feature

National Girl Child Day

National Girl Child Day is a crucial reminder that, just like water is essential for human survival, women play an equally vital role. It is disheartening to acknowledge that, in the 21st century, there are still cruel individuals who resort to killing female children in the womb. Let us unite as a voice for girl child rights and concentrate on building a brighter future by providing them with quality education.

admin

Recent Posts

ಸುದ್ದಿಗೋಷ್ಠಿ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಕೃತ್ಯಗಳು ದೇಶ ಕಂಡ ಅತ್ಯಂತ ಗಂಭೀರ ಪ್ರಕರಣ, ರಾಜ್ಯ ಸರಕಾರದ ನಿರ್ಲಕ್ಷ್ಯ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ಸುದ್ದಿಗೋಷ್ಠಿಯಲ್ಲಿ SDPI ರಾಜ್ಯ ಉಪಾಧ್ಯಕ್ಷೆ ಶಾಹಿದಾ ತನ್ನೀಮ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಎಸ್, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್‌ ರೋಡ್ರಿಗಸ್, ನಗರ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಕ್ಟರ್ ಬೆಳ್ತಂಗಡಿ ಉಪಸ್ಥಿತರಿದ್ದರು.
#SDPIKarnataka #pressconference #dharmasthala #Mangalore

5 hours ago

ಧರ್ಮಸ್ಥಳದಲ್ಲಿ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ದೇಶ ಕಂಡ ಅತೀ ಗಂಭೀರ ಪ್ರಕರಣ  – ಹೈಕೋರ್ಟ್‌ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಎಸ್‌ಐಟಿ ತನಿಖೆಗೆ SDPI ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪ್ರಮುಖ ತೀರ್ಥಕ್ಷೇತ್ರವಾದ  ಧರ್ಮಸ್ಥಳ ದಲ್ಲಿ  2012 ರಲ್ಲಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ನಡೆಯಿತು. ಆಗ ಸೌಜನ್ಯ ದ್ವಿತೀಯ ಪಿಯು ವಿದ್ಯಾಭ್ಯಾಸ ಮಾಡುತ್ತಿದ್ದಳು. ಅದಕ್ಕೂ ಮೊದಲು ಅಂದರೆ 80 ರ ದಶಕದಿಂದ ಧರ್ಮಸ್ಥಳ ಪರಿಸರದಲ್ಲಿ ಹಲವಾರು  ಹೆಣ್ಣು ಮಕ್ಕಳ, ಮಹಿಳೆಯರ  ಶವಗಳು ನೇತ್ರಾವತಿ ನದಿಯಲ್ಲಿ   ತೇಲುವುದು ಸಾಮಾನ್ಯ ಎಂಬ ರೀತಿಯಲ್ಲಿತ್ತು, ಯುವತಿಯರ ಸಾವು ಸಂಭವಿಸಿದಾಗ ಅದು ಆತ್ಮಹತ್ಯೆ ಅಥವಾ ಅಸಹಜ ಸಾವು ಎಂದು ಹೇಳಿ ಫೈಲ್ ಕ್ಲೋಸ್ ಮಾಡಿ ಬಿಡುತ್ತಿದ್ದರು , ಆದರೆ ಧರ್ಮಸ್ಥಳ ದೇವಳದ ಒಡೆತನದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ  ಸೌಜನ್ಯಳ ಅತ್ಯಾಚಾರ, ಕೊಲೆಯ ನಂತರ ಈ ವಿಚಾರದಲ್ಲಿ ಧರ್ಮಸ್ಥಳದಲ್ಲಿ ಆರಂಭಗೊಂಡ ಪ್ರತಿಭಟನೆಯ ಕಿಚ್ಚು ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ, ಸೌಜನ್ಯ ಕೊಲೆ  ವಿರೋಧಿ ಹೋರಾಟದ ನಂತರ ಧರ್ಮಸ್ಥಳದಲ್ಲಿ ನಡೆಯುವ ಅನುಮಾನಾಸ್ಪದ ಸಾವುಗಳಲ್ಲಿ ವಿಪರೀತ ಪ್ರಮಾಣದಲ್ಲಿ ಕಡಿಮೆ ಆಗಿತ್ತು, ಇದರಿಂದ ಧರ್ಮಸ್ಥಳದ ಪ್ರಭಾವಿಗಳ ಮೇಲೆ ಸಾರ್ವಜನಿಕರ ಸಂಶಯ ಇನ್ನಷ್ಟು ಹೆಚ್ಚಾಗ ತೊಡಗಿತು

