ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆಯ ಕುರಿತು ಅಪಪ್ರಚಾರಗಳಿಗೆ ಕಿವಿಗೊಡ ಬೇಡಿ : SDPI

ಉಳ್ಳಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ SDPI ಅಭ್ಯರ್ಥಿ ಇಸ್ಮಾಯಿಲ್. ಟಿ ಅವರು ಗೆಲುವು ಸಾಧಿಸಿದ ಕುರಿತು ನಡೆಯುತ್ತಿರುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು SDPI ಮಂಗಳೂರು(ಉಳ್ಳಾಲ) ವಿಧಾನ ಸಭಾ ಕ್ಷೇತ್ರಾಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಅವರು ಕೇಳಿಕೊಂಡಿದ್ದಾರೆ. ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 24 ಮಂದಿ ಸದಸ್ಯ ಬಲದಲ್ಲಿ 13 BJP, SDPI 10 ಮತ್ತು ಕಾಂಗ್ರೆಸ್ ನಲ್ಲಿ ಒಬ್ಬನೇ ಒಬ್ಬ ಸದಸ್ಯರಿದ್ದಾರೆ. ಇದರಲ್ಲಿ ಚುನಾವಣೆ ವಿಚಾರ ಬಂದಾಗ SDPI ಯ ಒಬ್ಬರು ಸದಸ್ಯೆ ಕೌಟುಂಬಿಕವಾಗಿ ಉಮ್ರಾ ಹೋದಕಾರಣ SDPI ಸದಸ್ಯರ ಬಲ ಒಂಬತ್ತು ಇತ್ತು. ಇಲ್ಲಿ ಬಿಜೆಪಿ ಸ್ಪಷ್ಟ ಬಹುಮತವಿದ್ದ ಕಾರಣ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗುವ ಚರ್ಚೆಗಳು ನಡೆದಾಗ ಯಾವುದೇ ಕಾರಣಕ್ಕೂ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗ ಕೂಡದು ಎಂಬ ತೀರ್ಮಾನಕ್ಕೆ ಬಂದ SDPI ಚುನಾವಣೆ ಪ್ರಕ್ರಿಯೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನ ಮಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯೊಡನೆ ಬೆಂಬಲವನ್ನು ಕೇಳಿತು. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಯಾವುದೇ ಹೊಂದಾಣಿಕೆಗೆ ಮುಂದಾಗದೆ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಪರೋಕ್ಷವಾಗಿ ಬಿಜೆಪಿಗೆ ಅವಕಾಶ ಮಾಡಿ ಕೊಟ್ಟಿತು. ಈ ಸಂದರ್ಭದಲ್ಲಿ SDPI ಚುನಾವಣೆ ಕಣದಲ್ಲಿದ್ದು ಕಾಂಗ್ರೆಸ್ ಬಿಟ್ಟು ಇತರ ಯಾವುದೇ ಪಕ್ಷದ ನಾಯಕರೊಡನೆ ಆಗಲಿ ಅಥವಾ ಯಾವೊಬ್ಬ ಪ್ರಸ್ತುತವಾಗಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಒಬ್ಬರಲ್ಲಿಯೂ ಯಾವುದೇ ಒಪ್ಪಂದವಾಗಲಿ, ಮಾತುಕತೆಯಾಗಲಿ, ಹೊಂದಾಣಿಕೆಯಾಗಲಿ ನಡೆಸಲಿಲ್ಲ. ಆದರೆ ಚುನಾವಣೆ ಪ್ರಕ್ರಿಯೆ ನಡೆಯುವಾಗ ಬಿಜೆಪಿಯ ಉಚ್ಚಾಟಿತ ಸದಸ್ಯರಿಬ್ಬರು SDPI ಗೆ ಮತ ಚಲಾಯಿಸಿದ ಕಾರಣ ಬಿಜೆಪಿ ಮತ್ತು ಕಾಂಗ್ರೆಸ್ ಹಾಕಿದ ಲೆಕ್ಕಾಚಾರ ತಲೆ ಕೆಳಗಾಗಿ SDPI 11 ಮತ ಪಡೆಯಿತು, ಬಿಜೆಪಿಯು 11 ಮತ ಪಡೆದು ಸಮಬಲಗೊಂಡಿತು. ಒಂದು ವೇಳೆ ಕಾಂಗ್ರೆಸ್ BJP ಯನ್ನು ಸೋಲಿಸುವ ಭಾಗವಾಗಿ SDPI ಗೆ ಬೆಂಬಲ ನೀಡಿ ಮತ ಚಲಾಯಿಸಿದ್ದಿದ್ದರೆ, SDPI ಗೆಲುವು ಸಾಧಿಸುತ್ತಿತ್ತು. ಆದರೆ ಸಮಬಲ ಗೊಂಡಾಗ ಚುನಾವಣಾ ಅಧಿಕಾರಿಗಳು ಚೀಟಿ ಎತ್ತುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲು ತೀರ್ಮಾನ ಮಾಡಿದರು. ಚೀಟಿ ಎತ್ತಿದಾಗ ಅದೃಷ್ಟ SDPI ಪಕ್ಷದ ಅಭ್ಯರ್ಥಿ ಇಸ್ಮಾಯಿಲ್. ಟಿ ಯವರಿಗೆ ಒಲಿದು ಬಂದು SDPI ಅಧ್ಯಕ್ಷ ಸ್ಥಾನ ಗಿಟ್ಟಿಸಿ ಗೊಂಡಿದೆ. ಇದಾಗಿದೆ ತಲಪಾಡಿ ಚುನಾವಣೆಯಲ್ಲಿ ನಡೆದ ನೈಜತೆ. ಇದೀಗ ಕೆಲವು ಪಕ್ಷಗಳು, ಕೆಲವು ಮಾಧ್ಯಮಗಳು ಸತ್ಯವನ್ನು ಜನರಿಗೆ ತಲುಪಿಸುವ ಬದಲು ತಪ್ಪು ಸಂದೇಶಗಳನ್ನು ರವಾನಿಸಿದೆ.
ಇನ್ನು ಉಪಾಧ್ಯಕ್ಷ ಸ್ಥಾನವು ಪ್ರವರ್ಗ ‘ಬಿ ಮಹಿಳೆ’ ಗೆ ಮೀಸಲಾತಿ ಬಂದ ಕಾರಣ SDPI ಯಲ್ಲಿ ಪ್ರವರ್ಗ ಬಿ ಮಹಿಳೆ ಸದಸ್ಯೆ ಇಲ್ಲದ ಕಾರಣ BJP ಯ ಸದಸ್ಯೆ ಈ ಮೊದಲೇ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಹಾಗಾಗಿ SDPI ಯಾವುದೇ ಸಂದರ್ಭದಲ್ಲಿಯೂ BJP ಯೊಡನೆ ಮಾತುಕತೆ, ಒಳ ಒಪ್ಪಂದ ಮಾಡಿದ ಇತಿಹಾಸವೇ ಇಲ್ಲಾ ಇಂತಹ ಸುಳ್ಳು ಪ್ರಚಾರಗಳಿಗೆ ಯಾರೂ ಕಿವಿಗೊಡದೆ ಮುಂದೆಯೂ SDPI ಜೊತೆಗಿರಬೇಕೆಂದು ವಿನಂತಿಸುತ್ತಿದ್ದೇನೆ.

ಇರ್ಷಾದ್ ಅಜ್ಜಿನಡ್ಕ
ಅಧ್ಯಕ್ಷರು
SDPI ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ

SDPI #DakshinaKannada #GramPanchayatElection #SDPIKarnataka

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago