ತಮ್ಮ ಮೇಲೆ WFI ಅಧ್ಯಕ್ಷ ಹಾಗೂ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ನಡೆಸುತ್ತ ಬಂದಿರುವ ದೌರ್ಜನ್ಯಗಳ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರತದ ಪದಕ ವಿಜೇತ ಮಹಿಳಾ ಕುಸ್ತಿಪಟುಗಳು ಚಳುವಳಿ ಹಮ್ಮಿಕೊಂಡಿದ್ದಾರೆ. ಅವರ ಚಳುವಳಿಯನ್ನು ವಿಫಲಗೊಳಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಅಧಿಕಾರದ ಅಡಿಯಲ್ಲಿ ಬರುವ ದೆಹಲಿ ಪೋಲೀಸರು ಇನ್ನಿಲ್ಲದ ನೀಚ ತಂತ್ರಗಳನ್ನು ಹೂಡುತ್ತಿದ್ದಾರೆ. ನಾರಿ ಶಕ್ತಿ ಎಂದು ಬಾಯಿತುಂಬಾ ಹೇಳುವ ಪ್ರಧಾನಿ ಮೋದಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಖಿ ಅವರ ನೇತೃತ್ವದ ನಿಯೋಗ ಚಳುವಳಿನಿರತ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅವರಿಗೆ ಬೆಂಬಲ ಸೂಚಿಸಿತು. ಇದೇ ಸಂದರ್ಭದಲ್ಲಿ WFI ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ತಮ ಕೈಗೊಳ್ಳಬೇಕು ಎಂದು ಯಾಸ್ಮಿನ್ ಫಾರೂಖಿ ಅವರು ಒತ್ತಾಯಿಸಿದರು.
JANAGRAHA SAMAVESHA Respected Sir/Madam, In order to fulfill the objectives of the Constitution, we urge…
ಜನಾಗ್ರಹ ಸಮಾವೇಶ ಮಾನ್ಯರೇ.., ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ,…
~Afsar Kodlipet,State General Secretary
Afsar Kodlipete, State General Secretary,