ಪತ್ರಿಕಾ ಪ್ರಕಟಣೆ

ರಾಜ್ಯದಲ್ಲಿ ಕೋಮು ಹಿಂಸಾಚಾರ ತಡೆಗಟ್ಟಲು ಸೋನಿಯಾ ಗಾಂಧಿ ನೇತೃತ್ವದ ಸಮಿತಿ 2005 ರಲ್ಲಿ ಶಿಫಾರಸು ಮಾಡಿದ್ದ ಕರಡು ಮಸೂದೆಯನ್ನು ಕಾನೂನು ಮಾಡಿ: ಮುಖ್ಯಮಂತ್ರಿಗೆ ಎಸ್‌ಡಿಪಿಐ ಪತ್ರ.

ಬೆಂಗಳೂರು, 04 ಜೂನ್ 2023: ಮಂಗಳೂರಿಗೆ ಸೀಮಿತವಾಗಿ ಕೋಮುವಾದಿ ವಿರೋಧಿ ವಿಭಾಗ ಆರಂಭಿಸಿದ್ದೀರಿ ಆದರೆ ಅದು ಎಷ್ಟು ಪರಿಣಾಮಕಾರಿಯಾಗಿರಲಿದೆ ಎಂಬ ಬಗ್ಗೆ ಅನುಮಾನಗಳಿವೆ. ಹಾಗಾಗಿ ಅದಕ್ಕಾಗಿ ಪ್ರತ್ಯೇಕ ವಿಭಾಗ ರಚಿಸುವ ಬದಲು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದು ಕಾಯ್ದೆಯನ್ನೇ ಜಾರಿಗೆ ತಂದರೆ ಕೋಮುಗಲಭೆ ಮತ್ತು ಗುಂಪು ದಾಳಿ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುತ್ತದೆ ಎಂಬ ಸಲಹೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಎಸ್‌ಡಿಪಿಐ ಪತ್ರದ ಮೂಲಕ ಸಲಹೆ ನೀಡಿದೆ.

ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಸೋನಿಯಾ ಗಾಂಧಿಯವರ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ 2005 ಒಂದು ಕರಡು ಮಸೂದೆ (Prevention of communal and Targeted Violence) ಯನ್ನು ಶಿಫಾರಸು ಮಾಡಿತ್ತು. ಆ ಕರಡು ಮಸೂದೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ಅದನ್ನೇ ಈಗ ರಾಜ್ಯದಲ್ಲಿ ಕಾಯಿದ ಮಾಡುವುದರಿಂದ ಕೋಮುವಾದದ ವಿರುದ್ಧ ಬಲಿಷ್ಠ ಕಾನೂನೊಂದು ಜಾರಿಗೆ ತಂದಂತಾಗುತ್ತದೆ ಎಂದಿರುವ ಮಜೀದ್ ಅವರು, ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುತ್ತೇವೆ ಎಂದು 2013 ರ ನಿಮ್ಮ ಕಾಂಗ್ರೆಸ್ ಪಕ್ಷದ ಪುಣಾಳಿಕೆಯಲ್ಲಿ ಘೋಷಣೆ ಕೂಡಾ ಮಾಡಿದ್ದೀರಿ ಎಂಬುವುದನ್ನು ಪತ್ರದಲ್ಲಿ ನೆನಪಿಸಿದ್ದಾರೆ.

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

5 days ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

5 days ago