ಮಣಿಪುರದಲ್ಲಿ ಕಳೆದ 2 ತಿಂಗಳಿನಿಂದ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿ, ಚರ್ಚ್, ಮನೆಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ಮತ್ತು ಮಣಿಪುರದಲ್ಲಿ ಶಾಂತಿ ಸ್ಥಾಪಿಸುವಂತೆ ಆಗ್ರಹಿಸಿ ಜುಲೈ 13ರಂದು ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಸಂತ ಫಿಲೋಮೀನಾ ಚರ್ಚ್ ಸರ್ಕಲ್ ನಲ್ಲಿ ಎಸ್‌ಡಿಪಿಐ ವತಿಯಿಂದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮುಖ್ಯ ಭಾಷಣಕಾರರಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸ್ ಫ್ರಾಂಕೋ, ಕರ್ನಾಟಕ ಕ್ರೈಸ್ತ ಸಂಘಟನೆ ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟು ಮಾತನಾಡಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಮೌಲನ ನೂರುದ್ದೀನ್, ಅಮ್ಮದ್ ಖಾನ್, ಜಿಲ್ಲಾಧ್ಯಕ್ಷ ರಫತ್ ಖಾನ್,ಜಿಲ್ಲಾ ಉಪಾಧ್ಯಕ್ಷ ಎಸ್ ಸ್ವಾಮಿ, ಎಸ್‌ಡಿಟಿಯು ಜಿಲ್ಲಾಧ್ಯಕ್ಷ ಅಲ್ತಾಫ್, ಕ್ರೈಸ್ತ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು, ವಿಮೆನ್ ಇಂಡಿಯಾ ಮೂವೆಂಟ್ ನ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯ ಅಯಾಜ್ ಪಾಶ ಪಂಡು ಮತ್ತಿತರರು ಉಪಸ್ಥಿತರಿದ್ದರು.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI, ಕರ್ನಾಟಕ WeStandWithPriyankKharge
Remembering Dr. A.P.J. Abdul Kalam, former President of India and the Missile Man of India,…
ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಮೌಲವಿ ಆಮಿರ್ ಖಾನ್ ಮುತ್ತಾಕಿ ಅವರ ಭಾರತ ಭೇಟಿಯು ಒಂದು ಉತ್ತಮ ಬೆಳವಣಿಗೆ.…
~ಮೊಹಮ್ಮದ್ ಇಲ್ಯಾಸ್ ತುಂಬೆ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಗಾಜಾದಲ್ಲಿ ಯುದ್ಧ ವಿರಾಮದ ಪ್ರಾರಂಭಿಕ ಹಂತಗಳನ್ನು ವಿಶ್ವವು ಕಣ್ತುಂಬಿಕೊಳ್ಳುತ್ತಿರುವ ಈ ಮಹತ್ವದ ಮುನ್ನಡೆಯ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತೂರ್ವಕ ಕೃತಜ್ಞತೆಯನ್ನು…
~ಅಬ್ದುಲ್ ಮಜೀದ್, ರಾಜ್ಯ ಅಧ್ಯಕ್ಷರು, SDPI, ಕರ್ನಾಟಕhttps://www.facebook.com/share/p/1DURz4sWBM/