ಚಾಮರಾಜನಗರ, ಫೆ-18, ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಕಛೇರಿಯಲ್ಲಿ ವಿಧಾನ ಸಭಾ ಚುನಾವಣಾ ಪೂರ್ವ ತಯಾರಿ ಸಭೆ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಮಾತನಾಡಿ ನಮ್ಮನ್ನು ಆಳಿದ ಎಲ್ಲಾ ಪಕ್ಷಗಳು ಒಂದಲ್ಲ ಒಂದು ಜನ ವಿರೋಧಿ ನೀತಿಗಳನ್ನು ಮಾಡಿ ಬಲವಂತವಾಗಿ ಜನರ ಮೇಲೆ ಹೇರಿರುವುದು ನಾವು ನಿರಂತರವಾಗಿ ನೋಡಿದ್ದೇವೆ. ಜನರ ಪರವಾಗಿ ಸರ್ಕಾರ ತನ್ನ ಬದ್ಧತೆ ತೋರಿಸುತ್ತಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ದುರ್ಘಟನೆಯನ್ನು ಒಂದು ಉದಾಹರಣೆ ತೆಗೆದುಕೊಂಡರೆ ಸಾಕು, ಸಂತ್ರಸ್ತರ ಜೊತೆ ಸರ್ಕಾರ ಯಾವ ರೀತಿ ನಡೆದು ಕೊಂಡಿದೆ ಎಂಬುವುದನ್ನು ಕಾಣಲು ಸಿಗುತ್ತೆ. ಇನ್ನು ವಿರೋಧ ಪಕ್ಷದ ನಡೆ ನುಡಿಯಲ್ಲಿ ಅಜಗಜಾಂತರ ಇದೆ, ಕಾಂಗ್ರೆಸ್ – ಜೆ.ಡಿ.ಎಸ್ ಪಕ್ಷದ ಶಾಸಕರು ಮಾರಾಟವಾಗಿ ಬಿಜೆಪಿ ಸರ್ಕಾರ ಬರಲು ಕಾರಣಕರ್ತರಾದರು. ಈಗ ಪ್ರಸ್ತುತ ಬಿಜೆಪಿ ಸರ್ಕಾರದ ವಿರುದ್ಧ ಇದೇ ಪಕ್ಷಗಳು ನಾಟಕೀಯ ಹೋರಾಟ ಮಾಡುತ್ತಿದೆ. ರಾಜ್ಯದಲ್ಲಿ ದುಷ್ಟ ರಾಜಕೀಯ ವಾತಾವರಣ ನಿರ್ಮಾಣವಾಗಿದೆ. ಹೀಗೆ ಅಮಾಯಕ ಮತದಾರರನ್ನು ಮೋಸ ಮಾಡಿ ಮತ್ತೊಮ್ಮೆ ಈ ಜೆಸಿಬಿ ಪಕ್ಷಗಳು ಅಧಿಕಾರಕ್ಕೆ ಬರಲು ಹಂಬಲಿಸುತ್ತಿದ್ದಾರೆ. ಆದುದರಿಂದ ಜನರನ್ನು ಮೋಸ ಮಾಡುವ ಸಮಾನ ಮನಸ್ಕರ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಸೋಲಿಸಿ ಒಂದು ಪರ್ಯಾಯ ರಾಜಕೀಯ ವ್ಯವಸ್ಥೆ ಸ್ಥಾಪಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಎಸ್‌ಡಿಪಿಐ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ಲತೀಫ್ ಕರೆ ನೀಡಿದರು. ಮುಂದೆ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಹೇಗೆ ವ್ಯವಸ್ಥಿತವಾಗಿ ಕೆಲಸ ಕಾರ್ಯಗಳನ್ನು ಮಾಡ ಬೇಕು ಎಂಬುವುದರ ಬಗ್ಗೆ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಅಬ್ರಾರ್ ಆಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್.ಎಂ, ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಆರೀಫ್ ನಗರ ಸಭಾ ಸದಸ್ಯರಾದ ಕಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಅಪ್ಸರ್ ಪಾಷ, ಖಜಾಂಚಿ ನಯಾಜ್, ಇರ್ಫಾನ್, ಶಿವಣ್ಣ, ಜಾಕೀರ್ ಮುಂತಾದವರು ಉಪಸ್ಥಿತರಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ – ಕರ್ನಾಟಕ
ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ
1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…
1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ
ಬೆಂಗಳೂರು, 27 ಜನವರಿ 2024: ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ…