feature

ಕಾರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ದೊರೆತಿರುವುದು ಸ್ವಾಗತಾರ್ಹ

ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ಮುಂಗೇರಿ ಲಾಲ್ ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗಗಳ ಜನರಿಗೆ, ಅದರಲ್ಲಿ ಅತಿ ಹಿಂದುಳಿದಿದ್ದ ಮುಸ್ಲಿಮರನ್ನೂ ಸೇರಿಸಿ ಶೇ. 26% ಮೀಸಲಾತಿ ಒದಗಿಸಿ ಕೊಟ್ಟವರು ಅಂದಿನ ಬಿಹಾರದ ಮುಖ್ಯ ಮಂತ್ರಿಯಾಗಿದ್ದ ಕಾರ್ಪುರಿ ಠಾಕೂರ್. ಆ ಮೂಲಕ ಕರ್ನಾಟಕದಲ್ಲಿ 2B ಮೀಸಲಾತಿಗೆ ಮತ್ತು ದೇಶದ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರಗಳಿಗೆ ಪ್ರೇರಣೆಯಾದರು. ಮುಂದೆ ಮಂಡಲ್ ಕಮಿಷನ್ ನೇಮಕಕ್ಕೂ ಇದು ಪ್ರೇರಣೆಯಾಯಿತು. ಅದೇ ಕಾರಣಕ್ಕೆ ಅಂದು RSS ನಾಯಕರು ಅವರನ್ನು ಬಹಿರಂಗವಾಗೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅವರ ತಾಯಿಯ ಬಗ್ಗೆ ಕೆಟ್ಟ, ಕೆಟ್ಟ ಘೊಷಣೆಗಳನ್ನು ಬೀದಿ, ಬೀದಿಗಳಲ್ಲಿ ಕೂಗಿದ್ದರು. ಇಂದು ಮಹಾ ಚುನಾವಣೆಯಲ್ಲಿ ಬಿಹಾರದ ಜನರ ಮತ ಸೆಳೆಯುವ ಉದ್ದೇಶದಿಂದ ಮೋದಿ ಸರ್ಕಾರ ಅವರಿಗೆ ಭಾರತ ರತ್ನ ಘೋಷಿಸಿದೆ. ಬಿಜೆಪಿಯ ತಂತ್ರ ಏನೇ ಇರಲಿ. ಕಾರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ದೊರೆತಿರುವುದು ಭಾರತದ ಸಾಮಾಜಿಕ ನ್ಯಾಯಕ್ಕಾಗಿ ದುಡಿ ಒಬ್ಬ ಧೀಮಂತ ವ್ಯಕ್ತಿಗೆ ಸಂದ ಗೌರವ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸ್ವಾಗತಿಸುತ್ತದೆ.

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

2 months ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

2 months ago