Categories: featureNewsPolitics

ಪುಲಿಕೇಶಿ ನಗರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಜಂಟಿ ಚುನಾವಣಾ ಯೋಜನಾ ಸಭೆ.ಬೆಂಗಳೂರು, 14 ಜನವರಿ 2023: ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಮತ್ತು ಸರ್ವಜ್ಞನಗರ ವಿಧಾನಸಭೆಗಳಿಗೆ ಸಂಬಂಧಪಟ್ಟ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಸಮಾಲೋಚನೆ ಮತ್ತು ಯೋಜನಾ ಸಭೆಯನ್ನು ಜಂಟಿಯಾಗಿ ಏರ್ಪಡಿಸಲಾಗಿತ್ತು. ಈ ಸಭೆಯ ನೇತೃತ್ವವನ್ನು ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಅವರು ವಹಿಸಿದ್ದರು.ಈ ಸಂದರ್ಭದಲ್ಲಿ ಅಫ್ಸರ್ ಕೊಡ್ಲಿಪೇಟೆ ಅವರು ಮಾತನಾಡಿ ದಶಕಗಳಿಂದ ಎಲ್ಲ ಪಕ್ಷಗಳು ಜನರನ್ನು ವಂಚಿಸಿ ಅವರಿಂದ ಮತ ಪಡೆದು ದ್ರೋಹ ಬಗೆಯುತ್ತ ಬಂದಿದ್ದಾರೆ ಎಂಬುದರ ಬಗ್ಗೆ ವಿವರಿಸಿದರು. ಜೊತೆಗೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಪಕ್ಷಗಳು ಆ ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ನೆರವೇರಿಸಲು ಹೇಗೆ ವಿಫಲರಾಗುತ್ತಾರೆ ಎಂಬುದರ ಬಗ್ಗೆ ಚರ್ಚೆ ನಡೆಸಿದರು.ಈ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಗಳ ಜವಾಬ್ದಾರಿ ಏನು ಎನ್ನುವುದರ ಬಗ್ಗೆ ಮತ್ತು ಹೇಗೆ ಕ್ಷೇತ್ರದ ಮತದಾರರ ವಿಶ್ವಾಸವನ್ನು ಗಳಿಸಬೇಕು ಎನ್ನುವ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.ಚುನಾವಣೆಗಳಲ್ಲಿ ಬೂತ್ ಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದ ಅವರು, ಬೂತ್ ಮಟ್ಟದಲ್ಲಿ ನಡೆಸಬೇಕಾದ ಯೋಜನೆಗಳು ಮತ್ತು ಬೂತ್ ಮಟ್ಟದಲ್ಲಿ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ಮಾತನಾಡುತ್ತ ಈ ಕೆಳಗಿನ ಅಂಶಗಳನ್ನು ಚರ್ಚಿಸಿದರು;ಇನ್ನಷ್ಟು ಬೂತ್ ಮಟ್ಟದ ಸಮಿತಿಗಳನ್ನು ರಚಿಸುವುದು.ಹಾಲಿ ಶಾಸಕರ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.ಮತದಾರರ ಪಟ್ಟಿಯಲ್ಲಿ ಅಳಿಸಿ ಹೋಗಿರುವ ಹೆಸರುಗಳನ್ನು ಮರು ಸೇರಿಸಲು ಕ್ರಮ ಮತ್ತು ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವುದು.ಈ ವಿಚಾರಗಳ ಜೊತೆಗೆ ಇನ್ನಷ್ಟು ಚುನಾವಣೆಗೆ ಸಂಬಂಧಪಟ್ಟ ವಿಚಾರಗಳನ್ನು ಸಹ ಈ ಸಭೆಯಲ್ಲಿ ಚರ್ಚಿಸಲಾಯಿತು.ಈ ಸಭೆಯಲ್ಲಿ ಭಾಗವಹಿಸಿದವರು:ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ.ರಾಜ್ಯ ಸಂಘಟನಾ ಕಾರ್ಯದರ್ಶಿ ಮಜೀದ್ ತುಂಬೆ.ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್.ರಾಜ್ಯ ಖಜಾಂಚಿ ನವಾಜ್ ಉಳ್ಳಾಲ್.ಪುಲಿಕೇಶಿ ನಗರ ಅಭ್ಯರ್ಥಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್.ಸರ್ವಜ್ಞನಗರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್.ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಹಾಗೂ ಪುಲಿಕೇಶಿನಗರ ಚುನಾವಣಾ ಉಸ್ತುವಾರಿ ಮುಜಮ್ಮಿಲ್ ಪಾಷಾ.ಸರ್ವಜ್ಞ ನಗರ ಚುನಾವಣಾ ಉಸ್ತುವಾರಿ ಶಕೀಲ್ ಭಾಷಾ.ಮತ್ತು ಚುನಾವಣಾ ಕೋರ್ ಕಮಿಟಿ ಸದಸ್ಯರು.

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

5 days ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

5 days ago