ಮುಂಬರುವ ತಿಂಗಳುಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಖಂಡಿತವಾಗಿಯೂ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ (MoS) ಅಜಯ್ ಮಿಶ್ರಾ ಟೆನಿ ಅವರ ಹೇಳಿದ್ಧಾರೆ. ರಾಜ್ಯಸಭೆಯ ಶಾಸಕಾಂಗ ಸಮಿತಿ ಇದನ್ನು ನಿಗದಿಪಡಿಸಿದೆ. ನಿಯಮಗಳನ್ನು ರೂಪಿಸಲು 2024 ರ ಮಾರ್ಚ್ 30ರ ವರೆಗಿನ ಗಡುವು ನೀಡಿದೆ. 2024ರ ಚುನಾವಣೆ ಗೆಲ್ಲಲು ಬಿಜೆಪಿಯ ಟ್ರಂಪ್ ಕಾರ್ಡ್ ಕೋಮು ಧ್ರುವೀಕರಣ ಮತ್ತು ವಿಭಜಕ ರಾಜಕೀಯವಾಗಿದೆ. ಆದ್ದರಿಂದಲೇ ಮುಂಬರುವ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಅವರು CAA ಅನ್ನು ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇದು ಖಂಡಿತವಾಗಿಯೂ ಈಗಾಗಲೇ ಕೋಮು ಆಧಾರದ ಮೇಲೆ ಆಳವಾಗಿ ವಿಭಜನೆಯಾಗಿರುವ ಸಮಾಜವನ್ನು ಮತ್ತಷ್ಟು ವಿಭಜಿಸಲು ಕಾರಣವಾಗಲಿದೆ. ಇದು ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡಲಿದೆ ಎಂದು ಬಿಜೆಪಿ ನಿರೀಕ್ಷಿಸುತ್ತಿದೆ. ದೇಶದ ಬಹುಸಂಖ್ಯಾ ಸಮುದಾಯದಿಂದ ನಿರ್ದಿಷ್ಟ ಸಮುದಾಯವನ್ನು ದೂರವಿಡಲು ಸಿಎಎ ಜಾರಿಗೊಳಿಸಲಾಗಿದೆ. ಇದರಲ್ಲಿ ನೆರೆಯ ರಾಷ್ಟ್ರಗಳ ಆರು ಸಮುದಾಯಗಳಿಗೆ ಪೌರತ್ವವನ್ನು ನೀಡಲು ಪ್ರಸ್ತಾಪಿಸಲಾಗಿದೆ. ಆದರೆ ಮುಸ್ಲಿಂ ಸಮುದಾಯವನ್ನು ಮಾತ್ರ ಹೊರಗಿಡಲಾಗಿದೆ.
ಭಾರತದ ಸಂವಿಧಾನ ಜನರನ್ನು ಅವರ ಧರ್ಮ ಅಥವಾ ಆಚರಣೆಗಳ ಆಧಾರದ ಮೇಲೆ ಪ್ರತ್ಯೇಕಿಸುವುದಿಲ್ಲ. ಹಾಗಾಗಿ ಸಿಎಎ ಸಂವಿಧಾನ ವಿರೋಧಿಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಇಂತಹ ವಿಭಜಕ ಪ್ರಸ್ತಾಪವನ್ನು ಮುಂದಿಡಲಾಗಿದೆ. ಇದು ನಿಸ್ಸಂದೇಹವಾಗಿ ಸಮಾಜದಲ್ಲಿ ಕೋಮು ಧ್ರುವೀಕರಣ ಮತ್ತು ದ್ವೇಷದ ವಾತಾವರಣಕ್ಕೆ ಕಾರಣವಾಗಲಿದೆ. 2019 ರಲ್ಲಿ ಸಂಸತ್ತಿನಲ್ಲಿ ಈ ಕಾನೂನನ್ನು ಜಾರಿಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ವಯಸ್ಸು, ಲಿಂಗ, ಧರ್ಮ, ಜಾತಿ ಅಥವಾ ಪ್ರದೇಶವನ್ನು ಮೀರಿ ಜನರಿಂದ ರಾಷ್ಟ್ರವ್ಯಾಪಿ ಆಂದೋಲನಗಳು ಮತ್ತು ಬಲವಾದ ಪ್ರತಿಭಟನೆಗಳು ನಡೆದಿದ್ದವು. ಇದರಲ್ಲಿ ದಿನದಿಂದ ದಿನಕ್ಕೆ ಜನರ ಭಾಗವಹಿಸುವಿಕೆ ಏರುತ್ತಲೇ ಹೋಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ ಘೋಷಣೆಯವರೆಗೂ ಇದು ಮುಂದುವರಿದಿತ್ತು. ಆದರೆ ಈ ಲಾಕ್ಡೌನ್ ನೆಪ ಹೇಳಿ ಅದನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರ ಒತ್ತಾಯಿಸಿತ್ತು. ಈ ಮತ್ತ್ತೆ ಸಿಎಎ ಗೆ ಮರುಜೀವ ನೀಡುವ ಯಾವುದೇ ಪ್ರಯತ್ನ ಅತ್ಯಂತ ಆಕ್ಷೇಪಾರ್ಹ ಮತ್ತು ಇದನ್ನು ದೇಶದ ಎಲ್ಲಾ ಜಾತ್ಯತೀತ, ಪ್ರಜಾಪ್ರಭುತ್ವ ಪಕ್ಷಗಳು ವಿರೋಧಿಸಬೇಕು ಮತ್ತು ಹಿಮ್ಮೆಟ್ಟಿಸಬೇಕು.
ದೇಶದಲ್ಲಿ ಸಿಎಎ ಜಾರಿಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಎಸ್ಡಿಪಿಐ ಬಲವಾಗಿ ವಿರೋಧಿಸುತ್ತದೆ ಮತ್ತು ಸಿಎಎ ಹಿಂಪಡೆಯುವವರೆಗೆ ಅದರ ವಿರುದ್ಧ ಜನರ ಪ್ರತಿಭಟನೆಗಳು ಮತ್ತು ಆಂದೋಲನಗಳನ್ನು ಪಕ್ಷವು ಮುನ್ನಡೆಸುತ್ತದೆ ಎಂದು ಪ್ರತಿಜ್ಞೆ ಮಾಡುತ್ತದೆ.
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…