ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸ್ಪರ್ಧೆ ಮಾಡುತ್ತಿರುವಂತಹ ವಿಚಾರ ಹಾಗೂ ಒಳ ಮೀಸಲಾತಿಗಾಗಿ ಒತ್ತಾಯಿಸಿ ರಾಜ್ಯದ ಶೋಷಿತ ಸಮುದಾಯಗಳು ಕಳೆದ 32 ವರ್ಷಗಳಿಂದ ನಡೆಸುತ್ತಿರುವಂತಹ ನಿರಂತರವಾದಂತಹ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಸಜ್ಜು: ಎಸ್‌ಡಿಪಿಐ

ಹುಬ್ಬಳ್ಳಿ 10, ಫೆಬ್ರವರಿ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಳೆದ 13 ವರ್ಷಗಳಲ್ಲಿ ದೇಶದ ಸುಮಾರು 20 ರಾಜ್ಯಗಳಲ್ಲಿ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದೆ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿರುವಂತಹ ಕರ್ನಾಟಕದ ನಾಲ್ಕನೇ ಅತಿ ದೊಡ್ಡ ಪಕ್ಷವಾಗಿ ಬೆಳೆದು ಬಂದಿದೆ. ಗುರುತಿಸಿಕೊಂಡಿದೆ. ಪ್ರಸ್ತುತ 2023 ನೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದಾದ್ಯಂತ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನು ಮಾಡುತ್ತಿದ್ದು ಈಗಾಗಲೇ 54 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಮತ್ತು ಮೊದಲ ಹಂತದಲ್ಲಿ 10 ಅಭ್ಯರ್ಥಿಗಳ ಹೆಸರನ್ನು ಸಹ ಜನವರಿ 7ನೇ ತಾರೀಖಿನಂದು ಬೆಂಗಳೂರಿನಲ್ಲಿ ಎಸ್ಬಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ಅವರು ಘೋಷಣೆ ಮಾಡಿದ್ದಾರೆ . ಶೀಘ್ರವೇ ಎರಡನೇ ಪಟ್ಟಯನ್ನು ಬಿಡುಗಡೆ ಮಾಡಲಾಗುತ್ತಿದ್ದು ಈ ಪಟ್ಟಿಯಲ್ಲಿ ಹುಬ್ಬಳ್ಳಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನೂ ಪ್ರಕಟ ಮಾಡಲು ಯೋಚಿಸಲಾಗಿದೆ. ಕರ್ನಾಟಕ ರಾಜ್ಯದ ಶೋಷಿತ ಸಮುದಾಯಗಳಾದಂತಹ ಹೊಲಯ ಮತ್ತು ಮಾದಿಗ ಜಾತಿಯ ಸಂಬಂಧಿತ ಸುಮಾರು 90 ಜಾತಿಗಳು ಹಾಗು ಪರಿಶಿಷ್ಟ ಜಾತಿಯ ಆದಿವಾಸಿ, ಅಲೆಮಾರಿ, ಅಲೆ ಅಲೆಮಾರಿ ಮತ್ತು ಬುಡಕಟ್ಟುಗಳು ತಮ್ಮ ಒಳ ಮೀಸಲಾತಿಯ ಹಕ್ಕಿಗಾಗಿ ನಿರಂತರವಾಗಿ ಕಳೆದ 32 ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬರುತ್ತಿದ್ದರು. ಆದರೆ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾವು ಈ ನಾಡಿನ ಅಸೃಶ್ಯ ಮತ್ತು ಶೋಷಿತ ಸಮುದಾಯಗಳ ಪರವಾಗಿ ಹೋರಾಟಕ್ಕೆ ನಿಂತಿದೆ ಕಳೆದ ಹಲವು ವರ್ಷಗಳಿಂದಲೂ ಖಳಿಂಗ, ಒಳ ಮೀಸಲಾತಿಯ ಹಕ್ಕಿನ ಹೋರಾಟದೊಂದಿಗೆ ತನ್ನ ಧ್ವನಿಯನ್ನ ಕೂಡಿಸುತ್ತಾ ಬಂದಿದೆ. ರಾಜ್ಯದಾದ್ಯಂತ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮತ್ತು ಹೋಬಳಿಗಳ ಮಟ್ಟದಲ್ಲೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒಳ ಮೀಸಲಾತಿಯ

ಹಕ್ಕಿನ ಹೋರಾಟವನ್ನು ಸ್ವತಃ ನಡೆಸಿಕೊಂಡು ಬಂದಿದ್ದು ಸಂವಿಧಾನಕ್ಕೆ ತಿದ್ದುಪಡಿ ತರಲು ಆಗ್ರಹಿಸಿ ರಾಷ್ಟ್ರಪತಿ ಯವರಿಗೆ ಆಗ್ರಹ ಪತ್ರವನ್ನು ಸಹ ಕಳುಹಿಸಲಾಗಿದೆ ಹಾಗೆಯೇ ಹುಬ್ಬಳ್ಳಿಯಲ್ಲಿ ಕಳೆದ ಸುಮಾರು 25 ದಿವಸಗಳಿಂದಲೂ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಬೆಂಬಲ ಸೂಚಿಸಿ ಎಸ್ಟಿಪಿಐ ಹುಬ್ಬಳ್ಳಿ ಜಿಲ್ಲಾ ನಾಯಕರೊಂದಿಗೆ ಬಾಗವಹಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣಾ ಉಸ್ತುವಾಲಿ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಲಿತ ಹೋರಾಟಗಾರರಾದ ಬಿ.ಆರ್. ಭಾಸ್ಕರ್ ಪ್ರಸಾದ್, ಪ್ರಗತಿಪರ ಚಿಂತಕರು ಮತ್ತು ದಲಿತ ಹೋರಾಟಗಾರರು ಪ್ರೊ. ಹರಿರಾಮ್‌, ಹುಬ್ಬಳ್ಳಿ ಜಿಲ್ಲಾಧ್ಯಕ್ಷರಾದ ಮಕ್ತುಮ್ ಹುಸೇನ್ ಹೊಸಮನಿ, ಹುಬ್ಬಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ್ ಅಹ್ಮದ್ ಹುರಟ್ಟಿ ಉಪಸ್ಥಿತರಿದ್ದರು.

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

11 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

11 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

11 months ago