ಬೆಂಗಳೂರು(ಡಿ.15) : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಪೋಲಿಸ್ ಇಲಾಖೆ ರಾತ್ರೋರಾತ್ರಿ ಅಕ್ರಮವಾಗಿ ಬಂಧಿಸಿರುವ ಅಮಾಯಕ ಮುಸ್ಲಿಂ ನಾಯಕರನ್ನು ಬಿಡುಗಡೆಗೊಳಿಸಲು ಆಗ್ರಹಿಸಿ ನಿನ್ನೆ ಬೆಳಿಗ್ಗೆಯಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ನಿರತರ ಮೇಲೆ ಬರ್ಬರವಾಗಿ ಲಾಠಿಜಾರ್ಚ್ ನಡೆಸಿ ಮಾರಣಾಂತಿಕ ಗಾಯಗೊಳಿಸಿ ಕ್ರೌರ್ಯ ಮೆರೆದ ಘಟನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಪೂರ್ವ ನಿಯೋಜಿತ ಘಟನೆಯಂತೆ ಕಂಡು ಬರುತ್ತದೆ. ಕೇವಲ ಲಾಠಿ ಮಾತ್ರವಲ್ಲದೆ ಮಾರಕಾಯುಧಗಳಿಂದಲೂ ಮಾರಣಾಂತಿಕವಾಗಿ ತಲೆ, ಎದೆಯ ಭಾಗಕ್ಕೆ ಇರಿಯಲಾಗಿದೆ. ಈ ಮೂಲಕ ಸಂವಿಧಾನಾತ್ಮಕವಾಗಿರುವ ಪ್ರತಿಭಟನೆಯ ಹಕ್ಕನ್ನು ಕಸಿದು ಸರ್ವಾಧಿಕಾರಿ ಧೋರಣೆ ಮಾಡಲಾಗುತ್ತಿದೆ.
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗೆ ರಾತ್ರಿಯ ಸಂದರ್ಭದಲ್ಲಿ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ಅಮಾನುಷವಾಗಿ ದೌರ್ಜನ್ಯ ಎಸಗುವ ಮೂಲಕ ಪೋಲಿಸರು ಕ್ರೌರ್ಯ ಮೆರೆದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಕೆಲವು ಕೋಮುವಾದಿ ಗೂಂಡಾ ಸಂಘಟನೆಗಳು ಮತ್ತು ಕೋಮುವಾದಿ ನಾಯಕರಗಳ ಪ್ರಚೋಧನೆಯಿಂದಾಗಿ ಇದೇ ರೀತಿಯಾಗಿ ನಿರಂತರವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿಕೊಂಡು ಒಂದಲ್ಲಾ ಒಂದು ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇದೆ. BJP ಸರ್ಕಾರವೂ ಇಂತಹ ದೌರ್ಜನ್ಯಗಳಿಗೆ ಪೂರಕವಾಗಿ ತನ್ನ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ಮುಂದಾಗಿ ಕೋಮುದಳ್ಳುರಿ ಹೊತ್ತಿಸುವಂತಹ ಹೇಳಿಕೆ ನೀಡಿ, ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದರೆ ಕ್ರಿಯೆಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಅಲ್ಪಸಂಖ್ಯಾತರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದನ್ನು ನಾವಿಲ್ಲಿ ಮರೆಯುವ ಹಾಗಿಲ್ಲ. ಇಂತಹ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಹೇಳಿಕೆಗಳ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿರುವ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಕೊಲೆಯತ್ನ ಪ್ರಕರಣಗಳು ಅಧಿಕಗೊಳ್ಳುತ್ತಿವೆ
ಸಂಘಪರಿವಾರ ಸಂಘಟನೆಗಳು ಬಹಿರಂಗವಾಗಿಯೇ ತ್ರಿಶೂಲ ದೀಕ್ಷೆ ಕಾರ್ಯಕ್ರಮಗಳನ್ನು ನಡೆಸಿದರೂ ಅಂತಹ ಕಾರ್ಯಕ್ರಮಗಳನ್ನು ತಡೆಯುವ ಯಾವುದೇ ಪ್ರಯತ್ನವನ್ನು ಪೊಲೀಸ್ ಇಲಾಖೆ ನಡೆಸಿಲ್ಲ. ತ್ರಿಶೂಲ ದೀಕ್ಷೆಯ ನಂತರ ಜಿಲ್ಲೆಯಲ್ಲಿ ಹಲವಾರು ಕಡೆ ದಿನ ನಿತ್ಯ ತ್ರಿಶೂಲ ದಾಳಿ ಪ್ರಕರಣಗಳು ನಡೆದರೂ ಸರಕಾರ ಆಗಲಿ ಪೊಲೀಸ್ ಇಲಾಖೆಯಾಗಲಿ ಅದನ್ನು ಗಣನೆಗೆ ತೆಗೆದುಕೊಂಡು, ದಾಳಿಗಳನ್ನು ನಡೆಸುವ ಶಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದೆ ಸಂಘ ಪರಿವಾರಕ್ಕೆ ಜಿಲ್ಲೆಯಲ್ಲಿ ಏನೂ ಬೇಕಾದರೂ ಮಾಡಬಹುದು ಎಂಬ ಮಟ್ಟಕ್ಕೆ ಮೌನವಹಿಸಿದೆ.
ಆದ್ದರಿಂದ ಘಟನೆಯ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಪೋಲಿಸರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಸ್.ಡಿ.ಪಿ.ಐ ಒತ್ತಾಯಿಸುತ್ತದೆ.
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…