ಜನಸಂಖ್ಯಾ ಅನುಪಾತದ ಆಧಾರದಲ್ಲಿ ಪ್ರಾತಿನಿಧ್ಯ ನೀಡುವ ತತ್ವವನ್ನು ಅನುಸರಿಸಲು ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ತುರ್ತಾಗಿ ಒಮ್ಮತಕ್ಕೆ ಬರಬೇಕು ಎಂದು SDPI ಬಲವಾಗಿ ಒತ್ತಾಯಿಸುತ್ತದೆ. SDPI, ರಚನೆಯಾದಾಗಿನಿಂದಲೂ ಭಾರತದಲ್ಲಿ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆ ಅನಿವಾರ್ಯವಾಗಿದೆ ಎಂದು ಪದೇ ಪದೇ ಅಭಿಪ್ರಾಯಪಡುತ್ತಲೇ ಬಂದಿದೆ. ನ್ಯಾಯಯುತ ಮತ್ತು ಸಮಾನ ಹಕ್ಕುಗಳ ಜಾರಿಯನ್ನು ಸಾಧಿಸಲು ಮತ್ತು ಜನ್ಮದ ಆಧಾರದ ಮೇಲೆ ಜನರ ಜೀವನದ ಪ್ರತಿ ಹಂತದಲ್ಲೂ ಅವರ ಸಾಮಾಜಿಕ ಸ್ಥಾನಮಾನ ಹಾಗೂ ಹಕ್ಕುಗಳನ್ನು ನಿರ್ಧರಿಸುವ ಭಾರತದ ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಂದು ಪ್ರಜೆಯ ನ್ಯಾಯಯುತ ಹಾಗೂ ಸಮಾನತೆಯ ಹಕ್ಕುಗಳನ್ನು ಮತ್ತು ಅವರ ನ್ಯಾಯಯುತ ಪಾಲನ್ನು ಒದಗಿಸಿಕೊಡುವುದನ್ನು ಖಚಿತಪಡಿಸಿಕೊಳ್ಳಲು ಅನುಪಾತದ ಆಧಾರದ ಪ್ರಾತಿನಿಧ್ಯ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು SDPI ಪ್ರಾರಂಭ ದಿಂದಲೇ ನಿರಂತರ ಆಗ್ರಹಿಸುತ್ತ ಬಂದಿದೆ. ಸಮಾಜದಲ್ಲಿ ಸಾಮಾಜಿಕವಾಗಿ ದುರ್ಬಲರಾಗಿರುವ ಅಥವಾ ರಾಜಕೀಯವಾಗಿ ಅಸಂಘಟಿತ ವರ್ಗಗಳ ಕೊರತೆಗಳು, ತಾರತಮ್ಯ ಮತ್ತು ಶೋಷಣೆಯನ್ನು ಗುರುತಿಸಲು, ಸಾಮಾಜಿಕ ಪಂಗಡಗಳು, ಜಾತಿ ಮತ್ತು ಸಮುದಾಯ ಅನಾದಿ ಕಾಲದಿಂದಲೂ ಗುರುತಿಸಬಹುದಾದ ಏಕೈಕ ಮಾರ್ಗ ಜನಸಂಖ್ಯಾ ಅನುಪಾತದ ಆಧಾರದಲ್ಲಿ ಪ್ರಾತಿನಿಧ್ಯ.
ಜಾತಿ ಗಣತಿಯು ಆಳವಾಗಿ ಬೇರೂರಿರುವ ಅನ್ಯಾಯದ ಮನಸ್ಥಿತಿಯನ್ನು ತೊಡೆದುಹಾಕಲು ಮತ್ತು ಭಾರತೀಯ ರಾಜಕೀಯದಲ್ಲಿ ಪೂರ್ಣ ನ್ಯಾಯವನ್ನು ಸಾಧಿಸಲು ಮತ್ತು ಕಾನೂನು ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನನ್ನು ಸಮಾನ ಹಾದಿಯಲ್ಲಿ ಇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲ ಹೆಜ್ಜೆಯಾಗಿದೆ. ಎಲ್ಲರಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣದಲ್ಲಿ ಪ್ರಕ್ರಿಯೆಯಲ್ಲಿ ಸಮಾನ ಪಾಲನ್ನು ಒದಗಿಸುವ ವಿಧಾನವಾಗಿರುವಂತಹ ‘ ಅನುಪಾತ ಆಧಾರಿತ ಪ್ರಾತಿನಿಧ್ಯ ‘ ವ್ಯವಸ್ಥೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕಾಗಿದೆ. ಸಮಾನತೆಯ ರಾಜಿರಹಿತ ಜಾರಿಯಿಂದ ದೇಶದಲ್ಲಿ ಮತ್ತು ಸಮಾಜದಲ್ಲಿ ಖಂಡಿತವಾಗಿಯು ನ್ಯಾಯ ಹಾಗೂ ಶಾಂತಿಯನ್ನು ಶಾಶ್ವತವಾಗಿ ಸ್ಥಾಪಿಸುತ್ತದೆ.
ಮೊಹಮ್ಮದ್ ಇಲಿಯಾಸ್ ತುಂಬೆ
(ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ)
ಒಡಿಶಾದ ಕಟಕ್‌ನಲ್ಲಿ ದುರ್ಗಾ ಪೂಜೆಯ ವಿಗ್ರಹ ಮೆರವಣಿಗೆ ಸಮಯದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಮಾಡಿದ ಹಿಂಸಾಚಾರ ಅತ್ಯಂತ ಆತಂಕಕಾರಿ…
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನ ಪಟ್ಟ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್…
کے․جی․ ہلّی اور ڈی․جی․ ہلّی مقدمے میں گرفتار دو افراد کوسپریم کورٹ نے ضمانت منظور…
ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ…
عبد الحنان ریاستی نائب صدر - ایس۔ ڈی۔ پی۔ آئی ہے بنگلور، 5 اکتوبر: توانائی…