Categories: featureNewsPolitics

SDPI ರಾಜ್ಯ ಕಾರ್ಯಕಾರಿಣಿ ಸಭೆ 16.11.2023 ರಂದು ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ದೇಣಿಗೆ ಸಂಗ್ರಹದ ಅವಲೋಕನ ನಡೆಯಿತು. ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

  1. ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಲು ಮತ್ತು ಮುಸ್ಲಿಮರ 2B ಮೀಸಲಾತಿ ಮರುಸ್ಥಾಪನೆ ಮತ್ತು ಶೇಕಡ 8 ಕ್ಕೆ ಏರಿಸಲು ಒತ್ತಾಯ.

ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿರುವ ಮುಸ್ಲಿಮರ 2B ಮೀಸಲಾತಿ ಮರುಸ್ಥಾಪಿಸನೆ ಮಾಡುವಂತೆ ಮತ್ತು ಮೀಸಲಾತಿ ಪ್ರಮಾಣವನ್ನು ಶೇಕಡ 8 ಕ್ಕೆ ಏರಿಸಲು ಹಾಗೂ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಲು ಮುಂದಿನ ಚಳಿಗಾಲ ಅಧಿವೇಶನದಲ್ಲಿ ಒತ್ತಾಯ ಪಡಿಸಬೇಕು ಎಂದು ಆಗ್ರಹಿಸಲು ಪಕ್ಷದ ವತಿಯಿಂದ ರಾಜ್ಯದ ಎಲ್ಲಾ ಶಾಸಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು.

  1. ನೂತನ ರಾಜ್ಯ ಕಾರ್ಯದರ್ಶಿಗಳ ನೇಮಕ.

ಅಬ್ದುಲ್ ರಹಿಮ್ ಪಟೇಲ್ ಗುಲ್ಬರ್ಗ ಮತ್ತು ಮುಜಾಹೀದ್ ಪಾಷಾ ಬೆಂಗಳೂರು ಅವರನ್ನು ನೂತನವಾಗಿ ರಾಜ್ಯ ಕಾರ್ಯದರ್ಶಿಗಳಾಗಿ ನೇಮಕ ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

  1. ಉಡುಪಿಯಲ್ಲಿ ನಡೆದ ತಾಯಿ ಮತ್ತು ಮೂರು ಮಕ್ಕಳ ಕೊಲೆಗೆ ನ್ಯಾಯ ದೊರೆಯಬೇಕು.

ಉಡುಪಿಯಲ್ಲಿ ಕ್ರೂರಿ ಪ್ರವೀಣ್ ಚೌಗಲೆ ಕೈಯ್ಯಲ್ಲಿ ಬರ್ಬರವಾಗಿ ಕೊಲೆಯಾದ ಹಸೀನಾ ಮತ್ತು ಆಕೆಯ ಮೂರು ಮಕ್ಕಳ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

11 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

11 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

11 months ago