Categories: featureNewsPolitics

ರಾಜ್ಯದ ಮುಖ್ಯಮಂತ್ರಿ ಪದವಿ ನೀಡಿ ಗೌರವಿಸಿಬೇಕಾಗಿದ್ದ ಧೀಮಂತ ನಾಯಕ ಅಝೀಜ್ ಸೇಠ್ ನಮನ್ನಗಲಿ 21 ವರ್ಷ.ಈ ದಿನ ಕರ್ನಾಟಕ ರಾಜ್ಯದ ಜನಪ್ರಿಯ ರಾಜಕೀಯ ನಾಯಕ ದಿವಂಗತ ಮಾನ್ಯ ಅಝೀಜ್ ಸೇಠ್ ರ 21ನೇ ಪುಣ್ಯ ಸ್ಮರಣೆಯ ದಿನ.ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಧೀಮಂತ ನಾಯಕ. ಬೀಡಿ ಕಾರ್ಮಿಕರನ್ನು ಸಂಘಟಿಸಿ ಹಂತ ಹಂತವಾಗಿ ರಾಜ್ಯ ನಾಯಕರಾಗಿ ಬೆಳೆದ ಸೇಠ್ ಸಾಹೇಬ್ 1960 ರಿಂದ 1966 ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿ, 1967 ರಿಂದ 2001 ರ ನಡುವೆ 6 ಭಾರಿ ಶಾಸಕರು, 1972 ರಿಂದ 1984 ರ 12 ವರ್ಷ ಗಳ ಅವಧಿಯಲ್ಲಿ ಸಾರಿಗೆ, ಪ್ರವಾಸೋದ್ಯಮ, ಕಾರ್ಮಿಕ, ವಖ್ಫ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.1984 ರಿಂದ 1989 ರ ವರೆಗೆ ಧಾರವಾಡ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಅವರು ಸಲ್ಲಿಸಿದ ಸೇವೆ ಅಲ್ಲಾಹು ಸ್ವೀಕರಿಸಲಿ ಅವರ ಪರಲೋಕ ಜೀವನ ಅಲ್ಲಾಹು ಪಾವನಗೊಳಿಸಲಿ.ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

5 days ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

5 days ago