ಕೆ.ಎಂ. ಶರೀಫ್ ಸಾಬ್
01.09.1964-22.12.2020
25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು ಪ್ರಶ್ನೆ ಮಾಡುವವರು ತಡೆಯುವವರು ಯಾರು ಇರಲಿಲ್ಲ. ಆಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ಧ್ವನಿ ಇಲ್ಲದ ಸಮುದಾಯದ ಜೊತೆ ದೃಢವಾಗಿ ನಿಂತವರು ಕೆ.ಎಂ.ಶರೀಫ್ . ನಿರಂತರ ದೌರ್ಜನ್ಯಕ್ಕೊಳಗಾಗುತ್ತಿದ್ದ ಸಮುದಾಯಗಳನ್ನು ಜಾಗೃತಿಗೊಳಿಸಿ ಸಂಘಟಿತರಾಗುವಂತೆ ಮಾಡುವಲ್ಲಿ ಮುತುವರ್ಜಿ ವಹಿಸಿದರು. ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿ, ಬದಲಾವಣೆಗೆ ಮುನ್ನುಡಿ ಬರೆದರು. ನಂತರದ ದಿನಗಳಲ್ಲಿ ನಾಯಕತ್ವ ಬೆಳೆಯುತ್ತಲೇ ಹೋಗಿ, ಜನಪರ ಚಳುವಳಿಗಳಲ್ಲಿ ಉನ್ನತ ಸ್ಥಾನವನ್ನು ನಿಭಾಯಿಸಿದರು. ಜವಾಬ್ದಾರಿಗಳು ಹೆಚ್ಚಾದಾಗ ಕೆ.ಎಂ.ಶರೀಫ್ ಅವರು, ಆರೋಗ್ಯ ಹದಗೆಡುತ್ತಿದ್ದ ನಡುವೆಯೂ ರಾಷ್ಟ್ರಾದ್ಯಂತ ಮುಸ್ಲಿಮರ ಮಾತ್ರವಲ್ಲ ಶತಮಾನಗಳಿಂದ ದೌರ್ಜನ್ಯಕ್ಕೊಳಗಾದ ಮತ್ತು ಮೂಲೆಗೆಸೆಯಲ್ಪಟ್ಟವರ ಕಣ್ಣೀರು ಒರೆಸುವ ಮತ್ತು ನ್ಯಾಯಕ್ಕಾಗಿ ಧ್ವನಿ ಗೂಡಿಸಿದರು. ಸಂತ್ರಸ್ತ ಜನರಲ್ಲಿ ಆತ್ಮಸ್ಥೆರ್ಯ ತುಂಬಿದರು. ಸರ್ಕಾರಗಳ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ನಡೆಗಳನ್ನು ವಿರೋಧಿಸುತ್ತಲೇ ಬಂದರು. ಸಂಘಪಾರಿವಾರದ ಸಂಚುಗಳನ್ನು, ಅದರ ಆಳ ಅಗಲಗಳನ್ನು ಜನರಿಗೆ ಪರಿಚಯಿಸಿ ಜಾಗೃತಿ ಮೂಡಿಸಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಹಿಡಿತಹೊಂದಿದ್ದ ಕೆ.ಎಂ.ಶರೀಫ್ ಸಾಬ್ ಉತ್ತಮ ಚಿಂತಕ, ಹೋರಾಟ ಗಾರ, ವಿಮರ್ಶೆಗಾರ ಮತ್ತು ಒಳ್ಳೆಯ ಭಾಷಣಗಾರ ಕೂಡ. ಹಲವು ನಾಯಕರನ್ನು ಸಮುದಾಯಕ್ಕೆ ನೀಡುವಲ್ಲಿ ಸ್ಫೂರ್ತಿದಾಯಕರೂ ಆಗಿದ್ದರು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಕೆ. ಎಂ. ಶರೀಫ್ ನಮ್ಮೊಂದಿಗೆ ಇಂದು ಇಲ್ಲದಿದ್ದರೂ ಅವರು ನೀಡಿದ ಮಾರ್ಗದರ್ಶನ, ತೋರಿದ ದಾರಿ, ಮೂಡಿಸಿದ ಜಾಗೃತಿ ನಮ್ಮ ಪಕ್ಷಕ್ಕೆ ಇಂದಿಗೂ ಸ್ಫೂರ್ತಿಯಾಗಿದೆ. ಅವರು ಅಗಲಿದ ಈ ದಿನದಲ್ಲಿ ಅವರನ್ನು ಸ್ಮರಿಸುತ್ತಿದ್ದೇವೆ.
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…