ಕರ್ನಾಟಕದಲ್ಲಿ ಧರ್ಮಸ್ಥಳದ  ಈ ಎಲ್ಲಾ ಅತ್ಯಾಚಾರ, ಕೊಲೆಗಳ ಹಿಂದೆ ಪ್ರಭಾವಿ ಕುಟುಂಬ ಇರುವುದು ಹಲವಾರು ಘಟನೆಗಳಿಂದ  ಸಾಕ್ಷ್ಯಗಳ ಸಮೇತ ಬಯಲಾಗುತ್ತಿದೆ  ಈ ಹಿಂದೆಯೇ, ಈ ಕೃತ್ಯಗಳ ಹಿಂದೆ ಇವರ ಪ್ರಭಾವಿ ಕುಟುಂಬ ಇರುವುದು ತಿಳಿದಿತ್ತು. ಆದರೆ ಇವರು ರಾಜಕೀಯವಾಗಿ ಮತ್ತು ಆರ್ಥಿಕವಾಗಿ  ಬಲಾಢ್ಯರಾಗಿರುವುದರಿಂದ  ಹಾಗೂ ಸೂಕ್ತ ಸಾಕ್ಷ್ಯಗಳು ಇಲ್ಲದಿರುವುದರಿಂದ ಇವರ ಮೇಲೆ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ ಮತ್ತು ದೊಡ್ಡ ಭಕ್ತರ ಗುಂಪು ಇವರ ಮೇಲೆ ಆರೋಪ ಮಾಡಿದವರ ಮೇಲೆ ದಾಳಿ ಮಾಡುತ್ತಿತ್ತು. ಸೌಜನ್ಯ ಪರ  ಹೋರಾಟಗಾರರಿಗೆ ಪೊಲೀಸರ ಮೂಲಕ ಮತ್ತು ತನ್ನ ಅನುಯಾಯಿಗಳ ಮೂಲಕ ಧರ್ಮಸ್ಥಳದ ದಣಿಗಳು ಕಿರುಕುಳ ನೀಡುತಿದ್ದರು  . ಸ್ಥಳೀಯ ಪೊಲೀಸರು ಅವರ  ಕುಟುಂಕ್ಕೆ  ಬೆಂಗಾವಲಾಗಿ ನಿಂತಿದ್ದರು. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಧರ್ಮಸ್ಥಳದ ಪ್ರಭಾವಿಗಳಿಗೆ  ವಿದೇಯರಾಗಿದ್ದರು. ಯಾವ ಜನಪ್ರತಿನಿಧಿಯು, ಯಾವ  ಸರ್ಕಾರಗಳು  ಇವರನ್ನು ಎದುರು ಹಾಕಿಕೊಳ್ಳುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ  ಎಲ್ಲಾ ರಾಜಕಾರಣಿಗಳು ಇವರ ಕೃಪೆಯನ್ನು ಬೇಡುತ್ತಿದ್ದರು ಮತ್ತು ಇವರ ಪಾದಸೇವೆಯಲ್ಲಿ ತೊಡಗಿದ್ದರು,  ಸೌಜನ್ಯ ಕೊಲೆ  ವಿರುದ್ಧ ಹೋರಾಟಗಳಿಂದ ಪ್ರೇರಿತರಾದ ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳು ನಡೆಸುತ್ತಿದ್ದ ಹೋರಾಟದಿಂದ ಇತ್ತೀಚೆಗೆ ಧರ್ಮಸ್ಥಳದ ದಣಿಗಳ ವಿರುದ್ಧ ಜನ ಸಾಮಾನ್ಯರು ಸ್ವಲ್ಪ ಮಟ್ಟದಲ್ಲಿ ಮಾತನಾಡಲು ಧೈರ್ಯ ತೋರಿದರು, ಅದರ ಪರಿಣಾಮ

