Categories: featureNewsPolitics

ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ಮೈಸೂರು ಗ್ರಾಮಾಂತರ ಜಿಲ್ಲೆ ಎಸ್‌ಡಿಪಿಐ ಪಕ್ಷದ ಚುನಾವಣಾ ಪೂರ್ವಭಾವಿ ಸಭೆಮೈಸೂರು, 27 ಜನವರಿ 2023: ಮೈಸೂರು ಗ್ರಾಮಾಂತರ ಜಿಲ್ಲೆಯ ಚುನಾವಣಾ ಪೂರ್ವಭಾವಿ ಸಭೆಯು ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ವಿಧಾನಸಭಾ ಚುನಾವಣಾ ಉಸ್ತುವಾರಿಗಳಾದ ಅಪ್ಸ‌ರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ತುಂಬೆ ಇವರ ಉಪಸ್ಥಿತಿಯಲ್ಲಿ ನಡೆಯತು. ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿ ನಾಲ್ಕು ಅಭ್ಯರ್ಥಿಗಳ ಹೆಸರುಗಳನ್ನು ರಾಜ್ಯ ಸಮಿತಿಯ ಅನುಮೋದನೆಗಾಗಿ ಕಳಿಸಿಕೊಡಲು ತೀರ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಪ್ಪ‌ರ್ ಕೊಡ್ಲಿಪೇಟೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಲು ಕರೆ ನೀಡಿದರು. ಈಗಾಗಲೇ 54 ವಿಧಾನಸಭಾ ಕ್ಷೇತ್ರಗಳ ಪ್ರಥಮ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ರವರು ಬಿಡುಗಡೆ ಮಾಡಿದ್ದು, ಶೀಘ್ರವೇ ರಾಜ್ಯ ಸಮಿತಿಯಿಂದ ದ್ವಿತೀಯ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಭೆಯಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಜಾಝ್ ಅಹಮದ್‌, ಪ್ರಧಾನ ಕಾರ್ಯದರ್ಶಿ ಸೈಯದ್ ಅಕ್ಬರ್ , ಸಂಘಟನಾ ಕಾರ್ಯದರ್ಶಿ ಲಿಯಾಕತ್ ಅಲಿ, ಹುಣಸೂರು ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮುಸ್ತಫ ಖಾನ್ ಹಾಗೂ ನಗರಸಭಾ ಸದಸ್ಯರಾದ ಸೈಯದ್‌ ಯೂನುಸ್ ಪಾಲ್ಗೊಂಡಿದ್ದರು.

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago