Categories: featureNewsPolitics

ಮೈಸೂರು ನಗರದ ಪ್ರಮುಖ ಸಾಮಾಜಿಕ ಕಾರ್ಯಕರ್ತರು ಎಸ್‌ಡಿಪಿಐ ಪಕ್ಷಕ್ಕೆ ಸೇರ್ಪಡೆಮೈಸೂರು, 03 ಜನವರಿ 2023: ಮೈಸೂರು ನಗರದ ಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಫೈಸಲ್ ಅಹಮದ್‌, ಮನ್ಸೂರ್‌ ಖಾನ್, ಬಹುಜನ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಸಲ್ಮಾ ಬಾನು ಮತ್ತು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸದಸ್ಯತ್ವ ಪಡೆಯುವ ಮೂಲಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯದ ಅಧ್ಯಕ್ಷ ಅಬ್ದುಲ್‌ ಮಜೀದ್ ಅವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಮಜೀದ್ ಅವರು, ಈ ನಾಲ್ವರೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಫೈಸಲ್ ಅಹಮದ್ ಅವರು ಈ ಹಿಂದೆ ಪಕ್ಷದಲ್ಲಿದ್ದರು ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಪಕ್ಷದಿಂದ ದೂರವಿದ್ದರು. ಇದೀಗ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮನ್ಸೂ‌ರ್ ಖಾನ್ ಅವರು ಸಕ್ರಿಯ ಸಾಮಾಜಿಕ ಕಾರ್ಯಕರ್ತರು ಮತ್ತು ಸಲ್ಮಾ ಬಾನು ಅವರು ಬಹುಜನ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ಜ್ಯೋತಿ ಮೇಡಂ ಶಿಕ್ಷಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಮೈಸೂರು ನಗರದ ಈ ನಾಲ್ವರು ಪ್ರಮುಖ ಸಮಾಜ ಸೇವಕರನ್ನು ನಾನು ಹೃತ್ತೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು. ಮೈಸೂರು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಎಸ್‌ಡಿಪಿಐ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರೆಲ್ಲರೂ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಜೀದ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಮೈಸೂರು ಜಿಲ್ಲಾಧ್ಯಕ್ಷ ರಫತ್‌ ಉಲ್ಲಾ ಖಾನ್, ಜಿಲ್ಲಾ ಸಮಿತಿ ಸದಸ್ಯ ಅಮ್ಮದ್‌ ಖಾನ್, ಜಿಲ್ಲಾ ಉಪಾಧ್ಯಕ್ಷ ಎಸ್‌.ಸ್ವಾಮಿ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ

admin

Recent Posts

🌟 Tribute to Dr. A.P.J. Abdul Kalam 🌟

Remembering Dr. A.P.J. Abdul Kalam, former President of India and the Missile Man of India,…

2 days ago

ಭಾರತ ಅಫ್ಘಾನಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಬೇಕು.

ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಮೌಲವಿ ಆಮಿರ್ ಖಾನ್ ಮುತ್ತಾಕಿ ಅವರ ಭಾರತ ಭೇಟಿಯು ಒಂದು ಉತ್ತಮ ಬೆಳವಣಿಗೆ.…

3 days ago

ಚುನಾವಣಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವಲ್ಲಿ ಬಿಹಾರ ಜನತೆ ಮುಂದಾಳತ್ವ ವಹಿಸಬೇಕು

~ಮೊಹಮ್ಮದ್ ಇಲ್ಯಾಸ್ ತುಂಬೆ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

4 days ago

ಪ್ಯಾಲೆಸ್ತೀನ್ ಪ್ರತಿರೋಧಕ್ಕೆ ಎಸ್‌ಡಿಪಿಐ ನಮನ ಯುದ್ಧ ವಿರಾಮಕ್ಕೆ ಸ್ವಾಗತ.

ಗಾಜಾದಲ್ಲಿ ಯುದ್ಧ ವಿರಾಮದ ಪ್ರಾರಂಭಿಕ ಹಂತಗಳನ್ನು ವಿಶ್ವವು ಕಣ್ತುಂಬಿಕೊಳ್ಳುತ್ತಿರುವ ಈ ಮಹತ್ವದ ಮುನ್ನಡೆಯ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತೂರ್ವಕ ಕೃತಜ್ಞತೆಯನ್ನು…

5 days ago