Categories: featureNewsPolitics

‘ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ’

15 ಆಗಸ್ಟ್ 2023

77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಸಾಕಷ್ಟು ತ್ಯಾಗ ಬಲಿದಾನಗಳ ನಂತರ ದೊರೆತಿರುವ ನಮ್ಮ ಸ್ವಾತಂತ್ರ್ಯವನ್ನು ಜೋಪಾನ ಮಾಡಿಕೊಳ್ಳುವುದು ನಮ್ಮೆಲ್ಲರ ಮೊದಲ ಆಧ್ಯತೆಯಾಗಬೇಕು. ಫ್ಯಾಶಿಸ್ಟರ ದ್ವೇಷದ ಜ್ವಾಲೆಗೆ ಇತ್ತೀಚೆಗೆ ಮಣಿಪುರ, ಹರಿಯಾಣ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ವಿಕ್ಷಿಪ್ತ ಪರಿಸ್ಥಿತಿ ತಲೆ ದೋರಿದೆ. ಅವರು ಹರಡಿರುವ ದ್ವೇಷದ ಹಿಂಸಾತ್ಮಕ ವಾತಾವರಣವನ್ನು ಗಮಿನಿಸಿದಾಗ ನಮ್ಮ ಆದ್ಯತೆಗಳು ಹಾದಿ ತಪ್ಪಿರುವ ಸೂಚನೆಗಳು ದಟ್ಟವಾಗಿ ಕಾಣ ಸಿಗುತ್ತಿವೆ. ನಾವೀಗ ಎಚ್ಚೆತ್ತುಕೊಳ್ಳಲೇಬೇಕಾದ ಅನಿವಾರ್ಯ ಸನ್ನಿವೇಶದಲ್ಲಿದ್ದೇವೆ. ಇಲ್ಲವಾದರೆ ಎಲ್ಲವನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ. ಫ್ಯಾಶಿಸ್ಟರ ಸಂಕೋಲೆಯಿಂದ ನಮ್ಮ ಅಮೂಲ್ಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳೋಣ, ಆ ಮೂಲಕ ದೇಶವನ್ನು ಉಳಿಸಿಕೊಳ್ಳೋಣ. ಸ್ವಾತಂತ್ರ್ಯ ದಿನಾಚರಣೆಯಂದು ಇದರ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕಿದೆ ಎಂದು ನೆನಪಿಸುತ್ತ ದೇಶದ ನನ್ನೆಲ್ಲ ಸಹಪ್ರಜೆಗಳಿಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

SDPIKarnataka #HappyIndependenceDay2023 #IndependenceDay #77IndependenceDay

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago