ಎಸ್.ಡಿ.ಪಿ.ಐ ಗುಲ್ಬರ್ಗ ವತಿಯಿಂದ ಒಳಮೀಸಲಾತಿ ಜಾರಿಗೆ ಅನುಕೂಲವಾಗುವಂತೆ ಸಂವಿಧಾನದ ಪರಿಚ್ಛೇದ 341ಕ್ಕೆ ಸೂಕ್ತ ತಿದ್ದುಪಡಿಯನ್ನು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ತರಬೇಕೆಂದು ಆಗ್ರಹಿಸಿ ಗುಲ್ಬರ್ಗ ಜಿಲ್ಲಾಧಿಕಾರಿ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ನಿಯೋಗದಲ್ಲಿ ಎಸ್.ಡಿ.ಪಿ.ಐ ರಾಜ್ಯ ಮುಖಂಡ ಅಬ್ದುಲ್ ರಹೀಂ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಲೀಮ್ ಇಲಾಹಿ, ಪಕ್ಷದ ಮುಖಂಡ ಮೊಹಮ್ಮದ್ ಮೊಹ್ಸಿನ್, ಬಿ.ಎಸ್.ಪಿ ಮುಖಂಡ ಅನಿಲ್ ಟೆಂಗಲಿ, ದಲಿತ ಮುಖಂಡರುಗಳಾದ ಅಶ್ವಿನಿ ಮದನಕರ್, ಸಂಜೀವ್ ಕುಮಾರ್, ರಾಹುಲ್ ಕುಮಾರ್ ಹಾಗೂ ಕಮರ್ ಜುನೈದಿ ಮತ್ತಿತರರು ಉಪಸ್ಥಿತರಿದ್ದರು.