ಸಂಘಪರಿವಾರದ ಗುರಿ ಅಧಿಕಾರ ಮತ್ತು ಹಣ ಗಳಿಸುವುದಾಗಿದೆ. ಅದನ್ನು ಸಾಧಿಸಲು ಅವರು ತೋರುವ ಧರ್ಮನಿಷ್ಠೆ ಮತ್ತು ಭಕ್ತಿ ಕೇವಲ ಮುಖವಾಡವಾಗಿದೆ. ಬಾಬರಿ ಮಸೀದಿಯ ಅತಿಕ್ರಮಿಸಿದ ಭೂಮಿಯಲ್ಲಿ ನಿರ್ಮಿಸಿಲಾದ ಕಟ್ಟಡದ ಉದ್ಘಾಟನೆಯನ್ನು ಸಂಘಪರಿವಾರ ರಾಷ್ಟ್ರೀಯ ಹಬ್ಬವೆಂಬಂತೆ ಬಿಂಬಿಸಿದೆ. ಇದೇ ಸಂದರ್ಭದಲ್ಲಿ, ದೇವಾಲಯ ಎಂದು ಕರೆಯಲ್ಪಡುವ ಕಟ್ಟದ ಸುತ್ತಮುತ್ತಲ ಜೌಗು ಭೂಮಿಯ ದಂಧೆಯ ಸುದ್ದಿಗಳು ಹೊರಬಿದ್ದಿವೆ.
ಬಾಬರಿ ಮಸೀದಿಯ ಭೂಮಿಯಲ್ಲಿ ನಿರ್ಮಿಸಲಾಗಿರುವ ದೇವಾಲಯವನ್ನು ಜನಾಂಗೀಯ ದ್ವೇಷಕ್ಕೆ ಬಳಸಿಕೊಂಡು ಆ ಮೂಲಕ ಅಧಿಕಾರವನ್ನು ಹಿಡಿಯಲು ಸಂಘಪರಿವಾರ ಮಾಡಿಕೊಂಡಿರುವ ಒಂದು ರಾಜಕೀಯ ತಂತ್ರವಾಗಿದೆ. ಅದರ ಉದ್ಘಾಟನೆಯನ್ನು ವರ್ಣರಂಜಿತ ಮತ್ತು ಸದ್ದಿನೊಂದಿಗೆ ನಡೆಸಿದ್ದರ ಹಿಂದೆ ಆ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಷಡ್ಯಂತ್ರ ಅಡಗಿದೆ. ಇದು ಸಂಘ ಪರಿವಾರಕ್ಕೆ ಬಹಳ ದೊಡ್ಡ ಲಾಭವನ್ನು ತಂದುಕೊಡುವ ಉದ್ದೇಶ ಹೊಂದಿದೆ. ಅದರಿಂದ ದೊಡ್ಡಮಟ್ಟದ ಆರ್ಥಿಕ ಲಾಭ ಪಡೆಯಲು ಹೊಸ ದೇವಸ್ಥಾನದ ಸುತ್ತಲಿನ ಪ್ರದೇಶದ ಭೂಮಿಯನ್ನು ಬಂಡವಾಳಶಾಹಿ ಪರ ಬಿಜೆಪಿ ನಾಯಕರ ನೇತೃತ್ವದ ಗುಂಪು ಅದಾನಿಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಿರುವುದು ಅಂತಹ ಪ್ರಯತ್ನಗಳಲ್ಲಿ ಒಂದಾಗಿದೆ. ಹೊಸ ದೇವಸ್ಥಾನದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಮಜ್ಹಾ ಜಮ್ತಾರಾದಲ್ಲಿ ಒಂದು ಹೆಕ್ಟೇರ್ಗಿಂತಲೂ ಹೆಚ್ಚು ವಿಸ್ತೀರ್ಣದ ನೀರಾವರಿ ಭೂಮಿಯನ್ನು ಆರಂಭದಲ್ಲಿ ಇಬ್ಬರು ಬಿಜೆಪಿ ನಾಯಕರ ಒಡೆತನದ ಟೈಮ್ ಸಿಟಿ ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ಖರೀದಿಸಿತು. ಅವರಲ್ಲಿ ಒಬ್ಬರು ಈ ಮೊದಲು ಶಾಸಕರಾಗಿದ್ದವರು. ಬಡ ರೈತರನ್ನು ವಂಚಿಸಿ ಮಾರುಕಟ್ಟೆ ಬೆಲೆಗಿಂದ ಕಡಿಮೆ ಬೆಲೆಯಾದ 1.13 ಕೋಟಿಗೆ ಅದನ್ನು ಖರೀದಿಸಿ ನಂತರ ಅದನ್ನು ಅದಾನಿ ಸಮೂಹಕ್ಕೆ 3.57 ಕೋಟಿಗೆ ಮಾರಾಟ ಮಾಡಲಾಯಿತು.
ಅದಾನಿ ಸಮೂಹವು ಈ ಭೂಮಿಯನ್ನು ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿಸಿರುವುದು ಆ ಭೂಮಿಯನ್ನು ರಕ್ಷಿಸಲು ಅಲ್ಲ, ಆದರೆ ವ್ಯಾಪಾರ ಉದ್ದೇಶಕ್ಕಾಗಿ ಎಂಬುದು ಖಚಿತವಾಗಿದೆ. ಈ ಒಪ್ಪಂದದಲ್ಲಿ ಲಾಭ ಗಳಿಸಿದವರೆಲ್ಲ ಸಂಘ ಪರಿವಾರದ ನಾಯಕರು ಮತ್ತು ಅದರ ಜೊತೆ ಕೈ ಜೋಡಿಸಿರುವ ಕ್ರೂರಿ ಬಂಡವಾಳಶಾಹಿಗಳು. ಕಳೆದುಕೊಂಡವರು ತಮ್ಮ ಜೀವನೋಪಾಯಕ್ಕಾಗಿ ಈ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಬಡ ರೈತರು.
ಈ ಸಂದರ್ಭದಲ್ಲಿ ಡಿಮಾನಿಟೈಸೇಶನ್ನ ಪ್ರಮುಖ ಆರ್ಥಿಕ ಲಾಭ ಪಡೆದವರು ಬಿಜೆಪಿ ನಾಯಕರು ಎಂದು ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ.
ಟೈಮ್ ಸಿಟಿ ಅದಾನಿ ಗ್ರೂಪ್ಗೆ ಮಾರಾಟ ಮಾಡಿರುವ ಮಝಾ ಜಮ್ತಾರಾದಲ್ಲಿನ ಜೌಗುಭೂಮಿಯಲ್ಲಿ ಭೂಮಿಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳಿಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಮಂಡಳಿಯ ನಿಷೇಧ ಹೇರಿದೆ. ಅಲ್ಲಿ ಅದಾನಿ ಸಮೂಹ ಆ ನಿಷೇಧವನ್ನು ಉಲ್ಲಂಘಿಸಿ ಮಂದಿರದ ಪರಿಸರದ ಸೂಕ್ಷ್ಮ ಪ್ರದೇಶದಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಲು ಕಾಯುತ್ತಿರುವ ಪ್ರತಿಕೃತಿಯಂತೆ ಕಾಯುತ್ತ ಕುಳಿತಿದೆ.
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