ನಿಜವಾದ ಅಹಿಂದ ಪಕ್ಷವೆಂದರೆ SDPI ಮಾತ್ರವಾಗಿದೆ: ಶ್ರೀನಿವಾಸ್ ಹಿರಿಯೂರುಬೆಂಗಳೂರು: ಹಿಂದುಳಿದ ವರ್ಗವಾದ ಕಾಡುಗೋಲ್ಲ ಸಮುದಾಯದ ನಾಯಕ, ನಿವೃತ್ತ ಸರ್ಕಾರಿ ಅಧಿಕಾರಿ ಶ್ರೀನಿವಾಸ್ ಹಿರಿಯೂರು ಅವರು ಎಸ್.ಡಿ.ಪಿ.ಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷದ ರಾಜ್ಯ ಕಛೇರಿ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಅವರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಅವರು ಜೊತೆಗಿದ್ದರು.