ಬೆಂಗಳೂರು, 14 ಅಕ್ಟೋಬರ್ 2023: ಪ್ಯಾಲೇಸ್ತೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಇಸ್ರೇಲ್ ಕಳೆದ 70 ವರ್ಷಗಳಿಂದ ಪ್ಯಾಲೇಸ್ತೀನಿಯರ ಶೋಷಣೆಯಲ್ಲಿ ತೊಡಗಿದೆ. ಈಗ ಅದು ಪ್ಯಾಲೇಸ್ತೀನಿಯರನ್ನು ಶಾಶ್ವತವಾಗಿ ಇಲ್ಲವಾಗಿಸುವ ಉದ್ದೇಶದಿಂದ ಬರ್ಬರ ನರಮೇಧದಲ್ಲಿ ತೊಡಗಿದೆ. ಇದಕ್ಕೆ ಜಿಯೋನಿಸ್ಟ್ ಇಸ್ರೇಲ್ ಈಗ ನಡೆಯುತ್ತಿರುವ ಸಂಘರ್ಷದಲ್ಲಿ ವೈಟ್ ಪಾಸ್ಫರ್ ರಾಸಾಯನಿಕ ಅಸ್ತ್ರ ಬಳಸುತ್ತಿರುವುದು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಸುಮಾರು 800 ಮಂದಿಯನ್ನು ಕೊಂದಿರುವುದು ಪುಷ್ಟಿ ನೀಡುತ್ತವೆ. ಈ ಕ್ರೌರ್ಯದ ವಿರುದ್ಧ ಭಾರತ ಸೇರಿದಂತೆ ಇಡೀ ವಿಶ್ವ ನಿಲ್ಲಬೇಕಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರನಿಂದ ಶೋಷಣೆಗೆ ಒಳಗಾಗಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಾ ಅಮೆರಿಕ ಜೊತೆಗೂಡಿ ಕುತಂತ್ರದಿಂದ ಪ್ಯಾಲೆಸ್ತೀನಿಯರ ಭೂಮಿಯನ್ನು ಇಸ್ರೇಲ್ ಕಸಿದುಕೊಂಡಿತು. ಇಂದು ಪ್ಯಾಲೇಸ್ತೀನಿಯರು ತಮ್ಮದೇ ನೆಲದಲ್ಲಿ ನಿರ್ಗತಿಕರಾಗಿ ಅತಿಕ್ರಮಣಕಾರರ ವಿರುದ್ಧ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. 1948 ರಿಂದ ಸುಮಾರು ಏಳು ದಶಕಗಳಿಂದ ಇಸ್ರೇಲಿನ ಅತಿಕ್ರಮಣ, ದೌರ್ಜನ್ಯ, ಹಿಂಸಾಚಾರದ ವಿರುದ್ಧ ತಮ್ಮ ಜೀವಗಳನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಪ್ಯಾಲೆಸ್ತೀನಿಯರ ಸ್ವಾತಂತ್ರ ಹೋರಾಟವನ್ನು ಎಸ್‌ಡಿಪಿಐ ಪಕ್ಷ ಗೌರವಿಸುತ್ತದೆ ಎಂದು ಎಸ್‌ಡಿಪಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಟ್ಲರ ಶೋಷಣೆ ಮತ್ತು ಹತ್ಯಾಕಾಂಡಗಳಿಂದ ತತ್ತರಿಸಿಹೋಗಿ ದಿಕ್ಕು ತೋಚದಂತಾಗಿದ್ದ ಜ್ಯೂಗಳಿಗೆ ಮಾನವೀಯತೆಯ ಆಧಾರದ ಮೇಲೆ ಪುನರ್ವಸತಿ ಕಲ್ಪಸಿಕೊಡುವ ಮನಸ್ಸು ಮಾಡಿದ್ದು ಪ್ಯಾಲೆಸ್ತೀನಿಯರು ಮಾತ್ರ. ಉಳಿದಂತೆ ಜಗತ್ತಿನ ಬೇರೆ ಯಾವ ದೇಶವೂ ಅವರ ನೆರವಿಗೆ ಅಂದು ನಿಂತಿರಲಿಲ್ಲ. ಆದರೆ ಇಸ್ರೇಲಿಗರು ಆಶ್ರಯ ಕೊಟ್ಟವರಿಗೆ ದ್ರೋಹ ಬಗೆದು ಕೆಲವೇ ವರ್ಷಗಳಲ್ಲಿ ಪ್ಯಾಲೆಸೀನಿಯರಿಂದ ಅವರ ದೇಶವನ್ನೇ ಕಸಿದುಕೊಂಡರು. ಕೊನೆಗೆ ಅವರಿಗೆ ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಎಂಬ ಎರಡು ತುಂಡು ಭೂಮಿ, ಅದೂ ಒಂದರಿಂದ ಒಂದು ನೂರಾರು ಕಿಲೋ ಮೀಟರ್ ದೂರ, ನಡುವೆ ಇಸ್ರೇಲ್ ಪ್ರದೇಶ ಇರುವಂತೆ ನೋಡಿಕೊಂಡು ಪ್ಯಾಲೆಸ್ತೀನಿಗರಿಗೆ ನೀಡಿದರು. ಇಂದು ಗಾಝಾ ಪಟ್ಟಿ ಜಗತ್ತಿನ ಅತಿ ಹೆಚ್ಚು ಜನನಿಭಿಡ ಪ್ರದೇಶಗಳಲ್ಲಿ ಒಂದಾಗಿದ್ದು, ಒಂದು ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಸುಮಾರು 5500 ಜನ ಅಲ್ಲಿ ವಾಸ ಮಾಡಬೇಕಾದಷ್ಟು ಇಕ್ಕಟ್ಟಿನ ಪ್ರದೇಶವನ್ನು ಅವರ ಪಾಲಿಗೆ ನೀಡಲಾಗಿದೆ. ಇದು ಮನುಕುಲದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದ್ರೋಹ ಎಂದು ಎಸ್‌ಡಿಪಿಐ ತಿಳಿಸಿದೆ.
