ ಗಾಗಿ ಆಕೆಯನ್ನು ಟ್ವಿಟರ್ ನಿಷೇಧಿಸಿತ್ತು ಚಿತ್ರರಂಗದಲ್ಲೂ ಬಾಲಿವುಡ್ ಗೆ ಆಕೆಯ ಕೊಡುಗೆಯು ಶೂನ್ಯ. ಆದರೆ ದೇಶದ ಫ್ಯಾಶಿಸ್ಟ್ ಸರಕಾರವು ಆಕೆಗೆ ಸಂಪೂರ್ಣ ರಕ್ಷಣೆ ನೀಡಿದೆ, ಪದ್ಮಶ್ರೀಯನ್ನೂ ನೀಡಿ ಅದರ ಮೌಲ್ಯವನ್ನು ಕುಸಿಯುವಂತೆ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಕಂಗನಾರ ಹೇಳಿಕೆಯನ್ನು ಹೇಗೆ ಕೇಂದ್ರ ಸರಕಾರವು ನೋಡುತ್ತ ಕುಳಿತಿದೆ. ಇದು ದೇಶದ್ರೋಹದ ಹೇಳಿಕೆಗೆ ನೀಡುವ ಬೆಂಬಲವಲ್ಲವೆ ಎಂದು ಇಲ್ಯಾಸ್ ತುಂಬೆ ಪ್ರಶ್ನಿಸಿದರು.
ಈ ಕೂಡಲೆ ಕಂಗನಾ ರಣಾವತ್ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು. ಒಕ್ಕೂಟ ಸರಕಾರವು ಆಕೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಕೂಡಲೆ ಹಿಂದಕ್ಕೆ ಪಡೆಯಬೇಕು ಎಂದು ಇಲ್ಯಾಸ್ ತುಂಬೆ ಒತ್ತಾಯಿಸಿದರು.
ಕಂಗನಾ ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರವು ವಾಪಾಸು ಪಡೆಯದಿದ್ದಲ್ಲಿ ಪದ್ಮಶ್ರೀ ಪುರಸ್ಕೃತರೆಲ್ಲ ತಮ್ಮ ಪ್ರಶಸ್ತಿಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸುವ ಪ್ರತಿಭಟನೆ ಹಮ್ಮಿಕೊಳ್ಳಬೇಕು ಎಂದು ಇಲ್ಯಾಸ್ ತುಂಬೆ ಕರೆ ನೀಡಿದ್ದಾರೆ.
ಕೇಂದ್ರ ಕಚೇರಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ದೂರವಾಣಿ ಸಂಖ್ಯೆ: 011 -46014569
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
جوش و کانگریس حکومت کے کے اعلان سے پہلے، شری رنگا پٹنا سمیت پورے ریاست…
ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸುವ ಮೊದಲು ಶ್ರೀರಂಗಪಟ್ಟಣ ಸಹಿತ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ರಾಜಾರೋಷವಾಗಿ ಬಹಳ ಸಂಭ್ರಮದಿಂದ…
Our thoughts and prayers are with the victims and their families. ~ABDUL MAJEED,State President, SDPI…
ನವಂಬರ್ 11 ರಾಷ್ಟ್ರದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಸ್ಮರಣಾರ್ಥ ಶಿಕ್ಷಣವೇ ಸಮಾನತೆ, ನ್ಯಾಯ…