ಧರ್ಮಸ್ಥಳದಲ್ಲಿ ಕಳೆದ 20 ವರ್ಷಗಳಿಂದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪಾಪ ಪ್ರಜ್ಞೆಯಿಂದ ಪೊಲೀಸ್ ದೂರು  ದೂರು ನೀಡಿದ್ದಾನೆ. ಆ ದೂರಿನಲ್ಲಿ ನೂರಕ್ಕೂ ಹೆಚ್ಚು ಹೆಣಗಳನ್ನು ನಾನು ಹೂತಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.  ಆ ಹೆಣಗಳನ್ನು ಹೂಳಲು ನಿರ್ದೇಶನ ಕೊಡುತ್ತಿದ್ದವರು ಯಾರು, ಎಲ್ಲೆಲ್ಲಿ ಹೂತಿದ್ದೇನೆ  ಎಂದು ತೋರಿಸಲು ಸಿದ್ಧ, ತಾನು ಹೂತಿದ್ದ ಶವಗಳಲ್ಲಿ ಯುವತಿಯರ ಶವಗಳೇ ಹೆಚ್ಚು, ಅನೇಕ ಮಹಿಳಾ ಶವಗಳು ಬಟ್ಟೆ ಅಥವಾ ಒಳ ಉಡುಪುಗಳಿಲ್ಲದೆ ಇರುತ್ತಿತ್ತು, ಲೈಂಗಿಕ ಆಕ್ರಮಣ ಮತ್ತು ಹಿಂಸೆಯ ಸ್ಪಷ್ಟ ಲಕ್ಷಣಗಳು  ಆ ಎಲ್ಲಾ ಶವಗಳ ಮೇಲೂ ಕಾಣುತಿತ್ತು,  ದೇಹಗಳ ಮೇಲೆ ಹಿಂಸೆಯನ್ನು ಸೂಚಿಸುವ ಗಾಯಗಳು ಅಥವಾ ಕತ್ತು ಹಿಸುಕುವಿಕೆಯು ಕಂಡು ಬರುತ್ತಿದ್ದವು ಎಂದು ಕೆಲವು ನಿಖರ ಘಟನೆಗಳನ್ನು ವಿವರಿಸಿದ್ದಾನೆ, ಈ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಹೇಳಿದಾಗ ನನ್ನ ಮೇಲೆ ಹಲ್ಲೆ ಮಾಡಲಾಯಿತು. ಒಂದು ಶವವನ್ನು ಹೊರ ತೆಗೆದು ಅದರ ಪೋಟೋವನ್ನು ಸಾಕ್ಷಿ ಆಗಿ ನೀಡಿದ್ದಾನೆ. ಇನ್ನು ಹಲವು ವಿವರಗಳನ್ನು ದೂರಿನಲ್ಲಿ ನೀಡಿದ್ದಾನೆ. ತನಗೆ ಈಗ ಪಾಪಪ್ರಜ್ಞೆ ಕಾಡುತ್ತಿದೆ, ತನ್ನ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೊಡುವುದಾದರೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ತಾನು  ಸಿದ್ಧನಿದ್ದೇನೆ  ಎಂದು ದೂರಿನಲ್ಲಿ ತಿಳಿಸಿದ್ದಾನೆ,  ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಜುಲೈ 4 ರಂದು ವಕೀಲರ ಮೂಲಕ ದೂರು ನೀಡಿರುತ್ತಾನೆ. ಅದರಂತೆ ದೂರುದಾರ ಜುಲೈ 11 ರಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರಾಗಿದ್ದಾನೆ.
ಎಫ್‌.ಐ.ಆರ್‌ ದಾಖಲಾಗಿ ಏಳು ದಿನಗಳು ಕಳೆದರೂ  ಹೂತು ಹಾಕಿದ್ದ ಜಾಗಕ್ಕೆ ದೂರುದಾರರನ್ನು ಕರೆದುಕೊಂಡು ಹೋಗಿ, ಸ್ಥಳ ಪರಿಕ್ಷೆ ನಡೆಸಿ, ಶವಗಳನ್ನು ಹೊರ ತೆಗೆದಿಲ್ಲ, ಮುಂದೆ ಆಗಬೇಕಿದ್ದ ತನಿಖಾ ಪ್ರಕ್ರಿಯೆಗಳನ್ನು ಪೊಲೀಸರು ಇದುವರೆಗೂ ಮಾಡಿಲ್ಲ. ಪೊಲೀಸರು ತನಿಖೆಯ ವೇಗವನ್ನು ಚುರುಕುಗೊಳಿಸಬೇಕಿದೆ. ಈ ಊರ ಘಟನೆಗಳ ಹಿಂದೆ ಧರ್ಮಸ್ಥಳದಲ್ಲಿರುವ ಪ್ರಭಾವಿ ಕುಟುಂಬ ಎಂಬ ಸಂಶಯ ದಟ್ಟವಾಗತೊಡಗಿದೆ.
ಆದ್ದರಿಂದ ಸರಕಾರ ಯಾವ ಪ್ರಭಾವಿಗಳ ಒತ್ತಡಕ್ಕೂ ಮಣಿಯದೆ *ಧರ್ಮಸ್ಥಳದ ಈ ಘಟನೆ ಅತೀ ಗಂಭೀರ ಪ್ರಕರಣವಾಗಿ ದಾಖಲಿಕೊಂಡು ಹೈಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನುರಿತ, ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು.*
ಸುಮಾರು ನಲುವತ್ತು ವರ್ಷಗಳಿಂದ ಐನೂರಕ್ಕೂ ಹೆಚ್ಚು ಅನುಮಾನಾಸ್ಪದ ಸಾವುಗಳು ಈ ಪರಿಸರದಲ್ಲಿ  ಸಂಭವಿಸಿದೆ , ಹಂತ ಹಂತವಾಗಿ ಇದನ್ನು ತನಿಖೆ ನಡೆಸಬೇಕು .  ಬಹುತೇಕ ಪ್ರಕರಣದಲ್ಲಿ ಸ್ಥಳೀಯ ಅಧಿಕಾರಿಗಳು ಅರೋಪಿಗಳೊಂದಿಗೆ ಶಾಮೀಲಾಗಿ ಸಾಕ್ಷ್ಯ ನಾಶ ಪಡಿಸಿದ ಆರೋಪಗಳಿವೆ  ಅ ಎಲ್ಲಾ ಅಧಿಕಾರಿಗಳ ಮೇಲೆ ಸರಕಾರ ಕಠಿಣ ಕಾನೂನು ಕ್ರಮ ಕೈ ಗೊಳ್ಳಬೇಕು, ಧಾರ್ಮಿಕ ಕ್ಷೇತ್ರದಲ್ಲಿ ಪ್ರಭಾವಿಗಳು ತನ್ನ ಅಧಿಕಾರ ದುರುಪಯೋಗ ಪಡಿಸಿ ನಡೆಸುವ ದುಷ್ಕ್ರತ್ಯಗಳಿಗೆ ಕಡಿವಾಣ ಮಾಡುವ ನಿಟ್ಟಿನಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸರಕಾರವನ್ನು ಪತ್ರಿಕಾ ಗೋಷ್ಠಿಯ ಮೂಲಕ ಒತ್ತಾಯ  ಮಾಡುತ್ತಿದೆ.

