Categories: featureNewsPolitics

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಿಗೆ

ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪೆ ಅಂತಿಮ. ಅದನ್ನು ರಾಜಕಾರಣಿಗಳು ವಿನಯದಿಂದ ಸ್ವೀಕರಿಸಬೇಕು. ಅಂತೇಯೇ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರಾಗಿ ನೀವು ನೀಡಿರುವ ತೀರ್ಪನ್ನು ನಾನು ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದೊಂದು ಹೋರಾಟ. ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಅಥವಾ ಸಮಾಜದ ಯಾವುದೇ ಸ್ಥರದ ತುಳಿತಕ್ಕೊಳಗಾದ ಜನಗಳ ಪರವಾಗಿ ಸದಾ ನಿಲ್ಲುವ ಪಕ್ಷ ನಮ್ಮದು. ಅದೇ ಧೈಯವನ್ನು ಮುಂದಿಟ್ಟುಕೊಂಡು ನಾನು ಈ ಕ್ಷೇತ್ರದ ಜನರ ಧ್ವನಿಯಾಗಿ ವಿಧಾನಸೌಧ ಪ್ರವೇಶಿಸಬೇಕೆಂಬ ಬಯಕೆಯೊಂದಿಗೆ 2013 ಮತ್ತು 2018 ರಂತೆಯೇ ಈ ಬಾರಿಯು ಸಹ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಮತದಾರರು ನನ್ನ ಸೇವೆಯನ್ನು ನಾನು ನಿರೀಕ್ಷಿಸಿದ ಮಟ್ಟಕ್ಕೆ ಪುರಸ್ಕರಿಸಲಿಲ್ಲ ಎಂದೆನಿಸುತ್ತಿದೆ. ಫಲಿತಾಂಶಕ್ಕೆ ಕಾರಣ ಏನೇ ಇರಲಿ, ನಮ್ಮ ಪಕ್ಷ ಮತ್ತು ನನ್ನ ಜನಸೇವೆಯ ಹೋರಾಟಕ್ಕೆ ಯಾವುದೇ ಹಿಂಜರಿಕೆ ಅಥವಾ ವಿರಾಮ ಇರುವುದಿಲ್ಲ. ನಿಮ್ಮ ಸೇವೆಯಲ್ಲಿ ನಿಮ್ಮ ನಡುವೆಯೇ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಬಾಲಿ ನಿಮ್ಮ ಬೆಂಬಲವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ.

ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮತ್ತೆ ಆಯ್ಕೆಯಾಗಿರುವ ತಸ್ವೀರ್ ಸೇರ್ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವರು ಎಂದು ಆಶಿಸುತ್ತಾ ನನ್ನೆಲ್ಲ ಪ್ರೀತಿಯ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

~ಅಬ್ದುಲ್ ಮಜೀದ್‌,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago