ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಸರ್ಕಾರ ಸಾರ್ವಜನಿಕಗೊಳಿಸಲಿ ಮತ್ತು ಅದರ ಅಂಕಿಅಂಶಗಳ ಆಧಾರ ಮೇಲೆ ಬಜೆಟ್ ಅನುದಾನಗಳು ನಿಗಧಿಯಾಗಲಿ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಪತ್ರಿಕಾ ಪ್ರಕಟಣೆ

09-06-2023

ಬೆಂಗಳೂರು, 9 ಜೂನ್ 2023: ಸುಮಾರು 162 ಕೋಟಿ ವೆಚ್ಚದಲ್ಲಿ 84 ವರ್ಷಗಳ ನಂತರ 2015 ರಲ್ಲಿ ರಾಜ್ಯದಲ್ಲಿ ನಡೆಸಲಾದ ಹೆಚ್, ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಇಲ್ಲಿಯವರೆಗೂ ಗೌಪ್ಯವಾಗಿ ಇಡಲಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ವರದಿಯನ್ನು ಒಪ್ಪಿಕೊಳ್ಳುವುದಾಗಿ ಹೇಳಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ಸ್ವಾಗತಿಸುತ್ತದೆ. ಇದು ಕೇವಲ ಹೇಳಿಕೆಯಾಗಿ ಮಾತ್ರ ಉಳಿಯದೆ ವರದಿಯ ಅಂಕಿ ಅಂಶಗಳನ್ನು ಸರ್ಕಾರ ಸಾರ್ವಜನಿಕಗೊಳಿಸಬೇಕು ಮತ್ತು ಆ ಅಂಕಿ ಅಂಶಗಳ ಆಧಾರದ ಮೇಲೆ ಮುಂಬರುವ ಬಜೆಟ್ ನಲ್ಲಿ ಅನುದಾನಗಳನ್ನು ನಿಗದಿ ಮಾಡಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜಿದ್ ಮೈಸೂರು ಅವರು ತಮ್ಮ ಪತ್ರಿಕ ಪ್ರಕಟಣೆಯಲ್ಲಿ ಒತ್ತಾಯ ಮಾಡಿದ್ದಾರೆ.

ಜುಲೈ ತಿಂಗಳಿನಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಜಾತಿ ಗಣತಿ ವರದಿಯನ್ನು ಸರ್ಕಾರ ಮಂಡಿಸುವ ಮೂಲಕ ಅದರಲ್ಲಿನ ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸಬೇಕು. ಆ ಮೂಲಕ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಯಾವ ಸಮುದಾಯಗಳು ಯಾವ ಮಟ್ಟದಲ್ಲಿವೆ ಎನ್ನುವ ಸ್ಪಷ್ಟ ಚಿತ್ರಣ ಜನತೆಯ ಮುಂದೆ ಬರಲಿ, ಆ ನಂತರ ಮುಂದೆ ಸರ್ಕಾರಗಳು ರೂಪಿಸುವ ಎಲ್ಲ ಯೋಜನೆ ಮತ್ತು ನೀಡುವ ಅನುದಾನಗಳನ್ನು ಈ ವರದಿಯ ಆಧಾರದ ಮೇಲೆ ನೀಡುವ ಮೂಲಕ ಅವಶ್ಯಕತೆ ಇರುವ ಸಮುದಾಯಗಳಿಗೆ ನ್ಯಾಯ ಒದಗಿಸಲಿ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸರ್ಕಾರಗಳು ಜಾರಿಗೆ ತರುತ್ತಿರುವ ಯೋಜನೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿವೆಯೆ ಎಂದು ಪರಿಶೀಲಿಸಲು ಒಂದು ಮೇಲ್ಮನೆ ಮತ್ತು ಕೆಳಮನೆ ಸದಸ್ಯರನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಬೇಕು. ಅದರ ಮೂಲಕ ಮೂರು ತಿಂಗಳಿಗೊಮ್ಮೆ ಯೋಜನೆ, ಅನುದಾನಗಳ ಬಳಕೆಯ ಬಗ್ಗೆ ಪರಾಮರ್ಶೆ ನಡೆಸುವುದು ಸೂಕ್ತ ಎಂದು ಮಜೀದ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

admin

Recent Posts

Chalo Belagavi

Ambedkar Jatha-3 احتجاجی اجلاس | 15اگست Belagavi | 10:30 AM سورنا سودها مطالبات 2B ریزرویشن…

7 days ago

Chalo Belagavi Ambedkar Jatha-3

DEMAND'S MEET | 15th DECEMBER BELAGAVI 10:30 AM Suvarna Soudha DEMANDS Restore the 2B Reservation…

7 days ago

Chalo Belagavi

Ambedkar Jatha-3 Ehtijaji Ajlas BELAGAVI 10:30 AM Suvarna Soudha DEMANDS 2B Reservation ko dobara bahal…

7 days ago

ಸಾಮಾಜಿಕ ನಾಯಕ್ಕಾಗಿ

ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 3 📍 VENUE: Kudachi | Public Program SDPIKarnataka #AmbedkarJatha3 #chalobelagavi

1 week ago

Chalo Belagavi

Ambedkar Jatha-3 BJP ಮುಸ್ಲಿಮ್ ದ್ವೇಷದ ಭಾಗವಾಗಿ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಮತ್ತು ಮುಸ್ಲಿಮ್ ವಿರೋಧಿ ಮಸೂದೆಗಳನ್ನು ಜಾರಿಗೊಳಿಸುತ್ತದೆ. ಕಾಂಗ್ರೆಸ್ ಬಿಜೆಪಿ…

1 week ago

Chalo Belagavi Ambedkar Jatha-3

SDPI Karnataka SDPI ಹಲವು ಬೇಡಿಕೆಗಳೊಂದಿಗೆ ಕಿತ್ತೂರ ಚೆನ್ನಮ್ಮಳ ಮಣ್ಣಿನಿಂದ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾವನ್ನು ಆರಂಭಿಸಿ ಸುವರ್ಣ ಸೌಧಕ್ಕೆ…

1 week ago