ಹೊಸದಿಲ್ಲಿ. 7 ಜೂನ್ 2023: ದೇಶದ್ರೋಹದ ಕಾನೂನನ್ನು ಉಳಿಸಿಕೊಳ್ಳುವ ಕಾನೂನು ಆಯೋಗದ ಶಿಫಾರಸನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತೀವ್ರವಾಗಿ ವಿರೋಧಿಸಿದೆ.
ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ದೇಶದ್ರೋಹ ಕಾನೂನನ್ನು ಉಳಿಸಿಕೊಳ್ಳಲು ಕಾನೂನು ಆಯೋಗದ ಇತ್ತೀಚಿನ ಶಿಫಾರಸು ಆತಂಕಕಾರಿ ಎಂದಿದ್ದಾರೆ. ಆಯೋಗವು ತನ್ನ ಹಿಂದಿನ ವರದಿಯಲ್ಲಿ ದೇಶದ್ರೋಹ ಮತ್ತು ದ್ವೇಷ ಭಾಷಣದ ಬಗ್ಗೆ ವಿಸ್ತ್ರತವಾದ ವ್ಯಾಖ್ಯಾನವನ್ನು ಮಾಡಿದೆ. ಆ ಎರಡರ ನಡುವೆ ವ್ಯತ್ಯಾಸವಿದೆ. ಆದರೆ ಈಗ ಆಡಳಿತಾರೂಢ ಪಕ್ಷ ತನ್ನ ಜನವಿರೋಧಿನೀತಿಗಳ ವಿರುದ್ಧವಾದ ಏನೇ ಮಾಡಿದರೂ ಅಂದನ್ನು ದೇಶದ್ರೋಹ ಎಂದು ಹಣೆಪಟ್ಟಿ ಹಚ್ಚುತ್ತಿದೆ ಎಂದು ತುಂಬೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ಮಾನವ ಹಕ್ಕುಗಳ ಕಾರ್ಯಕರ್ತರು, ವಿರೋಧ ಪಕ್ಷಗಳ ನಾಯಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಯಾರೇ ತಮ್ಮ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿದರೆ ಅವರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಆರೋಪ ಹೊರಿಸುತ್ತಾರೆ”. ಯಾವುದೇ ಆಯೋಗದ ಶಿಫಾರಸುಗಳು ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಾಗರಿಕರಿಂದ ಕಸಿದುಕೊಳ್ಳಬಾರದು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. 153 ವರ್ಷಗಳ ಹಿಂದೆ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದ ದೇಶದ್ರೋಹದ ಕಾನೂನನ್ನು ಇಂದು ಸ್ವತಂತ್ರ ಭಾರತದ ನಾಗರಿಕರ ವಿರುದ್ಧ ಬಳಸಲಾಗುತ್ತಿದೆ. ಆಡಳಿತದ ವಿರುದ್ಧ ಮಾತನಾಡುವ ನಾಗರಿಕರನ್ನು ಸರ್ಕಾರ ದೇಶದ ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ ಎಂದು ತುಂಬೆ ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ಕಾನೂನು ಆಯೋಗವು ತನ್ನ ಹಕ್ಕನ್ನು ನ್ಯಾಯಯುತವಾಗಿ ಉಪಯೋಗಿಸಬೇಕು ಮತ್ತು ದೇಶದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಸಲಾದ ಕಾಯಿದೆಗಳನ್ನು ತಿರಸ್ಕರಿಸಬೇಕು ಎಂದು SDPI ನಾಯಕ ಒತ್ತಾಯಿಸಿದ್ದಾರೆ.
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