ಮೊದಲೇ ನಲುಗಿಹೋಗಿರುವ ಪ್ಯಾಲೇಸ್ತೀನಿಯರ ವಿರುದ್ಧ ಜಿಯೋನಿಸ್ಟ್ ಇಸ್ರೇಲ್ ಈಗ ಅತಿದೊಡ್ಡ ದಾಳಿ ಮಾಡುತ್ತಿದೆ. ಅಲ್ಲಿನ ಜನರಿಗೆ ನೀರು, ಆಹಾರ, ವಿದ್ಯುತ್, ಅನಿಲ ಪೂರೈಕೆ ಸ್ಥಗಿತಗೊಳಿಸಿ ನರಳಿಸಿ ಕೊಲ್ಲಲಾಗುತ್ತಿದೆ. ಇದನ್ನು ಜಗತ್ತು ತಡೆಯದೇ ಹೋದರೆ ಇದು ಜಗತ್ತಿನ ಅತಿ ದೊಡ್ಡ ಸೋಲಾಗಲಿದೆ. ಭಾರತದಂತಹ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಇಂತಹ ನರಮೇಧವನ್ನು ಇಲ್ಲಿ ಸರ್ಕಾರ ನಡೆಸುತ್ತಿರುವ ಪಕ್ಷದ ಮುಸ್ಲಿಂ ವಿರೋಧಿ ಮನಸ್ಥಿತಿಯ ಕಾರಣಕ್ಕೆ ಮೂಕಪ್ರೇಕ್ಷಕನಂತೆ ಕುಳಿತಿದ್ದರೆ ಇತಿಹಾಸ ಮೋದಿ ಸರ್ಕಾರವನ್ನು ಎಂದೂ ಕ್ಷಮಿಸುವುದಿಲ್ಲ. 1947 ರಿಂದ ಇಲ್ಲಿಯವರೆಗೆ, ನೆಹರೂ ಕಾಲದಿಂದ ವಾಜಪೇಯಿ ಅವರಾಧಿಯಾಗಿ ಮನಮೋಹನ್ ಸಿಂಗ್ ಅವರ ವರೆಗೆ ಭಾರತ ಪ್ಯಾಲೇಸ್ತೀನಿಯರ ಹಕ್ಕುಗಳ ಪರ ನಿಂತಿದೆ. ಈ ನೀತಿಯನ್ನು ಬಿಜೆಪಿ ತನ್ನ ವಯಕ್ತಿಕ ದ್ವೇಷದ ಕಾರಣಕ್ಕೆ ಬದಲಾಯಿಸಲು ಹೊರಟಿರುವುದು ದುರಂತ. ಮಾನವೀಯತೆಗೆ ಮಾಡುವ ದ್ರೋಹವಾಗುತ್ತದೆ ಎಂದು ಎಸ್‌ಡಿಪಿಐ ಅಭಿಪ್ರಾಯಪಟ್ಟಿದೆ.
ಪ್ಯಾಲೇಸ್ತೀನಿಯರ ಈ ನರಮೇಧವನ್ನು ತಡೆಯಲು ಭಾರತ ಸೇರಿದಂತೆ ಇಡೀ ಜಗತ್ತು ಜಿಯೋನಿಸ್ಟ್ ಇಸ್ರೇಲಿಗರ ಈ ಆಕ್ರಮಣದ ವಿರುದ್ಧ ನಿಲ್ಲಬೇಕು ಎಂದು ನಾವು ಈ ಮೂಲಕ ಭಾರತ ಸರ್ಕಾರ ಹಾಗೂ ಜಗತ್ತಿನ ಎಲ್ಲ ದೇಶಗಳಲ್ಲಿ ವಿನಂತಿಸುತ್ತೇವೆ ಎಂದು ಎಸ್‌ಡಿಪಿಐ ತನ್ನ ಪ್ರಕಟಣೆಯಲ್ಲಿ ಆಗ್ರಹಿಸಿದೆ.
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…