ಹುಬ್ಬಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಸಲು ಪೂರ್ವ ನಿಯೋಜಿತ ಸಂಚು, ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ವರ್ತಿಸಲಿ :SDPI

ಬೆಂಗಳೂರು ಏ.18: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆ ನಡೆಸುವ ಏಕೈಕ ಉದ್ದೇಶದೊಂದಿಗೆ ಸಂಘಪರಿವಾರದ ಕಿಡಿಗೇಡಿಯೊಬ್ಬ ಕೋಮುಪ್ರಚೋದನಕಾರಿ ಪೋಸ್ಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು, ಇನ್ನೊಂದು ಸಮುದಾಯ ಕೆರಳುವಂತೆ ಮಾಡಿದ ಪೈಶಾಚಿಕ ಕೃತ್ಯವನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಹೇಳಿದ್ದಾರೆ

       ಪ್ರಚೋದನಾಕಾರಿ ಪೋಸ್ಟನ್ನು ಹರಿಯಬಿಟ್ಟ ಕಿಡಿಗೇಡಿಯನ್ನು ಮತ್ತು ಆ ಕೃತ್ಯವನ್ನು ಮಾಡಲು ಪ್ರಚೋದಿಸಿದ ಕಾಣದ ಕೈಗಳಿಗೆ ಕಾನೂನಿನ ಬೇಡಿಯನ್ನು ಹಾಕುವಂತೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ನಡೆಸಿದ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲುಗಳನ್ನು ಎಸೆದಿದ್ದು ಪ್ರತಿಭಟನೆಯ ದಿಕ್ಕು ತಪ್ಪಿಸಲಾಗಿದೆ. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಪೊಲೀಸರು ನಡೆಸುತ್ತಿರುವ ದಾಳಿ ಖಂಡನಾರ್ಹ. ಹಾಗೂ ಕೆಲ ಮಾಧ್ಯಮಗಳಲ್ಲಿ ಪ್ರತಿಭಟನಕಾರರನ್ನು ವಿಲನ್ ಗಳಾಗಿ ಬಿಂಬಿಸುತ್ತಿರುವುದು ಅತ್ಯಂತ ಖೇದಕರ ಎಂದು ಅಬ್ದುಲ್ ಮಜೀದ್ ಅಭಿಪ್ರಾಪಟ್ಟಿದ್ದಾರೆ.

           ಪೊಲೀಸ್ ಇಲಾಖೆ ಘಟನೆಗೆ ಕಾರಣಕರ್ತರಾದ ನೈಜ ಕಿಡಿಗೇಡಿಗಳನ್ನು ಬಂಧಿಸದೆ ಮುಸ್ಲಿಂ ಸಮುದಾಯದ ಅಮಾಯಕ ಯುವಕರನ್ನು ಬಂಧಿಸುತ್ತಿರುವುದು ಗಮನಿಸಿದರೆ, ಇದು ಎಂದಿನಂತೆ ಪೊಲೀಸ್ ಇಲಾಖೆಯ ಪೂರ್ವಗ್ರಹ ಪೀಡಿತ ಕ್ರಮದ ಮುಂದುವರಿದ ಭಾಗವಾಗಿದೆ. ಘಟನೆಯ ನೆಪವೊಡ್ಡಿಕೊಂಡು ರಾತ್ರಿ ಹೊತ್ತು ಅಮಾಯಕರ ಮನೆಗಳಿಗೆ ಪೊಲೀಸರು ನುಗ್ಗಿ ವೃದ್ಧರು, ಮಹಿಳೆಯರು, ಮಕ್ಕಳಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಬೇಕು. ಸಮಾಜದಲ್ಲಿ ಸ್ವಾಸ್ಥ್ಯ ಕದಡುತ್ತಿರುವ ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವ ನೈಜ ಕಿಡಿಗೇಡಿಗಳನ್ನು ಹುಡುಕಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಆದ್ದರಿಂದ ಈ ನಿಟ್ಟಿನಲ್ಲಿ ಹುಬ್ಬಳ್ಳಿ  ಪೊಲೀಸ್ ಅಧಿಕಾರಿಗಳು  ಕಾರ್ಯ ನಿರ್ವಹಿಸಬೇಕು ಎಂದು ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.

admin

Recent Posts

ದಾವತ್-ಎ-ಇಫ್ತಾರ್ ಗೆಟ್-ಟುಗೆದರ್

ದರ್ಗಾ ಹಜರತ್‌ ಖ್ವಾಜಾ ಬಂದನವಾಸ್ (‌ರ್.ಹ.) ಅವರ ಸಜ್ಜಾದಾ ನಶೀನ್‌ ಹಾಗೂ ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷರಾದ ಸಯ್ಯದ್ ಅಲಿ…

1 day ago

ಸಂತಾಪಗಳು

ಲಿಯಾಕತ್ ಆಲಿ 3. 2026 ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿಯಾದ ಮಡಿಕೇರಿ ಹಿಂದಿನ ಪುರಸಭೆಯ ಮಾಜಿ ಉಪಾಧ್ಯಕ್ಷ ಲಿಯಾಕತ್ ಆಲಿ…

4 days ago

ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಎಲ್‌.ಪಿ.ಜಿ ಕೊರತೆ ಮತ್ತು ರೆಸ್ಟೋರೆಂಟ್‌ಗಳ ಸಂಕಷ್ಟ – ಕೇಂದ್ರ ಸರ್ಕಾರದ ನಿರ್ಲಕ್ಷ ನಡೆಗೆ ತೀವ್ರಖಂಡನೆ: ಎಸ್.ಡಿ.ಪಿ.ಐ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಖಿ ಅವರು, ಪಶ್ಚಿಮ ಏಷ್ಯಾದಲ್ಲಿ…

6 days ago

تعزيتي خطاب مرحومهعائشہ شبیر

آج بنگلورو میں سوشیل ڈیموکریٹک پارٹی آف انز ٹی آف انڈیا (SDPI) کی اسٹیٹ کمیٹی…

1 week ago