ಸ್ಥಳ : ಬೆಂಗಳೂರು
ದಿನಾಂಕ: 14-07-2025

ಪತ್ರಿಕಾಗೋಷ್ಠಿ ನಡೆಸುವವರು

ಅಬ್ದುಲ್ ಮಜೀದ್ ,
SDPI ರಾಜ್ಯಾಧ್ಯಕ್ಷರು
ಬಿ. ಆರ್. ಭಾಸ್ಕರ್ ಪ್ರಸಾದ್,
SDPI ರಾಜ್ಯ ಪ್ರಧಾನ ಕಾರ್ಯದರ್ಶಿ,

ಉಪಸ್ಥಿತಿ:-
1) ಮುಜಾಹಿದ್ ಪಾಷಾ, ರಾಜ್ಯ ಪ್ರಧಾನ ಕಾರ್ಯದರ್ಶಿ.
2) ಮೊಹಮ್ಮದ್ ಜಾವೇದ್ ಆಜಮ್,
ಜಿಲ್ಲಾಧ್ಯಕ್ಷರು ಬೆಂಗಳೂರು ಉತ್ತರ
3) ಸಲೀಂ ಅಹಮದ್ ಜಿಲ್ಲಾಧ್ಯಕ್ಷರು ಬೆಂಗಳೂರು ದಕ್ಷಿಣ.

1 day ago

ಎಂಸಿಸಿ ಚುನಾವಣಾ ಸಂಬಂಧಿಸಿ SDPI ಮೈಸೂರು ಜಿಲ್ಲಾ ನಾಯಕರೊಂದಿಗೆ ಚುನಾವಣೆ ಪೂರ್ವ ತಯಾರಿ ಸಭೆ

ಮೈಸೂರು, ಜುಲೈ 12: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮೈಸೂರು ಜಿಲ್ಲಾ ಕಾರ್ಯದರ್ಶಿ ಮಂಡಳಿ ಹಾಗೂ ವಿಧಾನಸಭಾ…

2 days ago

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ SDPI ಕರ್ನಾಟಕ ಮುಖಂಡರ ಭೇಟಿ

ಬಾಗಲಕೋಟೆ ಜಿಲ್ಲೆ ಮುಧೋಳ ನಗರಕ್ಕೆ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್‌ ಮೈಸೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿಗಳಾದ…

4 days ago

ನ್ಯಾಯವ್ಯವಸ್ಥೆಯ ಮೇಲೆ ಆಕ್ರಮಣ: ಎಸ್‌ಜಿ ತುಷಾರ್ ಮೆಹ್ತಾ ಅವರ ಹೇಳಿಕೆಗೆ ಬಿಎಂ ಕಾಂಬ್ಳೆ ಖಡಕ್ ಪ್ರತಿಕ್ರಿಯೆ

2025ರ ಜುಲೈ 9ರಂದು 2020ರ ದೆಹಲಿ ಹಿಂಸಾಚಾರದ "ವಿಸ್ತೃತ ಸೂತ್ರಧಾರೆ" ಪ್ರಕರಣದ ವಿಚಾರಣೆಯಲ್ಲಿ, ದೆಹಲಿ ಹೈಕೋರ್ಟ್‌ ಎದುರು ಕೇಂದ್ರ ಸರಕಾರದ…

4 days ago