ಬೊಮ್ಮಾಯಿ ಅವರು ಮಂಡಿಸಿದ 2023 24ರ ಸಾಲಿನ ಬಜೆಟ್ ಕಪ್ಪು ಬಿಳುಪು ಚಿತ್ರಕ್ಕೆ ಬಣ್ಣ ಬಳಿದು ಚಂದಗಾಣಿಸುವ ವಿಫಲ ಪ್ರಯತ್ನ. ಇದರಲ್ಲ ಜನರಿಗೆ ಮೋಸವಲ್ಲದೆ ಬೇರೆನಿಲ್ಲ:
ಅಬ್ದುಲ್ ಮಜೀದ್ ಮೈಸೂರು, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ
ಬೆಂಗಳೂರು, 17 ಫೆಬ್ರವರಿ 2023: ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಿದ 2023 – 24 ಸಾಲಿನ ಬಜೆಟ್ ಕಪ್ಪು ಬಿಳುಪು ಚಿತ್ರಕ್ಕೆ ಬಲವಂತಕ್ಕೆ ಬಣ್ಣ ಬಂದು ಚಂದವಾಗಿ ಕಾಣುವಂತೆ ಮಾಡುವ ವಿಫಲ ಪ್ರಯತ್ನವಾಗಿದೆ. ಇದರಲ್ಲಿ ಸಾಮಾನ್ಯ ಜನರಿಗೆ ಮೋಸವಲ್ಲದೆ ಮತ್ತೇನು ಇಲ್ಲ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಇನ್ನೆರಡು ತಿಂಗಳಲ್ಲಿ ಚುನಾವಣೆ ಬರಲಿರುವ ಕಾರಣ ಆ ನೆಪದಲ್ಲಿಯಾದರೂ ಜನತೆಗೆ ಒಂದಷ್ಟು ಉಪಯುಕ್ತ ಯೋಜನೆಗಳು, ಬಡವರ ಪರ, ರೈತ ಪರ ನೀತಿ, ಯೋಜನೆಗಳು ಘೋಷಣೆಯಾಗಬಹುದು ಎಂದು ನಿರೀಕ್ಷಿಸುತ್ತಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಶೆ ಮೂಡಿಸಿದೆ. ಪ್ರಮುಖ ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಪ್ರಮಾಣದ ಅನುದಾನ ನೀಡಿರುವುದನ್ನು ಗಮನಿಸಿದರೆ ಕರ್ನಾಟಕ ರಾಜ್ಯದ ಬೊಕ್ಕನ ಆರೋಗ್ಯಕರವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಂಕಿಗಳನ್ನು ದೊಡ್ಡದಾಗಿ ತೋರಿಸುವ ಮೂಲಕ ಅದರ ಮೂಲ ಮೌಲ್ಯವನ್ನು ಜಾಗರೂಕತೆಯಿಂದ ಬಚ್ಚಿಡುವಂತಹ ಪ್ರಯತ್ನ ಮಾಡಲಾಗಿದೆ. ಇದು ಸಂಪೂರ್ಣ ಕಣ್ಕಟ್ಟಿನ ಬಜೆಟ್ಟಾಗಿದ್ದು ಜನರನ್ನು ದಿಕ್ಕು ತಪ್ಪಿಸುವ ಬಿಜೆಪಿಯವರ ತಂತ್ರವಾಗಿದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಏರು ಗತಿಯಲ್ಲಿರುವ ನಿರುದ್ಯೋಗದ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾಪ ಅಥವಾ ಯೋಜನೆಗಳನ್ನು ಬಜೆಟ್ ನಲ್ಲಿ ಸೇರಿಸಲಾಗಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷ ಉದ್ಯೋಗಗಳ ನೇಮಕಾತಿಯ ಬಗ್ಗೆಯೂ ಕೂಡ ಯಾವುದೇ ಪ್ರಸ್ತಾಪ ಇಲ್ಲ. ಯುವಕರನ್ನು ಕೇವಲ ಕೋಮುವಾದದ ನಂಜಿನ ಮೂಲಕವೇ ಸೆಳೆಯುವುದು ಇವರ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಅದಕ್ಕಿಂತಲೂ ಅಘಾತಕಾರಿ ಅಂಶವೆಂದರೆ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ 339 ಯೋಜನೆಗಳ ಪೈಕಿ 132 ಯೋಜನೆಗಳ ಅನುಷ್ಠಾನವೇ ಆಗಿಲ್ಲ. ಪೂರ್ಣ ವರ್ಷ ಅಧಿಕಾರ ನಡೆಸುವ ಅವಕಾಶ ಇದ್ದಾಗಿಯೂ ಇಂತಹ ಪರಿಸ್ಥಿತಿ ಇದ್ದರೆ ಇನ್ನು ಈ ಬಜೆಟ್ ಕೇವಲ ಎರಡು ತಿಂಗಳ ಅಯನ್ನು ಹೊಂದಿದ. ಈ ಅಲ್ಪ ಅವಧಿಯಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಕೆಲವು ಯೋಜನೆಗಳ ಟೆಂಡರ್ ಕರೆದು ಅದರಲ್ಲಿ ಕಮಿಷನ್ ಹೊಡೆಯುವುದನ್ನು ಬಿಟ್ಟರೆ ಬೇರೇನನ್ನು ಕೂಡ ಮಾಡುವುದಿಲ್ಲ ಎನ್ನುವುದು ಸ್ಪಷ್ಟ ಎಂದು ಅವರು ಆರೋಪಿಸಿದರು. ಒಟ್ಟಾರೆಯಾಗಿ ಇದೊಂದು ಬೋಗಸ್ ಮತ್ತು ಜನರನ್ನು ಯಾಮಲಿಸಿ ಮತ ಪಡೆಯುವ ವಿಫಲ ಪ್ರಯತ್ನ ಎಂದು ಮಜೀದವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
~ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
ಒಡಿಶಾದ ಕಟಕ್‌ನಲ್ಲಿ ದುರ್ಗಾ ಪೂಜೆಯ ವಿಗ್ರಹ ಮೆರವಣಿಗೆ ಸಮಯದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಮಾಡಿದ ಹಿಂಸಾಚಾರ ಅತ್ಯಂತ ಆತಂಕಕಾರಿ…
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನ ಪಟ್ಟ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್…
کے․جی․ ہلّی اور ڈی․جی․ ہلّی مقدمے میں گرفتار دو افراد کوسپریم کورٹ نے ضمانت منظور…
ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ…
عبد الحنان ریاستی نائب صدر - ایس۔ ڈی۔ پی۔ آئی ہے بنگلور، 5 اکتوبر: توانائی…