ಬೆಳಗಾವಿ, 14 ಜುಲೈ 2023: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಬಿಜೆಪಿ ಆಡಳಿತದಲ್ಲಿ ಕುಸಿದಿದ್ದ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸುವ ವಾಗ್ದಾನವೂ ಒಂದಾಗಿತ್ತು. ಅದಾದ ನಂತರ ಕಾಂಗ್ರೆಸ್ ಪಕ್ಷ ಬಹುಮತದಿಂದ ಆಯ್ಕೆಯಾಗಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತು. ಸರ್ಕಾರ ಅಸ್ತಿತ್ವಕ್ಕೆ ಬಂದು ಸುಮಾರು ಎರಡು ತಿಂಗಳು ಕಳೆಯುವುದರಲ್ಲಿದ್ದರೂ ಬಿಜೆಪಿ ಆಡಳಿತದ ಅವಧಿಯಲ್ಲಿ ಇದ್ದಂತಹ ಪರಿಸ್ಥಿತಿಯೇ ಈಗಲೂ ಇರುವುದು ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಜೈನಮುನಿ ಕಾಮಕುಮಾರನಂದಿ ಭೀಕರ ಹತ್ಯೆ ಪ್ರಕರಣ ಮತ್ತು ರಾಜ್ಯದ ಇತರೆಡೆ ನಡೆದಿರುವ ಅಪರಾಧ ಪ್ರಕರಣಗಳು ಸಾಬೀತುಪಡಿಸುತ್ತವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಡಿಪಿಐ) ಪಕ್ಷದ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು ಇಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಪ್ರಮುಖ ಗಂಭೀರ ಅಪರಾಧ ಪ್ರಕರಣಗಳನ್ನು ಗಮನಿಸುವುದಾದರೆ ಜೈನ ಮುನಿಯ ಕೊಲೆಯ ಜೊತೆಗೆ ಕೋಲಾರದಲ್ಲಿ ಕೀರ್ತಿ ಎಂಬ ಯುವತಿಯ ಮರ್ಯಾದೆಗೇಡು ಹತ್ಯೆ, ಮೈಸೂರಿನಲ್ಲಿ ವೇಣುಗೋಪಾಲ್ ಹತ್ಯೆ, ಬೆಂಗಳೂರಿನ ಜೋಡಿ ಕೊಲೆ ಹೀಗೆ ಸಾಲು ಸಾಲು ಹತ್ಯಾ ಪ್ರಕರಣಗಳು ನಡೆಯುತ್ತಲೇ ಇವೆ. ಇದರ ಜೊತೆಗೆ ಅನೈತಿಕ ಪೊಲೀಸ್ ಗಿರಿ, ದ್ವೇಷ ಭಾಷಣ ಪ್ರಕರಣಗಳೂ ನಿರಂತರವಾಗಿ ನಡೆಯುತ್ತಲೇ ಇವೆ. ಮುರುಡೇಶ್ವರ ಬೀಚ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ, ಬೆಂಗಳೂರಿನಲ್ಲಿ ಮುಸ್ಲಿಂ ನಿರ್ವಾಹಕರ ಟೋಪಿಯನ್ನು ಬಲವಂತವಾಗಿ ತೆಗೆಸಿದ್ದು ನೋಡಬಹುದು. ದ್ವೇಷ ಭಾಷಣಗಳಂತೂ ಎಗ್ಗಿಲ್ಲದೆ ನಡೆಯುತ್ತಲೇ ಇವೆ. ಹಾಗಾದರೆ ಕಾಂಗ್ರೆಸ್ ಬಂದ ಮೇಲೆ ಕಾನೂನು ಸುವ್ಯವಸ್ಥೆಯಲ್ಲಿ ಆದ ಬದಲಾವಣೆಯಾದರೂ ಏನು ಎಂದು ಅಪ್ಸರ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಮಾಡಿದರು. ಜೈನ ಮುನಿ ಕೊಲೆ ಪ್ರಕರಣದಲ್ಲಿ ಪೋಲಿಸರು ಆರೋಪಿಗಳನ್ನು ಆರೇ ಗಂಟೆಗಳಲ್ಲಿ ಬಂಧಿಸಿರುವುದು ಶ್ಲಾಘನೀಯ, ಆದರೆ ರಾಜ್ಯದ ಇತರೆಡೆ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪೋಲಿಸರು ಮತ್ತಷ್ಟು ಮುತುವರ್ಜಿ ವಹಿಸಬೇಕು. ಅದರ ಜೊತೆಗೆ ವಯಕ್ತಿಕ ವಿಚಾರಗಳು ಹಾಗೂ ಹಣಕಾಸು ವ್ಯವಹಾರಗಳ ಕಾರಣಕ್ಕೆ ನಡೆಯುವ ಕೊಲೆಗಳಿಗೆ ಬಿಜೆಪಿ ಕೋಮು ಬಣ್ಣ ಹಚ್ಚುವ ಕಾರ್ಯ ಮಾಡುತ್ತಿದೆ. ಬಿಜೆಪಿಯ ಈ ಅಪಾಯಕಾರಿ ರಾಜಕೀಯವನ್ನು ಹಿಮ್ಮೆಟ್ಟಿಸಲು ಪೋಲಿಸ್ ಇಲಾಖೆ ಬಹಳ ಗಂಭೀರವಾಗಿ ಕಾರ್ಯ ನಿರ್ವಹಿಸಬೇಕಿದೆ. ಈ ಸರ್ಕಾರದ ಮೇಲೆ ಜನ ಸಾಕಷ್ಟು ಭರವಸೆ ಇಟ್ಟು ದೊಡ್ಡ ಬಹುಮತವನ್ನೇ ನೀಡಿದ್ದಾರೆ. ಆದರೆ ಬೇರೆ ಎಲ್ಲ ವಿಚಾರಗಳಿಗಿಂತ ಮುಖ್ಯವಾಗಿ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಈ ಸರ್ಕಾರ ಜನರ ಭರವಸೆಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಗಂಭೀರವಾಗಬೇಕು ಮತ್ತು ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಂಡು ರಾಜ್ಯ ಕಾನೂನು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಅಗ್ರಹಿಸಿದರು.
ಅಭಿನಂದನಾ ರ್ಯಾಲಿ ಮತ್ತು ಸಮಾವೇಶ 21 ಜನವರಿ 2026 ರ್ಯಾಲಿ: ಸಂಜೆ 04:00 | ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಪುರಭವನದ…
SIR ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ - ಅಬ್ರಾರ್ 12.01.2026 ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಸೋಶಿಯಲ್…
ಈ ನಾಡು ಕಂಡ ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಕರ್ನಾಟಕ ಅಮೀರೆ ಶರೀಯತ್ ಮತ್ತು ಸಬಿವುಲ್ ರಷಾದ್ ಅರೇಬಿಕ್ ಕಾಲೇಜು, ನಾಗವಾರ…
The passing away of Ameer-e-Shariat of Karnataka, the respected religious and social leader Maulana Sageer…
امیر شریعت کرناٹک، معروف دینی و سماجی رہنما مولانا صغیر احمد صاحب کے بنگلورو میں…
Deeply saddened by the passing of Ameer-e-Shariat Maulana Sageer Ahmed Sahib Principal of Sabee-ul-Rashad Arabic…