ಬೆಂಗಳೂರು ಏ.೧೨: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ೪೦% ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕರ‍್ಯರ‍್ತ ಹಾಗೂ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ್ ‘ಕೆ.ಎಸ್ ಈಶ್ವರಪ್ಪನವರೇ ನನ್ನ ಸಾವಿಗೆ ನೇರ ಕಾರಣ’ ಎಂಬುದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪ್ರೇರಣೆ ಕೇಸನ್ನು ದಾಖಲಿಸಿ ಸಚಿವ ಕೆ.ಎಸ್ ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪರ‍್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದ್ದಾರೆ.
ಸಂತೋಷ್ ಪಾಟೀಲ್ ಕಳೆದ ಒಂದು ರ‍್ಷದಿಂದ ೪೦% ಕಮಿಷನ್ ಬಗ್ಗೆ ಪೀಡಿಸುತ್ತಿರುವ ವಿಚಾರವಾಗಿ ನಿರಂತರ ಹೋರಾಟ ನಡೆಸುತ್ತಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಪತ್ರವನ್ನು ಬರೆದಿದ್ದರು, ಮಾತ್ರವಲ್ಲ ಬಿಜೆಪಿಯ ಹಿರಿಯ ಮುಖಂಡರುಗಳನ್ನು ಭೇಟಿಯಾಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಆದರೆ ಇದುವರೆಗೆ ಬಿಜೆಪಿಯದೇ ಕರ‍್ಯರ‍್ತನಾದ ಸಂತೋಷ್ ಗೆ ಯಾವುದೇ ನ್ಯಾಯ ದೊರಕಿಲ್ಲ ಬದಲಾಗಿ ಆತ್ಮಹತ್ಯೆಗೆ ಪ್ರೇರಣೆ ಲಭಿಸಿತ್ತು ಎಂದು ಅವರ ಡೆತ್ ನೋಟಿನಿಂದ ಬಹಿರಂಗವಾಗುತ್ತದೆ.
‘ಹಿಂದೂ ನಾವೆಲ್ಲರೂ ಒಂದು’ ಎನ್ನುತ್ತಾ ನಿರಂತರ ಕೋಮುದ್ವೇಷವನ್ನು ಬಿತ್ತುತ್ತಿರುವ ಸಂಘಪರಿವಾರಿಗಳಿಗೆ, ತಾಕತ್ತಿದ್ದರೆ ನಿಮ್ಮದೇ ಬಿಜೆಪಿ ಕರ‍್ಯರ‍್ತ ಸಂತೋಷ್ ಪಾಟೀಲ್ ಸಾವಿನ ನ್ಯಾಯಕ್ಕಾಗಿ, ಕೆ.ಎಸ್ ಈಶ್ವರಪ್ಪರನ್ನು ಬಂಧಿಸಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿ ಎಂದು ಅಬ್ದುಲ್ ಮಜೀದ್ ನೇರ ಸವಾಲನ್ನು ಹಾಕಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಖಿ ಅವರು, ಪಶ್ಚಿಮ ಏಷ್ಯಾದಲ್ಲಿ…
آج بنگلورو میں سوشیل ڈیموکریٹک پارٹی آف انز ٹی آف انڈیا (SDPI) کی اسٹیٹ کمیٹی…
ಇಂದು ಬೆಂಗಳೂರಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಸಮಿತಿ ಸದಸ್ಯೆಯಾಗಿದ್ದ ದಿವಂಗತ ಆಯಿಷಾ ಶಬ್ಬಿರ್ ಅವರ…
Aaj Bengaluru mein Social Democratic Party of India (SDPI) ki State Committee Member marhooma Ayesha…